ನಾಪೋಕ್ಲು, ಜು. ೧೩: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಭಾಗಮಂಡಲ ವಲಯ ವತಿಯಿಂದ ಕೊಟ್ಟೂರು ಮತ್ತು ಕಾರುಗುಂದ ಒಕ್ಕೂಟದ ಸ್ವಸಹಾಯ ತಂಡಗಳ ಸದಸ್ಯರಿಗೆ ಲಾಭಾಂಶ ವಿತರಣೆ ಮಾಡಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬೆಟ್ಟಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರ‍್ಯಾಲಿ ಮಾದಯ್ಯ, ಇತ್ತೀಚಿನ ದಿನಗಳಲ್ಲಿ ಮಧ್ಯಮ ಹಾಗೂ ಬಡ ವರ್ಗದ ಜನ ರಾಷ್ಟಿçÃಕೃತ ಬ್ಯಾಂಕ್‌ಗಳಿAದ ಸಾಲ ಪಡೆಯುವದು ಬಹಳ ಕಷ್ಟ. ಆದರೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಈ ಕಷ್ಟವನ್ನು ನಿವಾರಿಸಿ ಗ್ರಾಮೀಣ ಜನರ ಆರ್ಥಿಕ ಅಭಿವೃದ್ಧಿಯ ದೃಷ್ಟಿಯಿಂದ ರಾಷ್ಟಿçÃಕೃತ ಬ್ಯಾಂಕ್‌ಗಳಿAದ ಸಾಲ ಕೊಡಿಸುವ ವ್ಯವಸ್ಥೆ ಕಲ್ಪಿಸಿರುವದು ಶ್ಲಾಘನೀಯ ಎಂದರು.

ಈ ಸಂದರ್ಭ ಮಾತನಾಡಿದ ಯೋಜನೆಯ ಭಾಗಮಂಡಲ ವಲಯದ ಮೇಲ್ವಿಚಾರಕ ಸಂತೋಷ್, ಸದಸ್ಯರು ತಂಡಗಳಲ್ಲಿ ಮಾಡುವ ಆಂತರಿಕ ಸಾಲದ ವ್ಯವಹಾರದಿಂದ ಲಾಭಾಂಶ ಹೆಚ್ಚು ಬರುತ್ತದೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಂಡು ಯೋಜನೆಯ ಯಶಸ್ಸಿಗೆ ಸಹಕರಿಸಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾರುಗುಂದ ಒಕ್ಕೂಟದ ಅಧ್ಯಕ್ಷೆ ಅನಿತಾ, ಕೊಟ್ಟೂರು ಒಕ್ಕೂಟದ ಅಧ್ಯಕ್ಷೆ ಇಂದಿರಾ, ಸದಸ್ಯರು ಇದ್ದರು. ಸದಸ್ಯೆ ಪದ್ಮಾ ಸ್ವಾಗತ, ಸೇವಾಪ್ರತಿನಿಧಿ ಲಕ್ಷಿö್ಮÃ ನಿರೂಪಿಸಿ, ವಂದಿಸಿದರು.