ಮೇಕೆದಾಟು ಅಣೆಕಟ್ಟು ನಿರ್ಮಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ
ಚೆನ್ನೆöÊ, ಜು. ೧೬: ಹಾಲಿ ಪರಿಸ್ಥಿತಿಯಲ್ಲಿ ಕರ್ನಾಟಕ ಸರ್ಕಾರ ಮೇಕೆದಾಟು ಅಣೆಕಟ್ಟು ನಿರ್ಮಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಶುಕ್ರವಾರ ಸ್ಪಷ್ಟಪಡಿಸಿದೆ. ಮೇಕೆದಾಟು ವಿವಾದ ವಿಚಾರವಾಗಿ ತಮಿಳುನಾಡು ಸರ್ಕಾರದ ನಿಯೋಗ ಇಂದು ತಮ್ಮನ್ನು ಭೇಟಿ ಮಾಡಿದ ಬಳಿಕ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಹೇಳಿಕೆ ನೀಡಿದ್ದು, ತಮಿಳುನಾಡು, ಕೇರಳ ಮತ್ತು ಪುದುಚೇರಿ ಮತ್ತು ಕಾವೇರಿ ವಾಟರ್ ಮ್ಯಾನೇಜ್ಮೆಂಟ್ ಅಥಾರಿಟಿ(ಸಿಡಬ್ಲ್ಯೂಎಂಎ)ಯ ಪೂರ್ವಾಪೇಕ್ಷಿತ ಅಂಶಗಳನ್ನು ಕರ್ನಾಟಕ ಸರ್ಕಾರ ಸ್ಪಷ್ಟಪಡಿಸುವವರೆಗೂ ಈ ಯೋಜನೆ ನಿರ್ಮಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. ಸುಮಾರು ೪೫ ನಿಮಿಷಗಳ ಕಾಲ ನವದೆಹಲಿಯಲ್ಲಿ ಕೇಂದ್ರ ಸಚಿವರೊಂದಿಗೆ ನಡೆದ ಸಭೆಯ ನಂತರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ತಮಿಳುನಾಡು ಜಲಸಂಪನ್ಮೂಲ ಸಚಿವ ದೊರೈ ಮುರುಗನ್ ಅವರು, ಕರ್ನಾಟಕದ ಡಿಪಿಆರ್ ಅನ್ನು ಒಪ್ಪಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಕರ್ನಾಟಕದ ಡಿಪಿಆರ್ ಅನ್ನು ಒಪ್ಪುವುದಿಲ್ಲ. ಕರ್ನಾಟಕವು ಡಿಪಿಆರ್‌ನಲ್ಲಿನ ಷರತ್ತುಗಳನ್ನು ಈಡೇರಿಸಿಲ್ಲ. ಕೆಳಗಿನ ರಾಜ್ಯಗಳು ಮತ್ತು ಕೇಂದ್ರ ಜಲ ಆಯೋಗದಿಂದ ಒಪ್ಪಿಗೆ ಪಡೆಯಬೇಕು. ಇವನ್ನು ಮಾಡದೆ ಮೇಕೆದಾಟು ಯೋಜನೆ ಆರಂಭಿಸುವAತಿಲ್ಲ ಎಂದು ಕೇಂದ್ರ ಜಲ್ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ. ನಿಯೋಗವು ತಮಿಳುನಾಡಿನ ಅಭಿಪ್ರಾಯಗಳನ್ನು ಕೇಂದ್ರ ಸಚಿವರಿಗೆ ಪರಿಣಾಮಕಾರಿಯಾಗಿ ಮಂಡಿಸಿತು. ಮೇಕೆದಾಟುವಿನಲ್ಲಿ ಅಣೆಕಟ್ಟು ನಿರ್ಮಿಸುವಲ್ಲಿ ಕೇಂದ್ರ ಸರ್ಕಾರ ಕರ್ನಾಟಕದ ಪರವಾಗಿ ವರ್ತಿಸಬಾರದು ಎಂದು ನಾವು ಅವರಿಗೆ ಸ್ಪಷ್ಟವಾಗಿ ಹೇಳಿದ್ದೇವೆ. ಮೇಕೆದಾಟುವಿನಲ್ಲಿ ಅಣೆಕಟ್ಟು ನಿರ್ಮಿಸಲು ವಿವರವಾದ ಯೋಜನಾ ವರದಿಯನ್ನು ತಯಾರಿಸಲು ಕರ್ನಾಟಕಕ್ಕೆ ನೀಡಲಾದ ಅನುಮತಿಯನ್ನೂ ಹಿಂಪಡೆಯುವAತೆ ನಾವು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದ್ದೇವೆ ಎಂದು ಹೇಳಿದರು. ನಿಯೋಗದ ಬೇಡಿಕೆಗಳಿಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವರು, ಪೂರ್ವಾಪೇಕ್ಷಿತ ಅಂಶಗಳನ್ನು ಪೂರೈಸದೆ ಕರ್ನಾಟಕ ತಾವಾಗಿಯೇ ಸಿದ್ಧಪಡಿಸಿದ ಡಿಪಿಆರ್ ಅನ್ನು ಜಲ ಶಕ್ತಿ ಸಚಿವಾಲಯ ಸ್ವೀಕರಿಸುವುದಿಲ್ಲ. ನಾವು ಕರ್ನಾಟಕಕ್ಕೆ ಅಣೆಕಟ್ಟು ನಿರ್ಮಾಣ ಸಂಬAಧ ಯಾವುದೇ ರೀತಿಯ ಭರವಸೆ ನೀಡಿಲ್ಲ ಎಂದು ಹೇಳಿದ್ದಾರೆ ಎಂದು ಮುರುಗನ್ ಹೇಳಿದರು.
ರಾಜ್ಯದಲ್ಲಿ ಕೊರೊನಾ ಇಳಿಮುಖ
ಬೆಂಗಳೂರು, ಜು. ೧೬: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಸ್ವಲ್ಪ ಇಳಿಕೆಯಾಗಿದ್ದು ಇಂದು ೧,೮೦೬ ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ ೨೮,೮೦,೩೭೦ಕ್ಕೆ ಏರಿಕೆಯಾಗಿದೆ. ಕಳೆದ ೨೪ ಗಂಟೆಯಲ್ಲಿ ಮಹಾಮಾರಿಗೆ ೪೨ ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ ೩೬,೦೭೯ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಪ್ರಕಟಿಸಿದೆ. ಬೆಂಗಳೂರಿನಲ್ಲಿ ಇಂದು ೪೧೧ ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ ೧೨,೨೧,೩೭೧ಕ್ಕೆ ಏರಿಕೆಯಾಗಿದೆ. ಇನ್ನು ನಗರದಲ್ಲಿ ಸೋಂಕಿಗೆ ೧೦ ಮಂದಿ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಇಂದು ೨,೭೪೮ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿAದ ಚೇತರಿಸಿಕೊಂಡವರ ಸಂಖ್ಯೆ ೨೮,೧೨,೮೬೯ಕ್ಕೆ ಏರಿಕೆಯಾಗಿದೆ. ಇನ್ನು ೩೧,೩೯೯ ಸಕ್ರೀಯ ಪ್ರಕರಣಗಳಿವೆ. ರಾಜ್ಯಾದ್ಯಂತ ಇಂದು ೧,೫೨,೯೦೮ ಕೋವಿಡ್ ಟೆಸ್ಟ್ ನಡೆಸಲಾಗಿದ್ದು, ೧,೮೦೬ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. ೧.೧೮ಕ್ಕೆ ಇಳಿದಿದೆ. ರಾಜ್ಯದ ಇತರ ಜಿಲ್ಲೆಗಳಾದ ಬೆಳಗಾವಿ ೭೦, ಚಿಕ್ಕಮಗಳೂರು ೮೬, ದಕ್ಷಿಣ ಕನ್ನಡ ೨೨೫, ಹಾಸನ ೧೩೮, ಮೈಸೂರು ೧೭೪, ಶಿವಮೊಗ್ಗ ೧೧೦, ತುಮಕೂರು ೯೪, ಉಡುಪಿ ೧೦೫ ಪ್ರಕರಣಗಳು ವರದಿಯಾಗಿವೆ.
ಕೋವಿಡ್‌ನಿಂದ ೧೦ ಕುಟುಂಬ ಸದಸ್ಯರನ್ನು ಕಳೆದುಕೊಂಡ ಯುಎಸ್ ಸರ್ಜನ್ ಜನರಲ್ ಡಾ. ವಿವೇಕ್ ಮೂರ್ತಿ
ವಾಷಿಂಗ್ಟನ್, ಜು. ೧೬: ಕೋವಿಡ್-೧೯ ಸಾಂಕ್ರಾಮಿಕದಿAದ ಭಾರತ ಮತ್ತು ಅಮೇರಿಕಾದಲ್ಲಿ ೧೦ ಕುಟುಂಬ ಸದಸ್ಯರನ್ನು ಕಳೆದುಕೊಂಡಿರುವುದಾಗಿ ಯುಎಸ್ ಸರ್ಜನ್ ಜನರಲ್ ಡಾ. ವಿವೇಕ್ ಮೂರ್ತಿ ಹೇಳಿದ್ದು, ಮಾರಕ ವೈರಾಣುವಿನಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಅಮೇರಿಕಾ ಪ್ರಜೆಗಳು ಲಸಿಕೆ ಹಾಕಿಸಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ. ತಪ್ಪು ಮಾಹಿತಿಯ ವಿರುದ್ಧ ಅಭಿಯಾನವನ್ನು ಪ್ರಾರಂಭಿಸಿದ ಭಾರತೀಯ-ಅಮೇರಿಕಾದ ತಜ್ಞ ವೈದ್ಯ ಡಾ. ವಿವೇಕ್ ಮೂರ್ತಿ, ಆರೋಗ್ಯ ಮಾಹಿತಿಯನ್ನು ಇತರರೊಂದಿಗೆ ಹಂಚಿಕೊಳ್ಳುವ ಮೊದಲು ಅವುಗಳು ನಂಬಲರ್ಹ ವೈಜ್ಞಾನಿಕ ಮೂಲಗಳಿಂದ ಬೆಂಬಲಿತವಾಗಿವೆಯೇ ಎಂಬದನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಈವರೆಗೂ ೧೬೦ ಮಿಲಿಯನ್ ಅಮೇರಿಕನ್ನರು ಲಸಿಕೆ ಹಾಕಿಸಿಕೊಂಡಿರುವುದು ಒಳ್ಳೆಯ ಸುದ್ದಿ ಎಂದಿದ್ದಾರೆ. ಶ್ವೇತಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇನ್ನೂ ಲಕ್ಷಾಂತರ ಜನರು ಕೋವಿಡ್ ಲಸಿಕೆ ಹಾಕಿಸಿಕೊಂಡಿಲ್ಲ, ಇಂತಹ ಜನರಲ್ಲಿ ಹೆಚ್ಚಿನ ಸೋಂಕನ್ನು ನಾವು ನೋಡುತ್ತಿದ್ದೇವೆ. ಕೋವಿಡ್‌ನಿಂದ ಸಂಭವಿಸಿದ ಪ್ರತಿಯೊಂದು ಸಾವುಗಳು ನೋವನ್ನುಂಟು ಮಾಡಿವೆ. ಯಾರೇ ಆಗಲೀ ಲಸಿಕೆ ಪಡೆದುಕೊಳ್ಳಲು ಅವಕಾಶ ಇರುವುದಾಗಿ ಅವರು ಹೇಳಿದರು.
ತರಬೇತಿ ಹೆಲಿಕಾಪ್ಟರ್ ಪತನ: ಪೈಲಟ್ ಸಾವು
ಮುಂಬೈ, ಜು. ೧೬: ಮಹಾರಾಷ್ಟçದಲ್ಲಿ ತರಬೇತಿ ಹೆಲಿಕಾಪ್ಟರ್ ಪತನವಾಗಿದ್ದು ಕಾಪ್ಟರ್‌ನಲ್ಲಿದ್ದ ಓರ್ವ ಪೈಲಟ್ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ಮಹಾರಾಷ್ಟçದ ಜಲಗಾಂವ್‌ನಲ್ಲಿ ಈ ಘಟನೆ ನಡೆದಿದ್ದು, ಎನ್‌ಎಂಐಎAಎಸ್ ಅಕಾಡೆಮಿ ಆಫ್ ಏವಿಯೇಷನ್‌ಗೆ ಸೇರಿದ ಹೆಲಿಕಾಪ್ಟರ್ ಪತನವಾಗಿದೆ. ದುರ್ಘಟನೆಯಲ್ಲಿ ಓರ್ವ ಬೋಧಕ ಪೈಲಟ್ ಸಾವನ್ನಪ್ಪಿದ್ದು, ತರಬೇತಿ ಪಡೆಯುತ್ತಿದ್ದ ವ್ಯಕ್ತಿ ಗಾಯಗೊಂಡಿದ್ದಾರೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಲಿಕಾಪ್ಟರ್ ಪತನವಾಗುತ್ತಿದ್ದಂತೆಯೇ ಸ್ಥಳೀಯರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದು, ಗಾಯಾಳು ಪೈಲಟ್‌ಅನ್ನು ಹೊರಗೆಳೆದು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ರಾಯಿಟರ್ಸ್ ಇಂಡಿಯಾ ಛಾಯಾಗ್ರಾಹಕ ಹತ್ಯೆ
ಕಾಬೂಲ್, ಜು. ೧೬: ರಾಯಿಟರ್ಸ್ ಇಂಡಿಯಾದ ಮುಖ್ಯ ಛಾಯಾಗ್ರಾಹಕ ಡ್ಯಾನಿಶ್ ಸಿದ್ದಿಕಿ ಅಫ್ಘಾನಿಸ್ತಾನದ ಕಂದಹಾರ್‌ನ ಸ್ಪಿನ್ ಬೋಲ್ಡಾಕ್ ಜಿಲ್ಲೆಯಲ್ಲಿ ನಡೆದ ಘರ್ಷಣೆಯಲ್ಲಿ ಹತ್ಯೆಯಾಗಿದ್ದಾರೆ. ಪುಲಿಟ್ಜೆರ್ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಕಳೆದ ಕೆಲವು ದಿನಗಳಿಂದ ಕಂದಹಾರ್‌ನ ಪರಿಸ್ಥಿತಿಯನ್ನು ವಿವರಿಸುವ ವರದಿ ಚಿತ್ರಿಸಿದ್ದರು ಎಂದು ಅಫ್ಘಾನ್ ಸುದ್ದಿ ಚಾನೆಲ್ ವರದಿ ಮಾಡಿದೆ. ಅಫ್ಘಾನಿಸ್ತಾನದ ಭಾರತದ ರಾಯಭಾರಿ ಫರೀದ್ ಮಾಮುಂಡ್ಜೆ ಟ್ವಿಟ್ಟರ್‌ನಲ್ಲಿ ಈ ಸುದ್ದಿಯನ್ನು ದೃಢಪಡಿಸಿದ್ದಾರೆ. ಪಾಕಿಸ್ತಾನದೊಂದಿಗಿನ ಪ್ರಮುಖ ಗಡಿ ಕಾಯುವಿಕೆ ಹಿಂಪಡೆಯುವ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ ಅಫ್ಘಾನ್ ಪಡೆಗಳು ಸ್ಪಿನ್ ಬೋಲ್ಡಾಕ್‌ನಲ್ಲಿ ತಾಲಿಬಾನ್ ಹೋರಾಟಗಾರರೊಂದಿಗೆ ಘರ್ಷಣೆ ನಡೆಸಿವೆ ಎಂದು ವರದಿ ಮಾಡಿದೆ. ೨೦೧೮ ರಲ್ಲಿ, ಸಿದ್ದಿಕಿ ಮತ್ತು ಅವರ ಸಹೋದ್ಯೋಗಿ ಅಡ್ನಾನ್ ಅಬಿಡಿ ರೋಹಿಂಗ್ಯಾ ನಿರಾಶ್ರಿತರ ಬಿಕ್ಕಟ್ಟಿನ ಸಮಸ್ಯೆ ಚಿತ್ರಿಸಿದ್ದಕ್ಕಾಗಿ ಫೀಚರ್ ಫೋಟೋಗ್ರಫಿ ವಿಭಾಗದಲ್ಲಿ ಪುಲಿಟ್ಜೆರ್ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯರೆನಿಸಿದ್ದರು. ಸಿದ್ದಿಕಿ ೨೦೨೦ ರ ದೆಹಲಿ ಗಲಭೆಗಳು, ಕೋವಿಡ್-೧೯ ಸಾಂಕ್ರಾಮಿಕ, ೨೦೧೫ ರಲ್ಲಿ ನೇಪಾಳ ಭೂಕಂಪ, ೨೦೧೬-೧೭ರಲ್ಲಿ ಮೊಸುಲ್ ಕದನ ಮತ್ತು ಹಾಂಗ್ ಕಾಂಗ್‌ನಲ್ಲಿ ನಡೆದ ೨೦೧೯-೨೦೨೦ ಪ್ರತಿಭಟನೆಗಳನ್ನೂ ತಮ್ಮ ಕ್ಯಾಮೆರಾದಲ್ಲಿ ದಾಖಲಿಸಿದ್ದರು.
ಆಸ್ಟೆçÃಲಿಯಾದಲ್ಲಿ ಕೋವಿಡ್ ಸೋಂಕು ಉಲ್ಭಣ
ಮೆಲ್ಬರ್ನ್, ಜು. ೧೬: ಆಸ್ಟೆçÃಲಿಯಾದಲ್ಲಿ ಕೋವಿಡ್-೧೯ ಸೋಂಕು ಗಣನೀಯವಾಗಿ ಉಲ್ಭಣವಾಗಿದ್ದು, ಸಿಡ್ನಿ ಬೆನ್ನಲ್ಲೇ ಮೆಲ್ಬರ್ನ್ ನಗರದಲ್ಲೂ ಲಾಕ್‌ಡೌನ್ ಜಾರಿ ಮಾಡಲಾಗಿದೆ. ಮತ್ತೆ ಆಸ್ಟೆçÃಲಿಯಾದಲ್ಲಿ ಗಣನೀಯ ಪ್ರಮಾಣದಲ್ಲಿ ಹೊಸ ಸೋಂಕು ಪ್ರಕರಣಗಳು ದಾಖಲಾಗಿದ್ದು, ಪರಿಣಾಮ ಕ್ರಮೇಣ ಆಸ್ಟೆçÃಲಿಯಾ ಲಾಕ್‌ಡೌನ್ ಮುಷ್ಟಿಗೆ ಸಿಲುಕುತ್ತಿದೆ. ಕೋವಿಡ್-೧೯ರ ಡೆಲ್ಟಾ ರೂಪಾಂತರ ತಳಿಯು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಆಸ್ಟೆçÃಲಿಯಾದಲ್ಲಿ ೩೧,೪೦೦ ಸೋಂಕು ಪ್ರಕರಣಗಳು ದಾಖಲಾಗಿದ್ದು, ೯೧೨ ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಹೀಗಾಗಿ ಈಗಾಗಲೇ ಸಿಡ್ನಿಯಲ್ಲಿ ಲಾಕ್‌ಡೌನ್ ಹೇರಲಾಗಿದ್ದು, ಇದರ ಬೆನ್ನಲ್ಲೇ ಮೆಲ್ಬರ್ನ್ ನಗರದಲ್ಲೂ ಕೂಡ ಲಾಕ್‌ಡೌನ್ ಜಾರಿ ಮಾಡಲಾಗಿದೆ.