ಮಡಿಕೇರಿ, ಜು. ೧೩: ಮೂಲತಃ ಕೊಡಗಿನ ಕಲ್ಲೂರು ಗ್ರಾಮದ ಪ್ರಶಾಂತ್ ಕಲ್ಲೂರು ಅವರಿಗೆ ದಾದಾ ಸಾಹೇಬ್ ಫಾಲ್ಕೆ ಕುಟುಂಬದಿAದ ನೀಡಲಾಗುವ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಲಭಿಸಿದೆ.
ಇವರ ಸಾಮಾಜಿಕ ಸೇವೆ ಪರಿಗಣಿಸಿ ಈ ಪ್ರಶಸ್ತಿ ಲಭಿಸಿದೆ. ಕಲ್ಲೂರ್ ಸಿನಿಮಾಸ್ ಮೂಲಕ ಚಲನಚಿತ್ರ ನಿರ್ಮಾಣದಲ್ಲಿರುವ ಪ್ರಶಾಂತ್ ಕಲ್ಲೂರು ವೀರಶೈವ ಲಿಂಗಾಯತ ಯುವವೇದಿಕೆಯ ರಾಜ್ಯಾಧ್ಯಕ್ಷರು ಕೂಡ. ವೇದಿಕೆ ಮೂಲಕ ಒಂದು ದಶಕಗಳ ಕಾಲ ನಿರಂತರ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಇವರ ಸೇವೆಯನ್ನು ಗುರುತಿಸಿ ದಾದಾಸಾಹೇಬ್ ಫಾಲ್ಕೆ ಕುಟುಂಬಸ್ಥರು ಕೊಡಮಾಡುವ ಪ್ರತಿಷ್ಠಿತ ‘ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ೨೦೨೧’ ನೀಡಿದ್ದಾರೆ. ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ದಾದಾಸಾಹೇಬ್ ಫಾಲ್ಕೆ ಅವರ ಮೊಮ್ಮಗ ಚಂದ್ರಶೇಖರ್ ಫಾಲ್ಕೆ ಹಾಗೂ ಖ್ಯಾತ ಚಿತ್ರನಟ ಸುಮನ್ ತಲ್ವಾರ್ ಅವರಿಂದ ಪ್ರಶಾಂತ್ ಕಲ್ಲೂರ್ ಪ್ರಶಸ್ತಿ ಸ್ವೀಕರಿಸಿದರು.