ಮಡಿಕೇರಿ, ಜು. ೧೨: ಮಂಗಳೂರು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿಯಾಗಿ ಕರ್ತವ್ಯ ನಿರ್ವಹಿಸಿ ಸೇವೆಯಿಂದ ನಿವೃತ್ತಿಯಾದ ವಿನಯ್ ಗಾಂವ್ಕರ್ ಅವರ ಸ್ಥಾನಕ್ಕೆ ಮಡಿಕೇರಿ ಡಿವೈಎಸ್‌ಪಿಯಾಗಿದ್ದ ಬಾರಿಕೆ ದಿನೇಶ್ ನಿಯುಕ್ತಿಗೊಂಡಿದ್ದಾರೆ. ದಿನೇಶ್ ಅವರು ಇಂದು ಕಾನೂನು ಸುವ್ಯವಸ್ಥೆ ಡಿಸಿಪಿ ಹರಿರಾಂ ಶಂಕರ್ ಅವರಿಂದ ಅಧಿಕಾರ ಸ್ವೀಕರಿಸಿದರು. ಬೈಂದೂರು. ಮೂಡಿಗೆರೆ, ಮಂಗಳೂರು, ಮಣಿಪಾಲ, ಲೋಕಾಯುಕ್ತ, ಕರಾವಳಿ ಕಾವಲು ಪಡೆ. ನಕ್ಸಲ್ ನಿಗ್ರಹ ದಳದಲ್ಲಿ ಕಾರ್ಯನಿರ್ವಹಿಸಿದ್ದ ಬಾರಿಕೆ ದಿನೇಶ್ ಇದೀಗ ಪದೋನ್ನತಿಯೊಂದಿಗೆ ಡಿಸಿಪಿಯಾಗಿ ಮಂಗಳೂರು ಅಪರಾಧ ಮತ್ತು ಸಂಚಾರ ವಿಭಾಗದ ಉಸ್ತುವಾರಿ ಹೊಣೆಯನ್ನು ದಿನೇಶ್ ವಹಿಸಿಕೊಂಡಿದ್ದಾರೆ.