ಮಡಿಕೇರಿ, ಜು.೧೩: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಅರೆಭಾಷೆ ಲಲಿತ ಪ್ರಬಂಧ ಸ್ಪರ್ಧೆಯ ವಿಜೇತರನ್ನು ಆಯ್ಕೆ ಮಾಡಿದ್ದು, ವಿಜೇತರ ವಿವರ ಇಂತಿದೆ.

ಕಡೇ ಕಾಲದ ಕಾಳಜಿ ಎಂಬ ಪ್ರಬಂಧಕ್ಕೆ ಕೊಟ್ಟಕೇರಿಯನ ಲೀಲಾ ದಯಾನಂದ ಅವರು ಪ್ರಥಮ, ಚಾಂಪ-ಚಾAಪವ್ವ ಮತ್ತೆ ಪಿಳ್ಳಿಕ ಪ್ರಬಂಧಕ್ಕೆ ವಿಶ್ವನಾಥ ಎಡಿಕೇರಿ ಅವರು ದ್ವಿತೀಯ ಮತ್ತು ನೋಡಿಕೆ ಹೋದುಲೆನಾ ಪ್ರಬಂಧಕ್ಕೆ ಕವಿತಾ ಎ.ವೈ ಅವರು ಹಾಗೂ ರೊಟ್ಟಿ ಸುಟ್ಟಾತ್ ಪ್ರಬಂಧಕ್ಕೆ ಲೀಲಾ ದಾಮೋದರ ಅವರು ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ರಿಜಿಸ್ಟಾçರ್ ತಿಳಿಸಿದ್ದಾರೆ.