ಕೂಡಿಗೆ, ಜು. ೧೩: ಪ್ರೀತಿಗೆ ಬಿದ್ದ ವಿವಾಹಿತರಿಬ್ಬರು ಪಿರಿಯಾಪಟ್ಟಣದ ಸ್ವಗ್ರಾಮಗಳಿಂದ ಕೊಡಗಿನ ಗ್ರಾಮವೊಂದಕ್ಕೆ ಓಡಿ ಬಂದು ಒಂದು ತಿಂಗಳು ಸಂಸಾರ ನಡೆಸಿ ಇದೀಗ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ವಿಷ ಸೇವನೆಯಿಂದ ಮಹಿಳೆ ವಿದ್ಯಾ (೧೯) ಸಾವನ್ನಪ್ಪಿದ್ದರೆ ವಿಶ್ವನಾಥ್ (೩೫) ಎಂಬಾತನ ಸ್ಥಿತಿ ಚಿಂತಾಜನಕವಾಗಿದೆ.

ಘಟನೆ ವಿವರ: ಮೂಲತಃ ಪಿರಿಯಾಪಟ್ಟಣ ತಾಲೂಕಿನ ಕಣಗಾಲು ಗ್ರಾಮದ ಗಾರೆ ಕೆಲಸ ವೃತ್ತಿಯ ವಿಶ್ವನಾಥ್ (೩೫) ವಿವಾಹಿತನಾಗಿ ಆತನ ಪತ್ನಿಯೊಂದಿಗೆ ಹಲವು ವರ್ಷ ಸಂಸಾರ ನಡೆಸಿದ್ದಾನೆ. ಈ ದಂಪತಿಗೆ ಇಬ್ಬರು ಮಕ್ಕಳಾಗಿದ್ದು ಜೊತೆಯಲ್ಲಿ ಚೆನ್ನಾಗಿಯೇ ಬಾಳುವೆ ನಡೆಸುತ್ತಿದ್ದರು. ಇನ್ನೊಂದೆಡೆ ಚಿಕ್ಕನೇರಳೆ ಗ್ರಾಮದ ವಿದ್ಯಾ (೧೯) ಎಂಬಾಕೆಗೂ ವಿವಾಹವಾಗಿ ಆಕೆಯ ಪತಿಯೊಡನೆ ಸಮರ್ಪಕ ಜೀವನ ನಡೆಸುತ್ತಿದ್ದಳು. ತನ್ನ ಪತಿ ಹಾಗೂ ಮಕ್ಕಳೊಂದಿಗೆ ಸಾಮರಸ್ಯದ ಜೀವನ ಸಾಗಿತ್ತು.

ಈ ಎರಡು ಕುಟುಂಬಕ್ಕೂ ಕಾಲನ ಕರೆ ಬಂದAತೆ ಆಕಸ್ಮಿಕ ಸಂಬAಧವುAಟಾಗುವ ಸಂದರ್ಭ ಸೇರಿಕೊಂಡಿತು. ಪರಸ್ಪರ ಪರಿಚಯವಿಲ್ಲದಿದ್ದರೂ ವಿದ್ಯಾಳ ಮನೆಯಲ್ಲಿ ದುರಸ್ತಿ ಕೆಲಸಕ್ಕೆಂದು ಆಕೆ ವಾಸಿಸುತ್ತಿದ್ದ ಚಿಕ್ಕನೇರಳೆÀ ಗ್ರಾಮಕ್ಕೆ ಆಕೆಯ ಪತಿಯ ಪರಿಚಯದ ಮೇರೆಗೇ ವಿಶ್ವನಾಥ್ ಬಂದು ಗಾರೆ ಕೆಲಸ ಪ್ರಾರಂಭಿಸಿದ. ಮನೆಯ ಹಿತ ವಾತಾವರಣದಲ್ಲಿ ವಿಶ್ವನಾಥ್ ತನ್ನ ಗಾರೆ ಕೆಲಸದೊಂದಿಗೆ ಮನೆಯ ಗೃಹಿಣಿ ವಿದ್ಯಾಳೊಂದಿಗೆ ದಿಢೀರ್ ಪ್ರೇಮಾಂಕುರವಾಗಿದೆ. ಅದು ಎಷ್ಟೊಂದು ಬಲವಾಗಿ ಬೆಳೆಯಿತೆಂದರೆ ಕಳೆದ ಒಂದು ತಿಂಗಳ ಹಿಂದೆ ಇಬ್ಬರೂ ತಮ್ಮ ತಮ್ಮ

(ಮೊದಲ ಪುಟದಿಂದ) ಕುಟುಂಬಗಳನ್ನು ತೊರೆದು ಬಂದಿದ್ದಾರೆ. ವಿಶ್ವನಾಥ್ ತನ್ನ ಪತ್ನಿ ಮತ್ತು ಮಕ್ಕಳನ್ನು ಬಿಟ್ಟು ಬಂದರೆ ವಿದ್ಯಾ ಕೂಡ ತನ್ನ ಪತಿ ಮತ್ತು ಮಕ್ಕಳ ವ್ಯಾಮೋಹ ಬಿಟ್ಟು ಪ್ರೇಮ ಬಂಧನದÀಲ್ಲಿ ಸಿಲುಕಿ ಇಬ್ಬರೂ ಕೊಡಗಿನತ್ತ ಮುಖ ಮಾಡಿದ್ದಾರೆ. ಇಬ್ಬರೂ ತಮ್ಮ ಗ್ರ‍್ರಾಮಗಳನ್ನು ಹಾಗೂ ಮನೆಗಳನ್ನು ತೊರೆದು ಕೊಡಗಿನ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಂದರನಗರಕ್ಕೆ ಓಡಿ ಬಂದಿದ್ದಾರೆ. ಈ ಗ್ರಾಮದಲ್ಲಿ ಬಾಡಿಗೆ ಮನೆಯೊಂದರಲ್ಲಿ ಒಂದು ತಿಂಗಳ ಕಾಲ ದಾಂಪತ್ಯ ನಡೆಸಿದ್ದಾರೆ. ಆದರೆ, ವಿಧಿ ಬರಹವೇ ಬೇರೆಯಾಗಿತ್ತು. ಅದೇನು ಪರಿವರ್ತನೆಯಾಯಿತೋ ಏನೋ ಒಂದು ತಿಂಗಳ ಬಳಿಕ ಅವರ ತಪ್ಪಿನ ಅರಿವಾಗಿರಬೇಕು. ಮತ್ತೆ ಅವರ ಗ್ರಾಮಗಳಿಗೆ ತೆರಳಿ ತಮ್ಮ ಕುಟುಂಬವನ್ನು ಸೇರಿಕೊಳ್ಳುವ ಧೈರ್ಯವೂ ಬರಲಿಲ್ಲ, ಮನಸ್ಸೂ ವಿಹ್ವಲಗೊಂಡಿದೆ, ನೈತಿಕ ಸ್ಥೆöÊರ್ಯವೂ ಕುಸಿದಿದೆ.

ಸೋಮವಾರ ಸಂಜೆ ವಿಶ್ವನಾಥನ ಕಾರಿನಲ್ಲಿ ಮನೆಯಿಂದ ಹೊರಟ ಇಬ್ಬರೂ ಕೂಡ ಹೆಬ್ಬಾಲೆ ಬಳಿ ತಲುಪಿ ಕಾರು ನಿಲ್ಲಿಸಿದ್ದಾರೆ. ಕಾರಿನಲ್ಲಿಯೇ ಇಬ್ಬರೂ ವಿಷ ಸೇವಿಸಿದ್ದಾರೆ. ಬಳಿಕ ವಿಶ್ವನಾಥ್ ಹೆಬ್ಬಾಲೆಯ ಸ್ನೇಹಿತನೊಬ್ಬನಿಗೆ ಫೋನಾಯಿಸಿ ತಾವಿಬ್ಬರೂ ವಿಷ ಸೇವಿಸಿರುವ ಬಗ್ಗೆ ಮಾಹಿತಿ ನೀಡಿದ್ದಾನೆ. ಆತನ ಸ್ನೇಹಿತ ತಕ್ಷಣ ಸ್ಥಳಕ್ಕೆ ಧಾವಿಸಿ ಇಬ್ಬರನ್ನೂ ಕೂಡ ಪಿರಿಯಾಪಟ್ಟಣ ಆಸ್ಪತ್ರೆಗೆ ದಾಖಲಿಸಿದ್ದಾನೆ. ಆದರೆ ವಿದ್ಯಾ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾಳೆ. ಈ ನಡುವೆ ಪ್ರೇಮಿ ವಿಶ್ವನಾಥನ ಸ್ಥಿತಿ ಚಿಂತಾಜನಕ ವಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಒಯ್ಯಲಾಗಿದೆ. ಈ ಸಂಬAಧ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.