ಮಕ್ಕಂದೂರು ಗ್ರಾ.ಪಂ. ವ್ಯಾಪ್ತಿಯ ಮುಕ್ಕೋಡ್ಲುವಿನಲ್ಲಿ ಹರಿಯುವ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಹೊದಕಾನ - ಹೆಮ್ಮೆತ್ತಾಳುವಿಗೆ ಸಂಪರ್ಕ ಕಲ್ಪಿಡುವ ಸೇತುವೆಗೆ ಮರದ ದಿಮ್ಮಿಗಳು ಬಂದು ತುಂಬಿಕೊAಡಿದ್ದು, ಅಪಾಯದ ಸ್ಥಿತಿಯಲ್ಲಿದೆ. - ಕೊಟ್ಟಕೇರಿಯನ ಪ್ರದೀಪ್, ಮುಕ್ಕೋಡ್ಲು

ಸರ್ವರ್ ಸರಿ ಮಾಡಿ

ಪೊನ್ನಂಪೇಟೆ ಎಪಿಸಿಯಂ (ನ್ಯಾಯಬೆಲೆ ಅಂಗಡಿ)ನಲ್ಲಿ ಕಳೆದ ಮೂರು ದಿನಗಳಿಂದ ಸರ್ವರ್ ಡೌನ್ ಎಂದು ಪಡಿತರ ಸಾಮಗ್ರಿಗೆ ಬಂದ ಪಡಿತರ ಕಾರ್ಡುದಾರರನ್ನು ವಾಪಸು ಕಳುಹಿಸಲಾಗುತ್ತಿದೆ. ಕೆಲಸಕಾರ್ಯ ಬಿಟ್ಟು ಮೂರು ದಿನಗಳಿಂದ ಈ ನ್ಯಾಯಬೆಲೆ ಅಂಗಡಿಗೆ ಸುತ್ತುತ್ತಾ ಇರಬೇಕಾ? ಸಂಬAಧಪಟ್ಟವರಿಗೆ ಇದನ್ನು ಸರಿಮಾಡಿಕೊಡಬೇಕೆಂಬ ಸಾಮಾನ್ಯ ಜ್ಞಾನ ಜವಾಬ್ದಾರಿ ಇಲ್ಲವೇ? ಇದರ ಬಗ್ಗೆ ತಾವು ದಯವಿಟ್ಟು ಪತ್ರಿಕೆಯಲ್ಲಿ ಸುದ್ದಿ ಮಾಡಲು ಕೋರುತ್ತೇನೆ.

-ಪೂವಯ್ಯ ಪೊನ್ನಂಪೇಟೆ

ಕಳೆದ ಎರಡು ದಿನಗಳಿಂದ ನಾಪೋಕ್ಲು ಬಳಿಯ ಪೇರೂರು ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನದಿ ತುಂಬಿ ಹರಿಯುತ್ತಿದ್ದು, ನೀರಿನ ಮಟ್ಟ ಸೇತುವೆವರೆಗೆ ಏರಿಕೆಯಾಗಿದೆ.

- ಬೊಟ್ಟೋಳಂಡ ಆರ್ಯನ್ ಚಂಗಪ್ಪ

ಕೊಯನಾಡಿನಲ್ಲಿ ಪಯಸ್ವಿನಿ ಹೊಳೆಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಕಿಂಡಿ ಅಣೆಕಟ್ಟೆಗೆ ಮರಗಳು ಕೊಚ್ಚಿಕೊಂಡು ಬಂದು ಅಡ್ಡ ನಿಂತಿವೆ. ಪ್ರವಾಹ ಹೆಚ್ಚಾದರೆ ಅಪಾಯ ಖಚಿತ. ಪಕ್ಕದ ಹೆದ್ದಾರಿ, ಮನೆಗಳು ಮುಳುಗಡೆಯಾಗುವ ಭೀತಿಯಲ್ಲಿದೆ.

-ಮಹಮ್ಮದ್ ಕುಂಞ, ಕೊಯನಾಡು

ಮಡಿಕೇರಿಯ ಮಂಗಳಾದೇವಿನಗದ ರೋಶಾನಾರ ಕೆರೆ ಬಳಿ ಭಾರೀ ಗಾತ್ರದ ಮರವೊಂದು ಬಿದ್ದು ವಿದ್ಯುತ್ ಕಂಬಗಳು ನೆಲಕ್ಕುರುಳಿದವು. ಚೆಸ್ಕಾಂ ಹಾಗೂ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ತೆರವುಗೊಳಿಸಿದರು. ಈ ಸಂದರ್ಭ ನಗರಸಭಾ ಸದಸ್ಯೆ ಸಬಿತಾ ಹಾಜರಿದ್ದರು.

-ರೇಖಾ ಯೋಗೇಶ್, ಮಂಗಳಾದೇವಿ ನಗರವಾಲ್ನೂರು ತ್ಯಾಗತ್ತೂರಿನ ಹೆಚ್.ಎನ್. ಕಮಲಮ್ಮ ಎಂಬವರ ಮನೆಯ ಎದುರು ವಿದ್ಯುತ್ ಕಂಬಗಳು ಬಿದ್ದು ಮನೆಗೆ ಹಾನಿಯಾಗಿವೆ. ಅಧಿಕಾರಿಗಳು ಯಾವುದೇ ರೀತಿಯ ಸ್ಪಂದನ ನೀಡಿಲ್ಲ.

ಬೆಟ್ಟತ್ತೂರಿನಲ್ಲಿ ವಿದ್ಯುತ್ ಸಮಸ್ಯೆ

ಮದೆ ಗ್ರಾ.ಪಂ. ವ್ಯಾಪ್ತಿಯ ಬೆಟ್ಟತ್ತೂರು ಗ್ರಾಮದಲ್ಲಿ ಕಳೆದ ಒಂದು ವಾರದಿಂದ ವಿದ್ಯುತ್ ಸಮಸ್ಯೆ ಎದುರಾಗಿದೆ. ಈ ಬಗ್ಗೆ ಯಾರೂ ಕೂಡ ಸ್ಪಂದಿಸುತ್ತಿಲ್ಲ. ನಾವುಗಳು ವಿದ್ಯಾರ್ಥಿಗಳಾಗಿದ್ದು, ಆನ್‌ಲೈನ್ ತರಗತಿಯಲ್ಲಿ ಪಾಲ್ಗೊಳ್ಳಲು ನೆಟ್‌ವರ್ಕ್ ಕೂಡ ಇಲ್ಲದೆ ಮಳೆಯಲ್ಲಿ ಕೊಡೆ ಹಿಡಿದು ಬೆಟ್ಟದ ತುದಿಯಲ್ಲಿ ಕುಳಿತುಕೊಳ್ಳಬೇಕಾದ ಪರಿಸ್ಥತಿಯಿದೆ. ಸಂಬAಧಿಸಿದವರು ಇನ್ನಾದರೂ ದಯಮಾಡಿ ಇತ್ತ ಗಮನ ಹರಿಸಿ.

- ವಿದ್ಯಾರ್ಥಿಗಳು, ಬೆಟ್ಟತ್ತೂರು

ಕಿರಿಕ್ಕಲ್‌ನಲ್ಲ್ ವಿದ್ಯುತ್ ಇಲ್ಲ

ಮದೆ ಗ್ರಾ.ಪಂ. ವ್ಯಾಪ್ತಿಯ ಜೋಡುಪಾಲ ಸಮೀಪದ ಕಿರಿಕ್ಕಲ್ ಗ್ರಾಮದಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿದೆ. ಕಾಡಾನೆಗಳ ಕಾಟ ಕೂಡ ಇದ್ದು, ವಿದ್ಯುತ್ ಇಲ್ಲದೆ, ಕತ್ತಲಲ್ಲಿ ಕಾಡಾನೆಗಳು ಮನೆಗಳತ್ತ ಬರುವದನ್ನು ಗಮನಿಸಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ಸಂಬAಧಿಸಿದವರು ಗಮನ ಹರಿಸಿ ಸಮಸ್ಯೆ ಪರಿಹರಿಸಿ. - ಪುರುಷೋತ್ತಮ, ಕಿರಿಕ್ಕಲ್

ಸಂಪಾಜೆ ವ್ಯಾಪ್ತಿಯ ಕೊಯನಾಡುವಿನಲ್ಲಿ ಹರಿಯುತ್ತಿರುವ ಪಯಸ್ವಿನಿ ನದಿ ಉಕ್ಕಿ ರಸ್ತೆ ಮೇಲೆ ಹರಿದು, ರಸ್ತೆ ಬದಿ ಇರುವ ಪಯಸ್ವಿನಿ ಸಹಕಾರ ಸಂಘದ ಆವರಣಕ್ಕೂ ನೀರು ನುಗ್ಗಿದೆ.

- ಮಹಮ್ಮದ್ ಕುಂಞ