ಸುಂಟಿಕೊಪ್ಪ : ಮಳೆಯ ಆರ್ಭಟ ಜೋರಾಗಿದ್ದು ನದಿ, ತೊರೆ, ತೋಡು ಜರಿ, ನಾಲೆಗಳು ಉಕ್ಕಿ ಹರಿಯುತ್ತಿವೆ. ತೀವ್ರ ಮಳೆ - ಗಾಳಿಯಿಂದ ತೋಟದ ಮಾಲೀಕರುಗಳು ತೋಟದಲ್ಲಿ ಕೆಲಸ ನೀಡಲು ಮುಂದಾಗುತ್ತಿಲ್ಲ
ರೈತರು ಭತ್ತದ ಗದ್ದೆಯಲ್ಲಿ ಬೀಜವನ್ನು ಹಾಕಿದ್ದು ಸಸಿ ಮಡಿಗಳು ಮೊಳಕೆಯೊಡೆದು ಬೆಳೆಯುತ್ತಿದೆ. ಸಸಿ ಮಡಿಗಳು ಬೆಳೆದ ನಂತರ ನಾಟಿ ಮಾಡಲು ಗದ್ದೆಯ ತೆವರುಕಡಿಯುವ ಕೆಲಸದಲ್ಲಿ ರೈತರು ತೊಡಗಿಸಿಕೊಂಡಿದ್ದಾರೆ.
ಕೊಡಗರಹಳ್ಳಿ ರಾಷ್ಟಿçÃಯ ಹೆದ್ದಾರಿ ಬದಿ ನಿವಾಸಿ ಮೆದಪ್ಪ ಎಂಬವರ ಮನೆಯ ಮೇಲೆ ಮರ ಬಿದ್ದ ಪರಿಣಾಮ ಮೇಲ್ಛಾವಣಿ, ಗೋಡೆ ಸಂಪೂರ್ಣ ಹಾನಿಯಾಗಿದೆ. ಮನೆ ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ಸುಂಟಿಕೊಪ್ಪ ಕಂದಾಯ ಪರಿವೀಕ್ಷಕ ಶಿವಪ್ಪ, ಗ್ರಾಮಲೆಕ್ಕಿಗರಾದ ರೂಪ, ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ, ಆಡಳಿತ ಮಂಡಳಿಯವರು ಭೇಟಿ ನೀಡಿ, ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಮಡಿಕೇರಿ: ಸೋಮವಾರಪೇಟೆ ಹೆದ್ದಾರಿಯ ಮಕ್ಕಂದೂರು ಗ್ರಾಮದಲ್ಲಿ ಮರ ಬಿದ್ದು ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಪಂಚಾಯಿತಿ ಸದಸ್ಯ ಬಿ.ಎನ್. ರಮೇಶ್ ನೇತೃತ್ವದಲ್ಲಿ ಕೂಡಲೇ ಮರ ತೆರವುಗೊಳಿಸಲಾಯಿತು.