ಕಡಂಗ, ಜು. ೧೬: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮದ ಕುಲ್ಲಚಂಡ ಭಾಗದಲ್ಲಿ ಕಳೆದ ಐದು ದಿನಗಳಿಂದ ವಿದ್ಯುತ್ ಸಂಪರ್ಕವಿಲ್ಲದೆ ಆ ಭಾಗದ ಟ್ರಾನ್ಸ್ಫಾರ್ಮರ್ ಹಾಳಾಗಿದ್ದು ಅಲ್ಲಿಯ ಜನರು ವಿದ್ಯುತ್ ಸಂಪರ್ಕ ಇಲ್ಲದೆ ತೊಂದರೆ ಅನುಭವಿಸುತ್ತಿದ್ದರು.

ಚೆಸ್ಕಾಂ ಅಧಿಕಾರಿಗಳು ನೂತನ ಟ್ರಾನ್ಸ್ಫಾರ್ಮರ್ ಅನ್ನು ಕುಲ್ಲಚಂಡ ಭಾಗದಲ್ಲಿ ಅಳವಡಿಸಿದರು. ಈ ಸಂದರ್ಭ ವಿದ್ಯುತ್ ನೌಕರರ ಜೊತೆ ಊರಿನ ಯುವಕರಾದ ಅಶೋಕ, ಅಂಬರೀಷ್, ಆನಂದ್, ವಿಠಲ, ಸಮೀರ್, ನೌಶಾದ್, ಸರ್ಫು ಮುಂತಾದವರು ಸಹಕರಿಸಿದರು.

-ನೌಫಲ್, ಕಡಂಗ