ಗೋಣಿಕೊಪ್ಪಲು : ಅಮ್ಮತ್ತಿ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ ವತಿಯಿಂದ ಕೋವಿಡ್ ಮುಂಚೂಣಿ ಕಾರ್ಯಕರ್ತ ರಾದ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷೆಯರು ಹಾಗೂ ಆಶಾ ಕಾರ್ಯಕರ್ತೆಯರಿಗೆ ದಿನಸಿ ಕಿಟ್‌ಗಳನ್ನು ವಿತರಿಸಲಾಯಿತು.
ಅಮ್ಮತ್ತಿ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಶನ್ ಅಧ್ಯಕ್ಷರಾದ ಅಲ್ಲಾರಂಡ ದೀಪಕ್ ಅಪ್ಪಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಪದಾಧಿಕಾರಿಗಳಾದ ಮೊಳ್ಳೆರ ಮನೋಜ್, ಚಕ್ರವರ್ತಿ ಪೊನ್ನಣ್ಣ ಹಾಗೂ ಸದಸ್ಯರು ಉಪಸ್ಥಿತರಿದ್ದರು.ಗೋಣಿಕೊಪ್ಪಲು : ಅಮ್ಮತ್ತಿ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ ವತಿಯಿಂದ ಕೋವಿಡ್ ಮುಂಚೂಣಿ ಕಾರ್ಯಕರ್ತ ರಾದ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷೆಯರು ಹಾಗೂ ಆಶಾ ಕಾರ್ಯಕರ್ತೆಯರಿಗೆ ದಿನಸಿ ಕಿಟ್‌ಗಳನ್ನು ವಿತರಿಸಲಾಯಿತು.
ಅಮ್ಮತ್ತಿ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಶನ್ ಅಧ್ಯಕ್ಷರಾದ ಅಲ್ಲಾರಂಡ ದೀಪಕ್ ಅಪ್ಪಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಪದಾಧಿಕಾರಿಗಳಾದ ಮೊಳ್ಳೆರ ಮನೋಜ್, ಚಕ್ರವರ್ತಿ ಪೊನ್ನಣ್ಣ ಹಾಗೂ ಸದಸ್ಯರು ಉಪಸ್ಥಿತರಿದ್ದರು.ವೀರಾಜಪೇಟೆ : ನಮ್ಮ ಜೀವ ನಮ್ಮ ಕೈಯಲ್ಲಿದೆ. ನಮ್ಮ ಹಿಂದೆ ನಮ್ಮ ಕುಟುಂಬ ಇದೆ ಎಂದು ಮನದಲ್ಲಿಟ್ಟುಕೊಂಡು ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಯಾರು ಹಿಂದೇಟು ಹಾಕಬೇಡಿ ಎಂದು ವೀರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಮನವಿ ಮಾಡಿದರು.
ಕರ್ನಾಟಕ ಕಾರ್ಮಿಕ ಇಲಾಖೆ ವತಿಯಿಂದ ಪುರಭವನದಲ್ಲಿ ಕಟ್ಟಡ ಕಾರ್ಮಿಕರಿಗೆ ಆಯೋಜಿಸಲಾಗಿದ್ದ ಆಹಾರ ಕಿಟ್ ವಿತರಿಸಿ ಮಾತನಾಡಿ, ರಾಜ್ಯದಲ್ಲಿ ೨೫ ಲಕ್ಷಕ್ಕೂ ಅಧಿಕ ಕಟ್ಟಡ ಕಾರ್ಮಿಕರಿದ್ದು, ಲಾಕ್‌ಡೌನ್ ಆದ ಮೇಲೆ ಕಟ್ಟಡ ಕಾರ್ಮಿಕರು ಸೇರಿದಂತೆ ಉಳಿದ ಕಾರ್ಮಿಕರಿಗೂ ಕೆಲಸ ಇಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವತಿಯಿಂದ ಕಿಟ್‌ಗಳನ್ನು ನೀಡಲಾಗುತ್ತಿದೆ. ವೀರಾಜಪೇಟೆ ತಾಲೂಕಿನಲ್ಲಿ ನೋಂದಾಯಿತ ೨೪೦ ಕಟ್ಟಡ ಕಾರ್ಮಿಕರಿಗೆ ಕಿಟ್‌ಗಳನ್ನು ನೀಡಲಾಗಿದೆ. ಆನ್‌ಲಾಕ್ ಆಗಿದೆ ಎಂದು ಎಲ್ಲಾರು ಬೇಕಾಬಿಟ್ಟಿ ತಿರುಗಾಡುವುದು ಸಮಂಜಸವಲ್ಲ. ಎಚ್ಚರದಲ್ಲಿ ನಾವಿದ್ದರೆ ಉತ್ತಮ ಎಂದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಶ್ಮಿತಾ ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷೆ ಸುನಿತಾ ಜೂನಾ, ಜಿಲ್ಲಾ ಕಾರ್ಮಿಕ ಅಧಿಕಾರಿ ಅನಿಲ್, ತಾಲೂಕು ಅಧಿಕಾರಿ ಜಯಣ್ಣ, ಮುಖ್ಯಾಧಿಕಾರಿ ಹೇಮಕುಮಾರ್, ಪಟ್ಟಣ ಪಂಚಾಯಿತಿ ಸದಸ್ಯರಾದ ಮತೀನ್, ಆಶಾ ಸುಬ್ಬಯ್ಯ, ಯಶೋಧಾ, ಅನಿತಾ, ಸುನೀತಾ, ರಜನಿಕಾಂತ್, ಸಚಿನ್ ಮತ್ತಿತರರು ಉಪಸ್ಥಿತರಿದ್ದರು.ಗೋಣಿಕೊಪ್ಪ : ಕೊರೊನ ಬಾಧೆಯಿಂದ ಸಂಕಷ್ಟಕ್ಕೆ ಒಳಗಾದ ದೇವರಪುರ ಗ್ರಾ.ಪಂ. ವ್ಯಾಪ್ತಿಯ ಹೊಸಳ್ಳಿ, ಕೋಟೆಬೆಟ್ಟ ಎಸ್ಟೇಟ್ ಕಾರ್ಮಿಕರಿಗೆ ಆಹಾರ ಕಿಟ್‌ಗಳನ್ನು ಶಾಸಕ ಕೆ.ಜಿ. ಬೋಪಯ್ಯ ಅವರು ನೀಡಿದರು. ಹೊಸಳ್ಳಿ ಎಸ್ಟೇಟಿನ ಲೈನ್ ಮನೆಗಳಿಗೆ ತೆರಳಿದ ಶಾಸಕರು ಕಾರ್ಮಿಕರ ಆರೋಗ್ಯದ ಬಗ್ಗೆ ಮಾಹಿತಿ ಪಡೆದು ೬೦ಕ್ಕೂ ಹೆಚ್ಚು ಕುಟುಂಬಗಳಿಗೆ ಅಕ್ಕಿ, ಬೆಳೆ, ಸಕ್ಕರೆ, ಬೆಲ್ಲ, ತೆಂಗಿನಕಾಯಿ, ಸೋಪು ಹಾಗೂ ಸಂಬಾರ ಪದಾರ್ಥಗಳು ಸೇರಿದಂತೆ ಸುಮಾರು ೧೫ಕ್ಕೂ ಹೆಚ್ಚು ಆಹಾರ ವಸ್ತುಗಳನ್ನು ವಿತರಿಸಿದರು. ತಾಲೂಕು ಬಗರ್‌ಹುಕುಂ ಸಾಗುವಳಿ ಸಕ್ರಮೀಕರಣ ಅಧ್ಯಕ್ಷ ಕಾಡ್ಯಮಾಡ ಗಿರೀಶ್‌ಗಣಪತಿ, ದೇವರಪುರ ಗ್ರಾ.ಪಂ. ಅಧಕ್ಷೆ ಟಿ.ಜಿ. ಶಾರದ, ಉಪಾಧ್ಯಕ್ಷ ಮನೆಯಪಂಡ ಮಹೇಶ್, ಸದಸ್ಯ ಹೆಚ್.ಯು ಮಣಿಕಂಠ, ಸರವಣ, ಕಾಣತಂಡ ದಮಯಂತಿ, ಬಸವಂತ್‌ಕುಮಾರ್, ತಿತಿಮತಿ ಬಿಜೆಪಿ ಶಕ್ತಿ ಕೇಂದ್ರ ಪ್ರಮುಖ್ ಎನ್.ಎನ್. ಅನೂಪ್‌ಕುಮಾರ್, ಸೇವಾಭಾರತಿ ಕಾರ್ಯಕರ್ತ ಅಭಿ, ಪಿ.ಡಿ.ಓ ಹೆಚ್.ಯು. ಚಂದ್ರ, ಉಪಸ್ಥಿತರಿದ್ದರು.ಭಾಗಮಂಡಲ : ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲಾಡಳಿತ, ಕಾರ್ಮಿಕ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಭಾಗಮಂಡಲದ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಕೋವಿಡ್ ೧೯ರ ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ಸುರಕ್ಷಾ ಕಿಟ್ ಹಾಗೂ ಆಹಾರ ಧಾನ್ಯಗಳ ಕಿಟ್ ವಿತರಿಸಲಾಯಿತು.
ಕಿಟ್ ವಿತರಿಸಿ ಮಾತನಾಡಿದ ಶಾಸಕ ಕೆ. ಜಿ. ಬೋಪಯ್ಯ ಜಿಲ್ಲೆಯಲ್ಲಿ ಕೊರೊನದಿಂದಾಗಿ ಬಹಳಷ್ಟು ಜನರು ಸಂಕಷ್ಟದಲ್ಲಿದ್ದಾರೆ. ಕೊರೊನಾ ಮುಕ್ತವಾಗಲು ಜನರ ಸಹಕಾರ ಮುಖ್ಯ. ಎರಡು ಡೋಸ್ ಲಸಿಕೆ ಪಡೆದಿದ್ದೇವೆ ಎಂದು ನಿರ್ಲಕ್ಷö್ಯ ಮಾಡಿದರೆ ಕೊರೊನಾ ಮತ್ತೆ ಕಾಡಬಹುದು ಎಂದರು. ಸಭೆಯ ಅಧ್ಯಕ್ಷತೆಯನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೊಸೂರು ಸತೀಶ್‌ಕುಮಾರ್ ವಹಿಸಿದ್ದರು. ಭಾಗಮಂಡಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಮಿತ, ಸದಸ್ಯರಾದ ಕಾಳನ ರವಿ, ಜಯಂತ್, ನಾಗೇಶ್, ಗಂಗಮ್ಮ, ಅಯ್ಯಂಗೇರಿ ಗ್ರಾಮಪಂಚಾಯಿತಿ ಅಧ್ಯಕ್ಷ ರಂಜಿತ್, ಬಿ.ಜೆ.ಪಿ. ಸ್ಥಾನೀಯ ಸಮಿತಿ ಅಧ್ಯಕ್ಷ ಪಿ.ಎಂ. ರಾಜೀವ್, ಬಾಲಕೃಷ್ಣ ಅಮೆ, ನಿರ್ದೇಶಕರಾದ ನಂಜುAಡಪ್ಪ, ಕಾರ್ಮಿಕ ಇಲಾಖೆಯ ಅನಿಲ್ ಭಕ್ತ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಪಾಲಿಬೆಟ್ಟ : ಬೆಂಗಳೂರಿನ ಯು ಎಸ್ ಟಿ ಸಂಸ್ಥೆ , ಬನವಾಸಿ ಕನ್ನಡಿಗರ ತಂಡ, ಸ್ವಸ್ಥ ರಂಗತAಡದಿAದ ನಮ್ಮ ಕೊಡಗು ತಂಡದ ನೇತೃತ್ವದಲ್ಲಿ ನಾಗರಹೊಳೆ ಸುತ್ತಮುತ್ತಲ ಹಾಡಿ ಹಾಗೂ ಚೆನ್ನಯ್ಯನ ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೊಟ್ಟೆಪಾರೆ ಹಾಡಿಯ ಕುಟುಂಬಗಳಿಗೆ ಆಹಾರ ಪದಾರ್ಥಗಳ ಕಿಟ್ ವಿತರಿಸಿದರು. ಆದಿವಾಸಿ ಸಂಘಟನೆಯ ಮುಖಂಡ ಜೆ. ಕೆ ಅಪ್ಪಾಜಿ ಮಾತನಾಡಿ ಚೆನ್ನಯ್ಯನ ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೊಟ್ಟೆಪಾರೆ ಹಾಡಿ, ದಿಡ್ಡಳ್ಳಿ ಹಾಡಿ ಪೊನ್ನಂಪೇಟೆ ತಾಲೂಕಿನ ನಾಗರಹೊಳೆ ವ್ಯಾಪ್ತಿಯ ಹಾಡಿಗಳಲ್ಲಿರುವ ನೂರ ಐವತ್ತಕ್ಕೂ ಹೆಚ್ಚು ಆದಿವಾಸಿ ಕುಟುಂಬಗಳಿಗೆ ಸ್ಯಾನಿಟೈಸರ್, ಮಾಸ್ಕ್, ಬೆಡ್ ಶೀಟ್,ಸ್ವೆಟರ್ , ಅಕ್ಕಿ ಸೇರಿದಂತೆ ಆಹಾರ ಪದಾರ್ಥಗಳ ಕಿಟ್‌ಗಳನ್ನು ವಿತರಿಸಿದ್ದಾರೆ. ಬೆಂಗಳೂರಿನ ಬನವಾಸಿ ಕನ್ನಡಿಗರ ತಂಡದ ಜೈಕಿರಣ್ ಮಾತನಾಡಿ ಹಲವು ವರ್ಷಗಳಿಂದ ಕೊಡಗು ಜಿಲ್ಲೆಗೆ ಸಮಾಜ ಸೇವಾ ಸಂಘಟನೆಗಳ ಸಹಕಾರದಿಂದ ‘ನಮ್ಮ ಕೊಡಗು’ ತಂಡದ ನೇತೃತ್ವದಲ್ಲಿ ಹಲವಾರು ಸೇವಾ ಕಾರ್ಯಗಳನ್ನು ಮಾಡಲಾಗಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಜನರು ಸಂಕಷ್ಟದಲ್ಲಿರುವುದನ್ನು ಅರಿತು ಜಿಲ್ಲೆಯ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಮನೋಭಾವದಿಂದ ಇದುವರೆಗೂ ಸಾವಿರಕ್ಕೂ ಹೆಚ್ಚು ಮಂದಿಗೆ ಕಿಟ್‌ಗಳನ್ನು ವಿತರಿಸಲಾಗಿದೆ ಎಂದರು. ಬೆಂಗಳೂರಿನ ಸ್ವಸ್ಥ ರಂಗ ತಂಡದ ಶಮಂತ್, ಬನವಾಸಿ ಕನ್ನಡಿಗರ ತಂಡದ ಕಿರಣ್ ಮಾಯಿ ಶರ್ಮಾ, ‘ನಮ್ಮ ಕೊಡಗು’ ತಂಡದ ಲೋಹಿತ್, ಭೂಮಿ ಮತ್ತು ವಸತಿ ವಂಚಿತ ಹೋರಾಟ ಸಮಿತಿಯ ನಿರ್ವಾಣಪ್ಪ ಸೇರಿದಂತೆ ಮತ್ತಿತರರು ಹಾಜರಿದ್ದರು