ಸಿದ್ದಾಪುರ, ಜು. ೧೨: ಆಕಸ್ಮಿವಾಗಿ ಮನೆಗೆ ಬೆಂಕಿ ತಗುಲಿ ಮನೆಯು ಸಂಪೂರ್ಣ ಸುಟ್ಟು ಕರಕಲಾದ ಘಟನೆ ಸಿದ್ದಾಪುರ ಸಮೀಪದ ಅವರೆಗುಂದ ಹಾಡಿಯಲ್ಲಿ ಭಾನುವಾರ ರಾತ್ರಿ ನಡೆದಿದೆ.
ಸಿದ್ದಾಪುರದ ಕರಡಿಗೋಡು ಗ್ರಾಮದ ಅವರೆಗುಂದ ನಿವಾಸಿಯಾಗಿರುವ ಎಸ್.ಪಿ. ಗಣೇಶ್ ಮನೆಯ ಬಳಿ ಕಾಡಾನೆ ಹಾವಳಿ ಇರುವ ಕಾರಣ ಎಂದಿನAತೆ ಸಮೀಪದ ಸಂಬAಧಿಕರ ಮನೆಗೆ ನಿದ್ರಿಸಲು ಹೋಗಿದ್ದರು ಎನ್ನಲಾಗಿದೆ. ಕೆಲ ಸಮಯದ ಬಳಿಕ ಗಣೇಶ್ ಅವರ ಮನೆಯ ಮೇಲ್ಛಾವಣಿಯಲ್ಲಿ ಹೊಗೆ ಕಾಣಿಸಿಕೊಂಡಿದ್ದು, ಸ್ಥಳೀಯರು ಗಣೇಶ್ ಅವರಿಗೆ ದೂರವಾಣಿ ಮೂಲಕ ಮನೆಗೆ ಬೆಂಕಿ ತಗುಲಿದ ವಿಚಾರ ತಿಳಿಸಿದ್ದಾರೆ.
ಕೂಡಲೇ ಗಣೇಶ್ ಹಾಗೂ ಸ್ಥಳೀಯ ನಿವಾಸಿಗಳು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಅಷ್ಟರಲ್ಲಿ ಮನೆಯು ಹೊತ್ತಿ ಉರಿಯಲು ಆರಂಭಿಸಿದ್ದು, ಮನೆಯಲ್ಲಿದ್ದ ಪೀಠೋಪಕರಣಗಳು, ಬಟ್ಟೆಗಳು ಬೆಂಕಿಯಲ್ಲಿ ಉರಿದಿದ್ದು, ಅಪಾರ ನಷ್ಟ ಸಂಭವಿಸಿದೆ. ಈ ಬಗ್ಗೆ ಗಣೇಶ್ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸಿದ್ದಾಪುರ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಕಡು ಬಡತನದಲ್ಲಿರುವ ಗಣೇಶ್ ತನ್ನ ಮನೆಯನ್ನು ಕಳೆದುಕೊಂಡು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.