*ಗೋಣಿಕೊಪ್ಪ, ಜು. ೧೩: ಜಿಲ್ಲೆಯಲ್ಲಿ ಕೊರೊನಾ ಆತಂಕ ಕ್ಷೀಣಿಸುತ್ತಿದ್ದರೂ ಕಾರ್ಮಿಕ ವರ್ಗದಲ್ಲಿ ಕೊರೊನಾ ಬಾಧೆ ವ್ಯಾಪಕವಾಗಿ ಹರಡುತ್ತಿದೆ. ಶ್ರಮಿಕ ಜೀವಿಗಳು ಕೊರೊನ ಪಾಲನೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಶಾಸಕ ಕೆ.ಜಿ. ಬೋಪಯ್ಯ ಸಲಹೆ ನೀಡಿದರು.

ಮಾಯಮುಡಿ ಕಂಗಳತ್ತುನಾಡು ಮಹಿಳಾ ಸಮಾಜದಲ್ಲಿ ಮಾಯಮುಡಿ ಗ್ರಾ.ಪಂ. ವ್ಯಾಪ್ತಿಯ ನೊಂದಾಯಿತ ಕಟ್ಟಡ, ಕಾರ್ಮಿಕರಿಗೆ ಜಿಲ್ಲಾ ಕಾರ್ಮಿಕ ಇಲಾಖೆ ಶ್ರಮಿಕ ಬದುಕಿಗೆ ನೆರವಿನ ಹಸ್ತ ಎಂಬ ಕಾರ್ಯಕ್ರಮದಡಿಯಲ್ಲಿ ನೀಡುತ್ತಿರುವ ಆಹಾರ ಧಾನ್ಯಗಳ ಕಿಟ್ ವಿತರಿಸಿ ಮಾತನಾಡಿದರು.

ಕೊರೊನಾದಿಂದ ಸಂಕಷ್ಟಕ್ಕೆ ಒಳಗಾದ ಕಾರ್ಮಿಕರಿಗೆ ನೆರವು ನೀಡಬೇಕು ಎಂಬ ಹಿನ್ನೆಲೆ ಇಲಾಖೆ ಕಾರ್ಯಪ್ರವೃತ್ತವಾಗಿದೆ. ಪ್ರತಿಯೊಬ್ಬರು *ಗೋಣಿಕೊಪ್ಪ, ಜು. ೧೩: ಜಿಲ್ಲೆಯಲ್ಲಿ ಕೊರೊನಾ ಆತಂಕ ಕ್ಷೀಣಿಸುತ್ತಿದ್ದರೂ ಕಾರ್ಮಿಕ ವರ್ಗದಲ್ಲಿ ಕೊರೊನಾ ಬಾಧೆ ವ್ಯಾಪಕವಾಗಿ ಹರಡುತ್ತಿದೆ. ಶ್ರಮಿಕ ಜೀವಿಗಳು ಕೊರೊನ ಪಾಲನೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಶಾಸಕ ಕೆ.ಜಿ. ಬೋಪಯ್ಯ ಸಲಹೆ ನೀಡಿದರು.

ಮಾಯಮುಡಿ ಕಂಗಳತ್ತುನಾಡು ಮಹಿಳಾ ಸಮಾಜದಲ್ಲಿ ಮಾಯಮುಡಿ ಗ್ರಾ.ಪಂ. ವ್ಯಾಪ್ತಿಯ ನೊಂದಾಯಿತ ಕಟ್ಟಡ, ಕಾರ್ಮಿಕರಿಗೆ ಜಿಲ್ಲಾ ಕಾರ್ಮಿಕ ಇಲಾಖೆ ಶ್ರಮಿಕ ಬದುಕಿಗೆ ನೆರವಿನ ಹಸ್ತ ಎಂಬ ಕಾರ್ಯಕ್ರಮದಡಿಯಲ್ಲಿ ನೀಡುತ್ತಿರುವ ಆಹಾರ ಧಾನ್ಯಗಳ ಕಿಟ್ ವಿತರಿಸಿ ಮಾತನಾಡಿದರು.

ಕೊರೊನಾದಿಂದ ಸಂಕಷ್ಟಕ್ಕೆ ಒಳಗಾದ ಕಾರ್ಮಿಕರಿಗೆ ನೆರವು ನೀಡಬೇಕು ಎಂಬ ಹಿನ್ನೆಲೆ ಇಲಾಖೆ ಕಾರ್ಯಪ್ರವೃತ್ತವಾಗಿದೆ. ಪ್ರತಿಯೊಬ್ಬರು ಧನವನ್ನು ನೀಡಿದೆ.

ಮೊದಲ ಹಂತದಲ್ಲಿ ಪ್ರತಿಯೊಬ್ಬರ ಖಾತೆಗೆ ಹಣ ಸಂದಾಯವಾಗಿದೆ. ಉಳಿದ ಫಲಾನುಭವಿಗಳಿಗೂ ಹಂತ ಹಂತವಾಗಿ ಪರಿಹಾರದ ಮೊತ್ತ ಖಾತೆಗೆ ಜಮಾ ಆಗಲಿದೆ ಎಂದು ತಿಳಿಸಿದರು.

ತಾಲೂಕು ಬಗರ್‌ಹುಕುಂ ಸಾಗುವಳಿ ಸಕ್ರಮೀಕರಣ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಕಾರ್ಮಿಕ ಇಲಾಖೆ ಅಧಿಕಾರಿ ಜಯಣ್ಣ, ಎಂ.ಎA. ಯತ್ನಟ್ಟಿ, ಗ್ರಾ.ಪಂ. ಅಧ್ಯಕ್ಷೆ ಎಂ.ಪಿ. ಮೀನಾ, ಉಪಾಧಕ್ಷೆ ಕೆ.ವಿ. ಸುಮಿತ್ರಾ, ಸದಸ್ಯರುಗಳಾದ ಆಪಟ್ಟೀರ ಟಾಟು ಮೊಣ್ಣಪ್ಪ, ಆಪಟ್ಟೀರ ವಿಠಲ ನಾಚಯ್ಯ, ಹೆಚ್.ಆರ್. ಸುಶೀಲಾ, ಶಾಂತ, ನಾಜೀರ, ಕೆ.ಕೆ. ಶಬರೀಶ್, ವಿನೋದ್‌ಕುಮಾರ್, ನಾರಾಯಣ ಟಿ.ಸಿ, ಟಿ.ಎಸ್. ಸಿದ್ದಪ್ಪ, ಕೆ.ಕೆ. ಸುಮಿತ್ರಾ, ಚೆಪುö್ಪಡೀರ ಪ್ರದಿ ಪೂವಯ್ಯ, ಪೊನ್ನಿಮಾಡ ಸರಸ್ವತಿ, ಪಿ. ಮುತ್ತಮ್ಮ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಿರೀಶ್ ಉಪಸ್ಥಿತರಿದ್ದರು.