ಪಾಲಿಬೆಟ್ಟ, ಜು. ೧೬: ಗ್ರಾಮೀಣ ಭಾಗದ ಜನರಿಗೆ ಉತ್ತಮ ಸೇವೆ ನೀಡುತ್ತಿರುವ ಪಾಲಿಬೆಟ್ಟ ಸರಕಾರಿ ಆಸ್ಪತ್ರೆಗೆ ಸಮಾಜ ಸೇವಕ ಅಂಜನ್ ಚಿಣ್ಣಪ್ಪ ಅವರ ಮನವಿ ಮೇರೆಗೆ ಮಾಜಿ ಕೇಂದ್ರ ಸಚಿವ ಚಿದಂಬರA ಅವರ ಪುತ್ರ ಕಾರ್ತಿಕ್ ಚಿದಂಬರA ಅವರ ಮೂಲಕ ಆಸ್ಪತ್ರೆಗೆ ಬೇಕಾದ ಅಗತ್ಯ ಸಲಕರಣೆಗಳೊಂದಿಗೆ ಇಪ್ಪತ್ತು ಸಾವಿರ ನಗದನ್ನು ನೀಡಲಾಗಿದೆ ಎಂದು ವೈದ್ಯಾಧಿಕಾರಿ ಜಗದೀಶ್ ತಿಳಿಸಿದ್ದಾರೆ. ಈ ಸಂದರ್ಭ ತೋಟದ ಸ್ಥಳೀಯರಾದ ನಾಚಪ್ಪ, ಗಣೇಶ್, ಸತೀಶ್, ಡಾ. ರಾಕೇಶ್, ಚನ್ನಯ್ಯನಕೋಟೆ ಆಸ್ಪತ್ರೆಯ ವೈದ್ಯಾಧಿಕಾರಿ ಶಿವಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.