ಸುಂಟಿಕೊಪ್ಪ, ಜು. ೧೩: ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ಕ್ರೆöÊಸ್ತ ಬಾಂಧವÀರು ವೀರಾಜಪೇಟೆಯ ರಾಯ್ ಡಿಸೋಜಾ ಪ್ರಕರಣದ ಆರೋಪಿಗಳನ್ನು ಶೀಘ್ರ ಬಂಧಿಸುವAತೆ ಮೃತರ ಕುಟುಂಬಕ್ಕೆ ಸರಕಾರದಿಂದ ನೆರವು ನೀಡುವಂತೆ ಆಗ್ರಹಿಸಿ ದೇವಾಲಯದ ಮುಂಭಾಗದಲ್ಲಿ ಮೌನ ಪ್ರತಿಭಟನೆಯನ್ನು ನಡೆಸಿದರು.

ವೀರಾಜಪೇಟೆ ಚಿಕ್ಕಪೇಟೆ ನಿವಾಸಿ ಮೃತ ರಾಯ್ ಡಿಸೋಜ ವೀರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪೊಲೀಸ್ ದೌರ್ಜನ್ಯದಿಂದ ಮೃತ ಹೊಂದಿದ್ದು, ಪ್ರಕರಣವನ್ನು ಸಿಐಡಿ ತನಿಖೆ ನಡೆಸುತ್ತಿದೆ. ಪ್ರಕರಣಕ್ಕೆ ಸಂಬAಧಿಸಿದAತೆ ಸೆಕ್ಷನ್ ೩೨೦ರಡಿ ಮೊಕದ್ದಮೆ ದಾಖಲಾಗಿದೆ. ಆದರೆ ಪ್ರಕರಣದಲ್ಲಿ ಪ್ರಸ್ತಾಪಿಸಲಾಗಿರುವ ತಪ್ಪಿತಸ್ಥ ಪೊಲೀಸರನ್ನು ಬಂಧಿಸಬೇಕು. ತಪ್ಪಿತಸ್ಥ ಆರೋಪಿ ಪೊಲೀಸರನ್ನು ಬಂಧಿಸದೆ ಇದ್ದಲ್ಲಿ ಪ್ರಕರಣದ ಸಾಕ್ಷö್ಯನಾಶಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಪ್ರಕರಣದಲ್ಲಿ ಪ್ರಸ್ತಾಪಿಸಲಾಗಿರುವ ತಪ್ಪಿತಸ್ಥ ಪೊಲೀಸರನ್ನು ಬಂಧಿಸಿ ಮೃತನ ಕುಟುಂಬಕ್ಕೆ ನ್ಯಾಯ ನೀಡಬೇಕಾಗಿಯೂ ಮತ್ತು ಮೃತನ ಕುಟುಂಬಕ್ಕೆ ಸರಕಾರದಿಂದ ಕನಿಷ್ಟ ರೂ. ೨೫ ಲಕ್ಷ ಪರಿಹಾರ ಮೊತ್ತವನ್ನು ನೀಡುವಂತೆ ಒತ್ತಾಯಿಸಿ ಭಿತ್ತಿ ಪತ್ರಗಳನ್ನು ಹಿಡಿದು ಮೌನ ಪ್ರತಿಭಟನೆಯನ್ನು ನಡೆಸಲಾಗಿದ್ದು, ನಂತರ ನಾಡ ಕಚೇರಿಗೆ ತೆರಳಿ ಉಪತಹಶೀಲ್ದಾರ್ ಅವರಿಗೆ ಮನವಿ ಪತ್ರವನ್ನು ನೀಡಿದರು.

ಈ ಪ್ರತಿಭಟನೆಯಲ್ಲಿ ರೋಮನ್ ಕ್ಯಾಥೋಲಿಕ್ ಪ್ರಧಾನ ಪಿ.ಎಫ್. ಸಬಾಸ್ಟಿನ್, ರೋಸ್‌ಮೇರಿ ರಾಡ್ರಿಗಸ್, ಸಿಲ್ವೆಸ್ಟರ್, ತೋಮಸ್ (ಜೋಯಿ), ಶೈನಿವಿಜಿತ್, ನಿರ್ಮಲ, ಸಂಗೀತ, ನಿಖಿಲಾ, ಆಗಸ್ಟೀನ್, ಕುಮಾರ ಮತ್ತಿತರರು ಇದ್ದರು.