ಕೂಡಿಗೆ, ಜು. ೧೩: ಕಳೆದ ಮೂರು ತಿಂಗಳುಗಳಿAದ ಆದ ಪರಿಣಾಮವಾಗಿ ಯಾರಿಗೂ ಪ್ರವೇಶ ನಿಷೇಧಿಸಲಾಗಿದ್ದ ಹಾರಂಗಿ ಉದ್ಯಾನವನ ಪ್ರವೇಶಕ್ಕೆ ಹಸಿರು ನಿಶಾನೆ ದೊರೆತಿದೆ. ಹಾರಂಗಿ ಉದ್ಯಾನವನದ ವೀಕ್ಷಣೆ ಮತ್ತು ಸಂಗೀತ ಕಾರಂಜಿ ವೀಕ್ಷಣೆಗೆ ಇಂದಿನಿAದ ಶಾಸಕರ ಸೂಚನೆ ಮೇರೆಗೆ ನೀರಾವರಿ ಇಲಾಖೆಯ ಮೇಲಧಿಕಾರಿಗಳ ಆದೇಶದಂತೆ ಸಾರ್ವಜನಿಕರಿಗೆ ಮುಕ್ತ ಅವಕಾಶವನ್ನು ಕಲ್ಪಿಸಲಾಗುವುದು ಎಂದು ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದ್ರಕುಮಾರ್ ತಿಳಿಸಿದ್ದಾರೆ.