ಮಡಿಕೇರಿ, ಜು. ೧೪: ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೋದೂರು ಗ್ರಾಮದಲ್ಲಿ ಇತ್ತೀಚೆಗೆ ತಾಯಿಯ ಮರಣ ನಂತರ ಪಾಲಕರಿಲ್ಲದೆ ಅನಾಥವಾಗಿದ್ದ ವಿಶೇಷಚೇತನ ಯುವಕನನ್ನು ಗ್ರಾಮ ಪಂಚಾಯಿತಿ ವತಿಯಿಂದ ಹಾಗೂ ಸುಂಟಿಕೊಪ್ಪ ಜನವಿಕಾಸ ಟ್ರಸ್ಟ್ ಅವರ ಮೂಲಕ ಬೆಂಗಳೂರಿನ ‘ಹೋಂ ಆಫ್ ಹೋಪ್ಸ್’ ಸಂಸ್ಥೆಗೆ ಕಳುಹಿಸಲಾಯಿತು. ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಮೋದೂರು ಗ್ರಾಮದ ಸದಸ್ಯರು ಹಾಗೂ ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅವರುಗಳು ಸಹಕಾರ ನೀಡಿದರು.