ಮಡಿಕೇರಿ, ಜು.೧೩: ಆಕಾಂಕ್ಷಾ ಸಿಎಸ್‌ಆರ್ ಕಾರ್ಯಕ್ರಮದಡಿಯಲ್ಲಿ ಅಪೋಲೋ ಮೆಡಿಸ್ಕಿಲ್ಸ್ ಸಂಸ್ಥೆಯು ೧೨೦೦೦ ಅಭ್ಯರ್ಥಿಗಳಿಗೆ ಆರೋಗ್ಯ ವಲಯದಲ್ಲಿ ೧೦ ರಿಂದ ೨೦ ದಿನದ ವಲಯದಲ್ಲಿ ಉದ್ಯೋಗಾವಕಾಶ ನೀಡಿ ತಿಂಗಳಿಗೆ ರೂ.೧೩ ಸಾವಿರದಿಂದ ೨೫ ಸಾವಿರದವರೆಗೆ ಹಾಗೂ ಭತ್ಯೆಗಳ ಸಮೇತ ವೇತನ ನೀಡಲಿದ್ದಾರೆ.

ಈ ಕಾರ್ಯಕ್ರಮಕ್ಕೆ ಜುಲೈ, ೧೫ ರಂದು ವಿಶ್ವ ಕೌಶಲ್ಯ ದಿನಾಚರಣೆ ಅಂಗವಾಗಿ ಚಾಲನೆ ನೀಡಲಿದ್ದಾರೆ. ೧೦ ಮತ್ತು ೧೨ ನೇ ತರಗತಿಯಲ್ಲಿ ಉತ್ತೀರ್ಣರಾದ ಅಥವಾ ಶಾಲೆ ಬಿಟ್ಟಿರುವ ಮಕ್ಕಳು ಈ ತರಬೇತಿಗೆ ಅರ್ಹರಾಗಿರುತ್ತಾರೆ.

ಆದುದರಿಂದ ಯುವ ಸಂಘಗಳು ಮತ್ತು ರಾಷ್ಟಿçÃಯ ಸೇವಾ ಸಂಸ್ಥೆಯ ಸ್ವಯಂ ಸೇವಕರುಗಳು ಇಚ್ಚಿಸುವವರು ತಮ್ಮ ವಿವರಗಳನ್ನು ಗೂಗಲ್ ಶೀಟ್ Uಖಐ:hಣಣಠಿs’’//ಜಿoಡಿms.gಟe/೬ಥಿಃಒಥಿeಚಿmಏಛಿಖಠಿg೪ಜಿಛಿ೬ ನಲ್ಲಿ ನೊಂದಣಿ ಮಾಡಿಕೊಳ್ಳುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಗುರುಸ್ವಾಮಿ ಅವರು ತಿಳಿಸಿದ್ದಾರೆ.