ಮಡಿಕೇರಿ/ಭಾಗಮಂಡಲ, ಜು. ೧೭: ಕಾರ್ಮಿಕರು ಕೆಲಸ ಮಾಡುವ ಸಂದರ್ಭ ಬರೆಕುಸಿತಗೊಂಡು ನಿಲ್ಲಿಸಿದ್ದ ಜಲ್ಲಿ ಹಾಗೂ ಸಿಮೆಂಟ್ ಮಿಶ್ರಣ ಮಾಡುವ ಲಾರಿ ಜಾರಿದ ಪರಿಣಾಮ ಈರ್ವರು ಕಾರ್ಮಿಕರು ಮಣ್ಣಿನಲ್ಲಿ ಸಿಲುಕಿಕೊಂಡಿರುವ ಘಟನೆ ಮಡಿಕೇರಿ/ಭಾಗಮಂಡಲ, ಜು. ೧೭: ಕಾರ್ಮಿಕರು ಕೆಲಸ ಮಾಡುವ ಸಂದರ್ಭ ಬರೆಕುಸಿತಗೊಂಡು ನಿಲ್ಲಿಸಿದ್ದ ಜಲ್ಲಿ ಹಾಗೂ ಸಿಮೆಂಟ್ ಮಿಶ್ರಣ ಮಾಡುವ ಲಾರಿ ಜಾರಿದ ಪರಿಣಾಮ ಈರ್ವರು ಕಾರ್ಮಿಕರು ಮಣ್ಣಿನಲ್ಲಿ ಸಿಲುಕಿಕೊಂಡಿರುವ ಘಟನೆ ಬದುಕುಳಿದಿದ್ದಾರ? ಎಂದು ತಿಳಿಯ ಬೇಕಾಗಿದೆ. ಇವರು ಮೃತಪಟ್ಟಿದ್ದಾರೆ ಎಂದು ದೃಢಪಟ್ಟಲ್ಲಿ ಜಿಲ್ಲೆಯಲ್ಲಿ ಈ ವರ್ಷ ಪ್ರಕೃತಿ ವಿಕೋಪಕ್ಕೆ ಸಂಭವಿಸಿದ ಮೂರನೇ ಸಾವು ಇದಾಗಲಿದೆ.
ಲೋಕೋಪಯೋಗಿ ಇಲಾಖೆ ಯ ವತಿಯಿಂದ ತಡೆಗೋಡೆ ಕಾಮಗಾರಿ ನಡೆಸುತ್ತಿದ್ದ ಸಂದರ್ಭದಲ್ಲಿ ದುರ್ಘಟನೆ ಸಂಭವಿಸಿದೆ. ಸಂಜೆ ೫.೩೦ ರ ಸುಮಾರಿಗೆ ಲಾರಿಯಿಂದ ಜಲ್ಲಿ ಹಾಗೂ ಸಿಮೆಂಟ್ ಅನ್ನು ಮಿಶ್ರಣ ಮಾಡಿ ಪೈಪ್ ಮೂಲಕ ಪೂರೈಸುತ್ತಿ ರುವ ಸಂದರ್ಭ ಬರೆ ಜರಿದಿದೆ. ಪರಿಣಾಮ ಸುಮಾರು ೧೫ ರಿಂದ ೨೦ ಅಡಿ ಕೆಳ ಭಾಗಕ್ಕೆ ಲಾರಿ ಉರುಳಿದೆ. ಅಲ್ಲೇ ಕೆಲಸ ಮಾಡುತ್ತಿದ್ದ ಬಾಕಿ ಐವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಈರ್ವರು ಲಾರಿ ಹಾಗೂ ಮಣ್ಣಿನ ನಡುವೆ ಸಿಲುಕಿಕೊಂಡಿದ್ದಾರೆ.
ಘಟನೆ ತಿಳಿದು ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಕ್ರಮಕೈಗೊಂಡಿದ್ದು, ಲಾರಿ ಮೇಲೆತ್ತಲು ಕ್ರೇನ್‌ನ ಅವಶ್ಯಕತೆ ಇದೆ. ಆದರೆ, ಕತ್ತಲು ಹಾಗೂ ಮಳೆ ಇರುವ ಹಿನ್ನೆಲೆ ಕಾರ್ಯಾಚರಣೆಗೆ ತೊಡಕಾಯಿತು. ಅದಲ್ಲದೆ ಒಂದು ಕಾರು ತೆರಳಲು ಮಾತ್ರ ಮಾರ್ಗ ಇದ್ದು, ಕ್ರೇನ್ ಆಗಮಿಸಲು ಕೊಂಚ ಸಮಸ್ಯೆ ಸೃಷ್ಟಿಯಾಯಿತು. ಈ ಹಿನ್ನೆಲೆ ಮಿನಿ ಕ್ರೇನ್ ತೆರಳಲು ಅವಶ್ಯವಿರುವ ಜಾಗವನ್ನು ಮಾಡಲು ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ, ಕಾರ್ಮಿಕರು ಹಾಗೂ ಸ್ಥಳೀಯರು ಹರಸಾಹಸ ಪಡಬೇಕಾಯಿತು. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಭೇಟಿ ನೀಡಿದ್ದಾರೆ. ಸ್ಥಳದಲ್ಲಿನ ಘಟನೆಗಳನ್ನು ಅವಲೋಕಿಸಿದ
(ಮೊದಲ ಪುಟದಿಂದ) ಕೆಲವರ ಅನಿಸಿಕೆಯಂತೆ ಬಹುತೇಕ ಈ ಅವಘಡದಲ್ಲಿ ಸಿಲುಕಿಕೊಂಡವರು ದುರ್ಮರಣಗೊಂಡಿರುವುದಾಗಿ ಶಂಕೆ ವ್ಯಕ್ತಪಡಿಸಿದ್ದಾರೆ. ನೆನೆಗುದಿಗೆ ಬಿದ್ದಿದ್ದ ತಡೆಗೋಡೆ ಕಾಮಗಾರಿ ಕಳೆದ ತಿಂಗಳ ಮೂರನೇ ವಾರದಲ್ಲಿ ಆರಂಭವಾಗಿತ್ತು. ಇದಕ್ಕೂ ಮುನ್ನ ಅಡಿಪಾಯ ತೆಗೆದು ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು.