ಪೆರಾಜೆ, ಜು. ೧೪: ಇಲ್ಲಿಯ ಗಡಿಗುಡ್ಡೆಯಿಂದ ಕೂರ್ನಡ್ಕದವರೆಗಿನ ವಿದ್ಯುತ್ ತಂತಿಗಳಿಗೆ ತಾಗುತ್ತಿರುವ ಮರದ ರೆಂಬೆಗಳನ್ನು ಮತ್ತು ಇತರ ಕಾಡು ಬಳ್ಳಿಗಳನ್ನು ತೆರವುಗೊಳಿಸುವ ಕಾರ್ಯವನ್ನು ಚಿಗುರು ಯುವಕ ಮಂಡಲದ ಸದಸ್ಯರು ಮಾಡಿದರು. ಈ ಸಂದರ್ಭ ಚಿಗುರು ಯುವಕ ಮಂಡಲದ ಅಧ್ಯಕ್ಷ ಕಿರಣ್ ಕುಂಬಳಚೇರಿ, ಕಾರ್ಯದರ್ಶಿ ದಿವಾಕರ ಮಜಿಕೋಡಿ, ಗ್ರಾ.ಪಂ. ಸದಸ್ಯ ಉದಯಚಂದ್ರ ಕುಂಬಳಚೇರಿ, ಚೆಸ್ಕಾಂ ಲೈನ್ಮೆನ್ ಬಸವರಾಜು, ರಂಜಿತ್ ಲಿಂಗರಾಜನಮನೆ, ಹರ್ಷಿತ್ ಮಜಿಕೋಡಿ ಸೇರಿದಂತೆ ಯುವಕ ಮಂಡಲದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.