ಕೂಡಿಗೆ, ಜು. ೧೩: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿಯಿAದ ಮುಂದಿನ ದಿನಗಳಲ್ಲಿ ಬೇಸಾಯಕ್ಕೆ ಮುಖ್ಯ ನಾಲೆಗಳ ಮೂಲಕ ನೀರು ಹರಿಸುವ ಯೋಜನೆ ಇರುವುದರಿಂದ ವ್ಯಾಪ್ತಿಯ ಉಪ ಕಾಲುವೆಗಳ ದುರಸ್ತಿ ಕಾರ್ಯ ಆರಂಭವಾಗಿದೆ.
ಜುಲೈ ತಿಂಗಳ ಅಂತ್ಯದಲ್ಲಿ ಅಣೆಕಟ್ಟೆಯಿಂದ ಮುಖ್ಯನಾಲೆಗಳ ಮೂಲಕ ನೀರನ್ನು ಹರಿಸಲಾಗುವುದು. ಅದರಂತೆಯೇ ಬೇಸಾಯಕ್ಕೆ ಅನುಕೂಲವಾಗುವಂತೆ ನೀರು ಉಪ ಕಾಲುವೆಗಳ ಮೂಲಕ ಹರಿಸುವುದರಿಂದ ಅಚ್ಚುಕಟ್ಟು ಪ್ರದೇಶದ ರೈತರು ಸಸಿಮಡಿಗಳನ್ನು ಸಿದ್ಧ ಮಾಡಿಕೊಂಡು ನಂತರ ನಾಟಿ ಮಾಡಲು ಗೆದ್ದಗಳನ್ನು ಉಳುಮೆ ಮಾಡಲು ಉಪಯೋಗವಾಗುವಂತೆ ನೀರು ಸರಾಗವಾಗಿ ಹರಿಯಲು ಕಾಲುವೆಗಳಲ್ಲಿ ತುಂಬಿದ ಹೊಳು ಮತ್ತು ಗಿಡಗಂಟಿಗಳನ್ನು ಕಡಿದು ಶುಚಿಗೊಳಿಸಲಾಗಿದೆ ಎಂದು ಇಂಜಿನಿಯರ್ ಸಿದ್ದರಾಜ್ ತಿಳಿಸಿದ್ದಾರೆ.
ಜಲಾಶಯದ ೧ನೇ ತೂಬಿನಿಂದ ೧೮ನೇ ತೂಬಿನವರೆಗೆ ಉಪ ಕಾಲುವೆಗಳ ದುರಸ್ತಿ ಕಾಮಗಾರಿಯು ಕ್ರಿಯಾಯೋಜನೆಗೆ ಅನುಗುಣವಾಗಿ ನಡೆಯುತ್ತದೆ. ಕಾಲುವೆಗಳ ಹೊಳುತೆಗೆದು ದುರಸ್ತಿ ಮಾಡುವುದರಿಂದ ಬೇಸಾಯ ಮಾಡಲು ನೀರನ್ನು ಒದಗಿಸಿದಂತೆ ಆಗುತ್ತದೆ. ಮುಖ್ಯ ನಾಲೆಗಳು ಕಾಂಕ್ರಿಟ್‌ಕರಣದಿAದ ಉತ್ತಮವಾಗಿದ್ದು, ನೀರು ಅದರಿಂದ ಬಂದು ಉಪ ಕಾಲುವೆಗಳಲ್ಲಿ ಹರಿಯಬೇಕಾಗುವುದು. ಕಾಲುವೆಗಳ ದುರಸ್ತಿ ಮತ್ತು ಹೂಳು ತೆಗೆದರೆ ನೀರಿನ ಬಳಕೆ ಬೇಸಾಯಕ್ಕೆ ಅನುಕೂಲವಾಗುವುದು ಎಂದು ಇಂಜಿನಿಯರ್ ತಿಳಿಸಿದ್ದಾರೆ.