ಮಡಿಕೇರಿ, ಜು. ೧೪: ಅಂಧ ಮಕ್ಕಳ ಸರ್ಕಾರಿ ಪಾಠಶಾಲೆ, ಮೈಸೂರು ಇಲ್ಲಿ ೨೦೨೧-೨೨ನೇ ಸಾಲಿಗೆ ೬ ರಿಂದ ೧೪ ವರ್ಷ ವಯೋಮಿತಿಯ ಅಂಧ ಗಂಡು ಮಕ್ಕಳಿಗೆ ಒಂದನೇ ತರಗತಿಯಿಂದ ೧೦ನೇ ತರಗತಿವರೆಗೆ ಶಾಲಾ ದಾಖಲಾತಿ ಪ್ರಾರಂಭವಾಗಿದೆ. ಶೈಕ್ಷಣಿಕ ಅವಧಿಯಲ್ಲಿ ಅಂಧ ಮಕ್ಕಳಿಗೆ ಪಠ್ಯಕ್ರಮದ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಯೋಗ ಮೆಡಿಟೇಷನ್, ದೈಹಿಕ ಶಿಕ್ಷಣ, ಸಂಗೀತ ಡ್ಯಾನ್ಸ್, ಡ್ರಾಮ, ಛಲನ ತರಬೇತಿ, ಕಂಪ್ಯೂಟರ್ ತರಬೇತಿ, ಸೇವೆ ತರಬೇತಿಗಳನ್ನು ನುರಿತ ವಿಶೇಷ ಶಿಕ್ಷಕರಿಂದ ನೀಡುವುದರ ಜೊತೆಗೆ ಶೈಕ್ಷಣಿಕ ಅವಧಿಯಲ್ಲಿ ಅಂಧ ಮಕ್ಕಳಿಗೆ ಉಚಿತವಾಗಿ ಊಟ, ವಸತಿ, ಪುಸ್ತಕಗಳು, ಶಾಲಾ ಸಮವಸ್ತç, ಕಲಿಕಾ ಉಪಕರಣಗಳು, ವೈದ್ಯಕೀಯ ಮತ್ತು ಇತರ ಸೌಲಭ್ಯಗಳನ್ನು ಸರ್ಕಾರದ ವತಿಯಿಂದ ಒದಗಿಸಲಾಗುವುದು. ಯಾವುದೇ ರೀತಿಯ ಶುಲ್ಕವಿರುವುದಿಲ್ಲ. ಈ ಸರ್ಕಾರಿ ಪಾಠಶಾಲೆಗೆ ಜಿಲ್ಲೆಯ ೬ ರಿಂದ ೧೪ ವರ್ಷ ವಯೋಮಿತಿಯ ಅಂಧ ಗಂಡು ಮಕ್ಕಳು ಸೇರಬಹುದಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಅವರು ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ಅಧೀಕ್ಷಕರು, ಅಂಧ ಮಕ್ಕಳ ಸರ್ಕಾರಿ ಪಾಠಶಾಲೆ, ತಿಲಕ್‌ನಗರ, ಮೈಸೂರು-೨೧ ದೂರವಾಣಿ ಸಂ.೦೮೨೧-೨೪೯೭೪೯೬, ಮೊಬೈಲ್:೯೪೮೧೪೪೧೪೫೩ ಇವರನ್ನು ಸಂಪರ್ಕಿಸುವAತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಅವರು ತಿಳಿಸಿದ್ದಾರೆ.