ಮಡಿಕೇರಿ, ಜು. ೧೩: ಬೆಟ್ಟಗೇರಿ ಗ್ರಾ.ಪಂ. ವ್ಯಾಪ್ತಿಯ ಹೆರವನಾಡು ಗ್ರಾಮದ ಮೂಲಕ ಬೆಟ್ಟಗೇರಿಯಿಂದ ಬೆಟ್ಟತ್ತೂರಿಗೆ ಹಾದುಹೋಗುವ ರಸ್ತೆ ಬದಿಯಲ್ಲಿ ಬೃಹದಾಕಾರದ ಮರವೊಂದು ಒಣಗಿ ವಾಲಿ ನಿಂತಿದ್ದು, ಇದನ್ನು ತೆರವುಗೊಳಿಸಲು ಅವಂದೂರು ವಿವಿದ್ದೋದ್ದೇಶ ಸಹಕಾರ ಧವಸ ಭಂಡಾರ ಜಿಲ್ಲಾಧಿಕಾರಿಗೆ ಮನವಿ ಮಾಡಿದೆ.

ಈಗಾಗಲೇ ಮರದ ತುದಿಭಾಗ ಒಣಗಿದ್ದು, ಈಗಲೋ, ಆಗಲೋ ಬೀಳುವ ಪರಿಸ್ಥಿತಿಯಲ್ಲಿದ್ದು, ದಾರಿಹೋಕರ ಜೀವ ಅಪಾಯದಲ್ಲಿರುತ್ತದೆ. ಮರವು ಬೃಹತ್ ಕೊಂಬೆಗಳಿAದ ಕೂಡಿದ್ದಲ್ಲದೆ, ಪರಾವಲಂಬಿ ಸಸ್ಯಗಳಿಂದ ಆವೃತವಾಗಿ ಭಾರ ಹೆಚ್ಚಾಗಿ ಇರುವುದರಿಂದ ಮಳೆಗೆ ಬೀಳುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.