ವೀರಾಜಪೇಟೆ, ಜು. ೧೬: ಕರ್ನಾಟಕ-ಕೇರಳ ರಾಜ್ಯಗಳ ಗಡಿಯಲ್ಲಿ ವಾಸ ಮಾಡುವ ಗಿರಿಜನ ಹಾಡಿಯಲ್ಲಿ ಅಡುಗೆ ಒಲೆಯನ್ನು ವಿತರಿಸಲಾಯಿತು.

ಕೊಡಗು ಪೊನ್ನಂಪೇಟೆ ಮೂಲದ ‘ಎನ್‌ವೈರನ್‌ಮೆಂಟ್ ಅಂಡ್ ಹೆಲ್ತ್ ಫೌಂಡೇಶನ್ ಇಂಡಿಯ’ ಸಂಸ್ಥೆಯ ವತಿಯಿಂದ ವೀರಾಜಪೇಟೆ ತಾಲೂಕಿನ ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಕುಟ್ಟ ಗಿರಿಜನ ಹಾಡಿಯಲ್ಲಿ ವಾಸ ಮಾಡುವ ಕುಟುಂಬಗಳಿಗೆ ಉಚಿತವಾಗಿ ಹೊಗೆ ರಹಿತ ಅಡುಗೆ ಒಲೆಯನ್ನು ವಿತರಣೆ ಮಾಡಲಾಯಿತು.

ಈ ಸಂದರ್ಭ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಕರ್ನಲ್ ಚೆಪ್ಪುಡೀರ ಪಿ. ಮುತ್ತಣ್ಣ, ಸಂಸ್ಥೆಯು ಪರಿಸರ ಜಾಗೃತಿ ಮತ್ತು ಆರೋಗ್ಯ ಸಂಬAಧಿಸಿದAತೆ ಕಾರ್ಯಕ್ರಮಗಳನ್ನು ಸಮಾಜಕ್ಕೆ ನೀಡುತ್ತಾ ಬಂದಿದೆ. ಪ್ರಸ್ತುತ ಸ್ಥಳದಲ್ಲಿ ವಾಸ ಮಾಡುವ ಎಲ್ಲಾ ಕುಟುಂಬಗಳಿಗೆ ಲಾಕ್‌ಡೌನ್ ಸಂದರ್ಭ ಒಂದು ತಿಂಗಳವರೆಗೆ ಸಂಜೆಯ ಉಪಹಾರ ನೀಡಲಾಗಿದ್ದು, ತದನಂತರದಲ್ಲಿ ಮಳೆಗಾಲದಲ್ಲಿ ಉಪಯೋಗಿಸಲು ಕೊಡೆಗಳು ವಿತರಿಸಲಾಗಿದೆ. ಕುಟುಂಬಗಳಿಗೆ ಉಪಯೋಗವಾಗುವ ಹಿತದೃಷ್ಟಿಯಿಂದ ಅಲ್ಪ ಮಟ್ಟದಲ್ಲಿ ಕಟ್ಟಿಗೆ ಉಪಯೋಗಿಸಿ ಅಲ್ಪ ಪ್ರಮಾಣದಲ್ಲಿ ಹೊಗೆ ಹೊರಸೂಸುವ ಸುಮಾರು ರೂ. ೨,೭೫೦ ಬೆಲೆ ಬಾಳುವ ಅಡುಗೆ ಒಲೆಗಳನ್ನು ಒಟ್ಟು ೧೧ ಕುಟುಂಬಗಳಿಗೆ ವಿತರಿಸಿದ್ದೇವೆ. ಅರಣ್ಯದ ಸಂರಕ್ಷಣೆಯೊAದಿಗೆ ಅರಣ್ಯವಾಸಿಗಳ ಆರೋಗ್ಯದ ಬಗ್ಗೆ ಗಮನಹರಿಸುವುದು ಸಮಾಜದ ಕರ್ತವ್ಯವಾಗಿದೆ. ಅಲ್ಲದೆ ಇಲ್ಲಿನ ವಾಸಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಮುಖ್ಯ ಉದ್ದೇಶವಾಗಿದೆ. ಕಾರ್ಯಕ್ರಮಗಳ ಭಾಗವಾಗಿ ಹಲವು ಯೋಜನೆಗಳು ಮುಂದಿನ ದಿನಗಳಲ್ಲಿ ಅನುಷ್ಠಾನವಾಗಲಿದೆ ಎಂದು ಹೇಳಿದರು. ಈ ಸಂದರ್ಭ ಸಂಸ್ಥೆಯ ಬಲ್ಲಚಂಡ ರಾಯ್ ಬೋಪಣ್ಣ, ಮಲ್ಚೀರ ಶಾನ್ ಮತ್ತು ಪಟ್ಟಡ ದೇವ್ ಹಾಜರಿದ್ದರು.