ಶ್ರೀಮಂಗಲ, ಜು. ೧೩: ಕೇರಳದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚಾಗಿದ್ದು ಕುಟ್ಟ ಅಂತರಾಜ್ಯ ಗಡಿ ಚೆಕ್ ಪೋಸ್ಟ್ನಲ್ಲಿ ಪೊಲೀಸ್ ತಪಾಸಣೆ ತಪ್ಪಿಸಿ, ಕಳ್ಳ ದಾರಿ ಮೂಲಕ ಕೇರಳದಿಂದ ಜನರು ಕೊಡಗು ಜಿಲ್ಲೆಗೆ ಅಕ್ರಮವಾಗಿ ಪ್ರವೇಶಿಸುತ್ತಿದ್ದು ಇದನ್ನು ಕಟ್ಟುನಿಟ್ಟಾಗಿ ತಡೆಯಬೇಕು. ಇದರೊಂದಿಗೆ ಜಿಲ್ಲೆಗೆ ಪ್ರವಾಸಿಗರು ಪ್ರವೇಶಿಸುವುದನ್ನು ತಪ್ಪಿಸಲು ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳನ್ನು ಮುಚ್ಚಬೇಕು ಹಾಗೂ ಪ್ರವಾಸಿಗರನ್ನು ಜಿಲ್ಲೆಗೆ ನಿರ್ಬಂಧಿಸಬೇಕೆAದು ಶ್ರೀಮಂಗಲ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಮಾಣೀರ ಮುತ್ತಪ್ಪ ಅವರು ಜಿಲ್ಲಾಧಿಕಾರಿ ಅವರನ್ನು ಒತ್ತಾಯಿಸಿದ್ದಾರೆ.
ಎಲ್ಲಾ ಕ್ಷೇತ್ರದಲ್ಲೂ ಕೋವಿಡ್ ಹಿನ್ನೆಲೆ ಸಂಕಷ್ಟ ಎದುರಿಸುತ್ತಿದೆ, ಹೊರ ಜಿಲ್ಲೆ, ಹೊರ ರಾಜ್ಯದ ಕಾರ್ಮಿಕರನ್ನು ಜಿಲ್ಲೆಯ ಸುರಕ್ಷತೆ ಹಿನ್ನೆಲೆ ಕೆಲಸಕ್ಕೆ ಕರೆಸಿಕೊಳ್ಳದೆ, ತೋಟ-ಗದ್ದೆ ನಿರ್ವಹಣೆ ಇಲ್ಲದೆ ಬೆಳೆಗಾರರು ನಷ್ಟ ಅನುಭವಿಸಿದ್ದಾರೆ. ಹೀಗಿರುವಾಗ ಪ್ರವಾಸೋದ್ಯಮದವರು ಸಹ ಜಿಲ್ಲೆಯ ಸುರಕ್ಷತೆ ದೃಷ್ಟಿಯಿಂದ ಚಿಂತಿಸಬೇಕು ಎಂದು ಆಗ್ರಹಿಸಿದರು.
ಪೊನ್ನಂಪೇಟೆಯಿAದ ಶ್ರೀಮಂಗಲಕ್ಕೆ ೬೬ ಕೆ.ವಿ. ವಿದ್ಯುತ್ ಮಾರ್ಗ ಮಂಜೂರಾಗಿದ್ದು, ಟೆಂಡರ್ ಆಗಿದೆ. ಈ ಕಾಮಗಾರಿ ಶೀಘ್ರವಾಗಿ ಮಾಡಬೇಕು. ಶ್ರೀಮಂಗಲ ವಿಭಾಗದಲ್ಲಿ ಅತಿ ಹೆಚ್ಚಿನ ಲೋಡ್ನಿಂದ ವಿದ್ಯುತ್ ಅಡಚಣೆ ಹೆಚ್ಚಾಗಿದೆ. ಶ್ರೀಮಂಗಲ ವಿದ್ಯುತ್ ಸರಬರಾಜು ಕೇಂದ್ರದಲ್ಲಿ ಬ್ರೇಕರ್ ಮತ್ತು ಫೀಡರ್ನಲ್ಲಿ ತಾಂತ್ರಿಕ ದೋಷದೊಂದಿಗೆ ಲೈನ್ಮ್ಯಾನ್ಗಳ ಕೊರತೆಯಿಂದ ದಿನನಿತ್ಯ ವಿದ್ಯುತ್ ಸಮಸ್ಯೆ ಕಾಡುತ್ತಿದೆ. ಆದ್ದರಿಂದ ೬೬ ಕೆ.ವಿ. ಯೋಜನೆಯನ್ನು ಕೂಡಲೇ ಅನುಷ್ಠಾನಕ್ಕೆ ತರಬೇಕೆಂದು ಮಾಣೀರ ಮುತ್ತಪ್ಪ ಒತ್ತಾಯಿಸಿದರು.
ಕೊಡಗು ಬೆಳೆಗಾರರ ಒಕ್ಕೂಟದ ಜಂಟಿ ಕಾರ್ಯದರ್ಶಿ ಬಾಚಂಗಡ ದಾದ ದೇವಯ್ಯ ಅವರು ಮಾತನಾಡಿ, ಶ್ರೀಮಂಗಲ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳಲ್ಲಿ ಕಾಡಾನೆ ಹಾವಳಿ ಮೀತಿ ಮೀರಿದೆ. ಕುರ್ಚಿ, ಬೀರುಗ, ಕುಮಟೂರು ಗ್ರಾಮದಲ್ಲಿ ೨೫-೩೦ ಕಾಡಾನೆಗಳ ಹಿಂಡು ಗ್ರಾಮದಲ್ಲಿ ಸುತ್ತಾಡುತ್ತಿವೆ. ಇದರಿಂದ ತೋಟದ ಕೆಲಸಕ್ಕೆ ಬೆಳೆಗಾರರು-ಕಾರ್ಮಿಕರಿಗೆ ಹೋಗಲು ಸಾಧ್ಯವಿಲ್ಲದಂತಾಗಿದೆ. ಇದರೊಂದಿಗೆ ಅಪಾರ ಪ್ರಮಾಣದಲ್ಲಿ ಬೆಳೆ ನಾಶವಾಗಿದೆ. ಕೂಡಲೇ ವಿಶೇಷ ತಂಡ ರಚಿಸಿ ಕಾಡಾನೆ ಹಿಂಡುಗಳನ್ನು ಅರಣ್ಯಕ್ಕೆ ಅಟ್ಟಬೇಕು. ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಲು ವಿಶೇಷ ಕಾರ್ಯಪಡೆಯನ್ನು ಅರಣ್ಯ ಇಲಾಖೆ ರಚಿಸಿದ್ದು, ಇದನ್ನು ಶ್ರೀಮಂಗಲದಲ್ಲಿ ನಿಯೋಗಿಸಿಬೇಕು. ಇದರೊಂದಿಗೆ ಹಲವು ದಶಕಗಳಿಂದ ಎಲ್ಲೇ ಮೀರಿರುವ ವನ್ಯ ಪ್ರಾಣಿ ಉಪಟಳ ತಡೆಗೆ ಶಾಶ್ವತ ಯೋಜನೆ ರೂಪಿಸಲು ಜನಪ್ರತಿನಿಧಿಗಳು, ಇಲಾಖೆಯ ಉನ್ನತ ಅಧಿಕಾರಿಗಳು ವಿಶೇಷ ಗಮನಹರಿಸಲು ಎಂದು ಆಗ್ರಹಿಸಿದರು.
ಸಭೆಯಲ್ಲಿ ಚೇಂಬರ್ ಆಫ್ ಕಾಮರ್ಸ್ನ ಉಪಾಧ್ಯಕ್ಷ ಬೊಳ್ಳಾಜಿರ ಅಶೋಕ್, ಬೆಳೆಗಾರ ಒಕ್ಕೂಟದ ಸದಸ್ಯ ಚೆಟ್ಟಂಡ ರಘು ಹಾಜರಿದ್ದರು.