ಶನಿವಾರಸಂತೆ, ಜು. ೧೩: ಪಟ್ಟಣ ಹಾಗೂ ಹೋಬಳಿ ವ್ಯಾಪ್ತಿಯಲ್ಲಿ ಮಂಗಳವಾರ ಬೆಳಿಗ್ಗೆ ೬ ರಿಂದ ಮಧ್ಯಾಹ್ನ ೩ರ ವರೆಗೆ ಧಾರಾಕಾರ ಮಳೆ ಸುರಿಯಿತು. ಸ್ವಲ್ಪ ಬಿಡುವು ನೀಡಿದ ಮಳೆ ಸಂಜೆಯವರೆಗೂ ಜಿನುಗುತ್ತಲೇ ಇತ್ತು. ಚರಂಡಿ ತುಂಬಿ ರಸ್ತೆಯಲ್ಲಿ ನೀರು ಹರಿಯಿತು. ಈ ವ್ಯಾಪ್ತಿಯಲ್ಲಿ ಒಂದು ಇಂಚು ಮಳೆಯಾಗಿದೆ.
ಶನಿವಾರಸಂತೆ ಮತ್ತು ದುಂಡಳ್ಳಿ ಗ್ರಾ.ಪಂ. ವ್ಯಾಪ್ತಿಗೆ ವರ್ಷಾರಂಭದಿAದ ಈವರೆಗೆ ೩೦ ಇಂಚು ಮಳೆಯಾಗಿದೆ. ಕಾಜೂರು ಗ್ರಾಮದ ಹೊಳೆಯಲ್ಲಿ ನೀರಾಗಿದ್ದು, ಭತ್ತದ ಬೇಸಾಯಕ್ಕೆ ಅನುಕೂಲವಾಗಿದೆ. ಈ ವಿಭಾಗದ ಬಹುತೇಕ ರೈತರು ಗದ್ದೆಯಲ್ಲಿ ಈ ವಾರ ವಿಎನ್‌ಆರ್ ಹೈಬ್ರೀಡ್ ಭತ್ತದ ಬೀಜದ ಅಗೆ ಹಾಕಿದ್ದು, ೨೫ ದಿನಗಳಲ್ಲೆ ಸಸಿಮಡಿ ಸಿದ್ಧವಾಗಿ, ತಿಂಗಳಾAತ್ಯದಲ್ಲಿ ನಾಟಿ ಮಾಡಿ ಮುಗಿಸುತ್ತಾರೆ.
೩ ತಿಂಗಳಲ್ಲೆ ವಿಎನ್‌ಆರ್ ಭತ್ತ ಕೊಯ್ಲಿಗೆ ಬರುತ್ತದೆ. ಭೂಮಿ ಶೀತ ಹಿಡಿಯಲು ಇನ್ನೂ ಉತ್ತಮ ಮಳೆಯ ಅಗತ್ಯವಿದೆ. ಈ ವರ್ಷ ಭತ್ತದ ಬೆಳೆಗೆ ಮೋಸವಿಲ್ಲ. ಗಾಳಿಯ ಬೀಸುವಿಕೆ ಮಳೆಯನ್ನು ನಿರ್ಧರಿಸುತ್ತದೆ ಎನ್ನುತ್ತಾರೆ ರೈತ ಕಾಜೂರು ಚಂದ್ರಣ್ಣ.