*ಗೋಣಿಕೊಪ್ಪ, ಜು. ೧೪: ಆತಂಕಕಾರಿ ಕೊರೊನಾ ಆರ್ಭಟ ಜಿಲ್ಲೆಯಲ್ಲಿ ನಿಧಾನವಾಗಿ ತಗ್ಗುತ್ತಿದ್ದರೂ, ನಿಯಮ ಪಾಲನೆ ಯಿಲ್ಲದೆ ಕೊಡಗಿಗೆ ಬರುತ್ತಿರುವ ಅಸ್ಸಾಂ ಕಾರ್ಮಿಕರಿಂದ ಕೊರೊನಾ ಹರಡುವ ಭೀತಿ ಎದುರಾಗಿದ್ದು, ಆತಂಕಕ್ಕೆ ಕಾರಣವಾಗುತ್ತಿದೆ.
ಲಾಕ್‌ಡೌನ್ ಸಡಿಲಿಕೆಯ ನಡುವೆಯೇ ಕೊಡಗಿಗೆ ಅಸ್ಸಾಂ ಕಾರ್ಮಿಕರ ಪ್ರವೇಶವಾಗುತ್ತಿದೆ. ಯಾವುದೇ ನಿರ್ಬಂಧ ನಿಯಮ ಗಳಿಗೆ ಒಳಪಡದೆ ದಕ್ಷಿಣ ಕೊಡಗಿನ ಕಾಫಿ ತೋಟಗಳಿಗೆ ಕಾರ್ಮಿಕರಾಗಿ ಬರುತ್ತಿರುವ ಅಸ್ಸಾಮಿಗರು ನಿಯಂತ್ರಣಗೊಳ್ಳುತ್ತಿರುವ ಕೊರೊನಾ ದಿನಗಳಲ್ಲಿ ಮತ್ತಷ್ಟು ರೋಗ ಹರಡಲು ಕಾರಣರಾಗುತ್ತಾರೆ ಎಂಬ ಆತಂಕ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.
ತಿತಿಮತಿ-ಆನೆಚೌಕೂರು ಗಡಿಯಿಂದ ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ ನಿರ್ಭೀತಿಯಿಂದ ಕೊಡಗಿಗೆ ಪ್ರವೇಶಿಸುತ್ತಿರುವ ಹಿನ್ನೆಲೆ ಕೊಡಗಿನಲ್ಲಿ ಮತ್ತೆ ಕೊರೊನಾ ಕಾಡುವ ಭಯ ಎದುರಾಗಿದೆ. ಪ್ರತಿನಿತ್ಯ ಕನಿಷ್ಟವೆಂದರೂ ೧೦೦ಕ್ಕೂ ಹೆಚ್ಚು ಕಾರ್ಮಿಕರು ಕೊಡಗಿಗೆ ಆಗಮಿಸು ತ್ತಿದ್ದಾರೆ. ಆದರೆ, ಇವರುಗಳಲ್ಲಿ ಕೆಲವು ಮಂದಿಯಷ್ಟೇ ಕೊರೊನಾ ಪರೀಕ್ಷೆ ನಡೆಸಿದ್ದರೂ ಸಹ ಅವರು ಅಸ್ಸಾಂನಿAದ ಕೊಡಗಿಗೆ ಪ್ರವೇಶಿಸುವ ಸಂದರ್ಭ ಸುಮಾರು ೭೨ ತಾಸು ಮೀರಿರುತ್ತದೆ. ಹೀಗಾಗಿ ಕೊರೊನಾ ರ‍್ಯಾಟ್ ಪರೀಕ್ಷೆಗೆ ಒಳಪಟ್ಟರೂ ರೋಗ ಹರಡುವ ಆತಂಕದಿAದ ದೂರ ಉಳಿಯಲು ಸಾಧ್ಯವಾಗುತ್ತಿಲ್ಲ. ರೈಲು ಸಂಚಾರ ಹಾಗೂ ಬಸ್ ಸಂಚಾರದ ನಡುವೆ ಇತರ ಜನರ ಸಂಪರ್ಕದಿAದ ಕೊರೊನಾ ಬಾಧೆಗೆ ಒಳಗಾಗಿರುತ್ತಾರೆ.
ತೋಟ ಕಾರ್ಮಿಕರಾಗಿ ಬರುವ ಅಸ್ಸಾಂ ಕಾರ್ಮಿಕರ ಬಗ್ಗೆ ಮಾಲೀಕರು ಸಹ ಸ್ಥಳೀಯ ಆರೋಗ್ಯ ಕೇಂದ್ರ, ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ತಾಲೂಕಿನಲ್ಲಿ ಶಾಸಕರ ಪ್ರಯತ್ನದಿಂದ ಗ್ರಾಮಗಳಲ್ಲಿ, ಹಾಡಿಗಳಲ್ಲಿ, ಕಾಲೋನಿಗಳಲ್ಲಿ ಲಸಿಕೆ ಅಭಿಯಾನ ನಡೆದು ಪ್ರಗತಿ ಕಂಡಿದೆ. ಅಸ್ಸಾಂ ಕಾರ್ಮಿಕರು ಲಸಿಕೆ ಪಡೆದುಕೊಳ್ಳದೇ ಇರುವುದರಿಂದಲೂ ಸಮಸ್ಯೆ ತಲೆದೋರಿದೆ. ತಿತಿಮತಿ ಗಡಿಯಲ್ಲಿ ಸರ್ಕಾರಿ ಬಸ್ಸಿನ ಮೂಲಕ ಕೊಡಗು ಪ್ರವೇಶಿಸುತ್ತಿದ್ದ ಅಸ್ಸಾಂ ಕಾರ್ಮಿಕರ ಕೊರೊನಾ ನಿಯಮ ಪಾಲನೆ ಮತ್ತು ಲಸಿಕೆ ಅಳವಡಿಕೆಯ ಬಗ್ಗೆ ಸಾರ್ವಜನಿಕರು ವಿಚಾರಿಸಿದಾಗ ಇದಕ್ಕೆ ಸ್ಪಷ್ಟ ಉತ್ತರ ನೀಡಲು ಕಾರ್ಮಿಕರು ಅಸಮರ್ಥರಾಗಿದ್ದಾರೆ.
ಕೊಡಗಿಗೆ ಪ್ರವೇಶಿಸಿದವರಲ್ಲಿ ಶೇ. ೯೦ ರಷ್ಟು ಮಂದಿ ಲಸಿಕೆ ಪಡೆದುಕೊಳ್ಳದೇ ಇರುವ ಮಾಹಿತಿಯು ಲಭಿಸಿದೆ. ಜಿಲ್ಲಾಡಳಿತ ಈ ಬಗ್ಗೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಂಡು ಕೊಡಗಿಗೆ ಬರುವ ಅಸ್ಸಾಂ ಕಾರ್ಮಿಕರನ್ನು ತಪಾಸಣೆ ನಡೆಸಿ ಕೊರೊನಾ ಬಾಧೆಯಿಂದ ಜನತೆ ನರಳುವುದನ್ನು ತಡೆಹಿಡಿಯಲು ಕ್ರಮ ಕೈಗೊಳ್ಳಬೇಕೆಂಬದು ನಾಗರಿಕರ ಒತ್ತಾಯವಾಗಿದೆ.
- ಎನ್. ಎನ್. ದಿನೇಶ್