ಮಡಿಕೇರಿ, ಜು. ೧೨: ಟೋಕಿಯೋ ಒಲಂಪಿಕ್ಸ್ನಲ್ಲಿ ಭಾಗವಹಿಸುತ್ತಿರುವ ಭಾರತೀಯ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿ ಅವರ ಮನೋಸ್ಥೆöÊರ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಭಾರತದ ಪ್ರಧಾನಮಂತ್ರಿ ಅವರು ತಾ. ೧೩ ರಂದು ಸಂಜೆ ೫ ಗಂಟೆಗೆ ಕ್ರೀಡಾಪಟು ಗಳೊಂದಿಗೆ ಸಂವಾದ ಮಾಡಲಿದ್ದಾರೆ.
ಈ ಸಂವಾದ ಕಾರ್ಯಕ್ರಮವು ಎಲ್ಲರಿಗೂ ಮುಕ್ತವಾಗಿದ್ದು, ಈ ಕಾರ್ಯಕ್ರಮವನ್ನು ವೀಕ್ಷಿಸಲು hಣಣಠಿ://ಠಿmeveಟಿಣs.ಟಿಛಿog.gov.iಟಿನಲ್ಲಿ ನೋಂದಣಿ ಮಾಡಿಕೊಳ್ಳಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಗುರುಸ್ವಾಮಿ ಅವರು ತಿಳಿಸಿದ್ದಾರೆ.