ಮಡಿಕೇರಿ, ಜು. ೧೩: ಕೊಡವ ಆಚಾರ - ವಿಚಾರಕ್ಕೆ ಸಂಬAಧಿಸಿದAತೆ ಅದರ ಇತಿಹಾಸದ ಬೇರು ಎಂಬAತೆ ಪರಿಗಣಿಸಲ್ಪಟ್ಟಿರುವ ವಿಶೇಷವಾದ ಜನಪದೀಯ ಸಂಸ್ಕೃತಿಯಾದ ಬಾಳೋಪಾಟ್ ಅನ್ನು ಪೋಷಿಸಿ ಬೆಳೆಸಲು ಇದೇ ಪ್ರಥಮ ಬಾರಿ ಕೊಡವಾಮೆರ ಕೊಂಡಾಟ ಸಂಸ್ಥೆ ‘‘ ಬಾಳೊಪಾಟ್‌ರ ಬಂಬAಬ’’ ಎಂಬ ಕೊಡವ ಕೌಟುಂಬಿಕವಾದ ಸ್ಪರ್ಧೆಯನ್ನು ಆಯೋಜಿಸಿದೆ. ಕೊಡವ ಸಂಸ್ಕೃತಿಯ ಅಡಿಪಾಯದಂತಿರುವ ಈ ಬಾಳೋಪಾಟ್‌ನ ಮಹತ್ವ ಪ್ರಸ್ತುತದ ಆಧುನಿಕ ಸಮಾಜದಲ್ಲಿ ಕ್ಷೀಣಿಸುವಂತೆ ಕಂಡು ಬರುತ್ತಿದೆ. ಅರಿವಿನ ಕೊರತೆಯಿಂದ ಇದು ನಶಿಸುವಂತಾಗಿದ್ದು, ಇದರ ಪುನರುತ್ಥಾನಕ್ಕಾಗಿ ಕೊಡವ ಕುಟುಂಬಗಳ ನಡುವೆ ಈ ಬಾರಿ ಪ್ರಾಯೋಗಿಕವಾಗಿ ಅಂತರ್‌ಜಾಲದ ಸಹಕಾರದೊಂದಿಗೆ ಸ್ಪರ್ಧೆ ಆಯೋಜಿಸಲಾಗಿದೆ. ಈ ಸ್ಪರ್ಧೆಗೆ ನಿರೀಕ್ಷೆಗೂ ಮೀರಿ ಸ್ಪಂದನ ಕಂಡುಬರುತ್ತಿರುವದಾಗಿ ಕೊಡವಾಮೆರ ಕೊಂಡಾಟ ಸಂಸ್ಥೆಯ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಳಿಯಪ್ಪ ಹಾಗೂ ಪದಾಧಿಕಾರಿಗಳು ತಿಳಿಸಿದ್ದಾರೆ. ಬಾಳೋಪಾಟ್‌ನ ದೇಶಕೆಟ್ಟ್ಪಾಟ್‌ನಲ್ಲಿ ಇಡೀ ಸೃಷ್ಟಿಯ ಚಿತ್ರಣವೇ ಅಡಗಿದೆ. ಇದನ್ನು ಎಲ್ಲಾ ಕೊಡವರು ಅರಿತಿರಬೇಕು ಎಂಬ ಉದ್ದೇಶ ಹಾಗೂ ಚಿಂತನೆಯೊAದಿಗೆ ಈ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಸ್ಪರ್ಧೆಯು ಅಂತರ್ ಜಾಲದಲ್ಲಿ ನಡೆಯಲಿದ್ದು, ವಿವಿಧ ಕುಟುಂಬಗಳು ಹೆಸರು ನೋಂದಾ ಯಿಸಿಕೊಳ್ಳಲು ಕೋರಲಾಗಿತ್ತು. ಹಾಡಲು ಸ್ಪರ್ಧಿಗಳಿಗೆ ೩೦ ನಿಮಿಷಗಳ ಅವಧಿಯೊಂದಿಗೆ ಆಯಾ ಕುಟುಂಬದ ಸದಸ್ಯರೇ ನಾಲ್ಕು ಜನರ ತಂಡವಾಗಿ ಸಾಂಪ್ರದಾಯಿಕ ಧಿರಿಸಿನೊಂದಿಗೆ ದುಡಿಪರಿಕರ ಸಹಿತವಾಗಿ ಹಾಡಬೇಕು ಎಂಬ ನಿಯಮ ಪ್ರಕಟಿಸಲಾಗಿತ್ತು. ಆರಂಭದಲ್ಲಿ ಕೇವಲ ಎಂಟತ್ತು ಕುಟುಂಬಗಳು ಬರಬಹುದೇನೋ ಎಂಬ ಭಾವನೆ ಇತ್ತು. ಆದರೆ ಇದೀಗ ಈ ಸ್ಪರ್ಧೆಗೆ ಹೆಚ್ಚಿನ ಬೆಂಬಲ ಕಂಡುಬರುತ್ತಿರುವದಾಗಿ ದಿನೇಶ್ ತಿಳಿಸಿದ್ದಾರೆ.

ಈ ತನಕ ೪೫ ಕುಟುಂಬಗಳು

ಸ್ಪರ್ಧೆಗೆ ಈ ತನಕ ಒಟ್ಟು ೪೫ ಕುಟುಂಬಗಳು ಹೆಸರು ನೋಂದಾ ಯಿಸಿಕೊಂಡಿವೆ. ಹೆಸರು ನೋಂದಾವಣೆಗೆ ತಾ. ೧೫ ಅಂತಿಮ ದಿನವಾಗಿತ್ತು. ಆದರೆ ಹಲವು ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಲು ಪೂರ್ವ ತಯಾರಿ ಮಾಡಿಕೊಂಡು ಆಸಕ್ತಿ ತೋರುತ್ತಿರುವ ಹಿನ್ನೆಲೆಯಲ್ಲಿ ತಾ. ೨೦ ರವರೆಗೆ ಸಮಯಾವಕಾಶವನ್ನು ವಿಸ್ತರಿಸಲಾಗಿದೆ.

ವಿಜೇತರಿಗೆ ಪ್ರಥಮ ರೂ ೧೦ ಸಾವಿರ, ದ್ವಿತೀಯ ರೂ. ೮ ಸಾವಿರ ಹಾಗೂ ತೃತೀಯ ರೂ. ೬ ಸಾವಿರ ಬಹುಮಾನ ನೀಡಲಾಗುವದು. ಸತತ ಮೂರು ವರ್ಷ ಪ್ರಥಮ ಸ್ಥಾನ ಪಡೆಯುವ ಕುಟುಂಬ ತಂಡಕ್ಕೆ ರೂ. ೨೫ ಸಾವಿರ ವಿಶೇಷ ಬಹುಮಾನ ನೀಡಲಾಗುವದು ಎಂದು ಸಂಘಟಕರು ತಿಳಿಸಿದ್ದಾರೆ. ಸ್ಪರ್ಧೆಯ ಸಂಚಾಲಕ ರಾಗಿ ಕುಂಞರ ಗಿರೀಶ್ ಭೀಮಯ್ಯ ಕಾರ್ಯನಿರ್ವಹಿಸುತ್ತಿದ್ದಾರೆ. ಆಸಕ್ತರು ಹೆಸರು ನೋಂದಾವಣೆ ಹಾಗೂ ಸ್ಪರ್ಧೆಯ ವೀಡಿಯೋವನ್ನು ೯೪೮೩೫೩೪೪೮೧ ಸಂಖ್ಯೆಗೆ ವ್ಯಾಟ್ಸಾಪ್ ಮೂಲಕ ಕಳುಹಿಸಬಹುದಾಗಿದೆ.