ಕುಶಾಲನಗರ, ಜು. ೧೨: ಪಟ್ಟಣದ ಹೃದಯ ಭಾಗದಲ್ಲಿ ರಸ್ತೆ ಬದಿಯಲ್ಲಿ ನಿಲುಗಡೆಗೊಳಿಸಿದ್ದ ಕಾರೊಂದನ್ನು ಕಳವು ಮಾಡಿದ ಘಟನೆ ಸೋಮವಾರ ಬೆಳಗ್ಗೆ ಕುಶಾಲನಗರದಲ್ಲಿ ನಡೆದಿದೆ.

ಸಮೀಪದ ಕೊಪ್ಪ ಕ್ಯಾಂಪ್ ರಸ್ತೆ ನಿವಾಸಿ ಮಹಿಳೆ ಒಬ್ಬರು ಕಾರನ್ನು ಕುಶಾಲನಗರ -ಮೈಸೂರು ಮುಖ್ಯ ರಸ್ತೆಯಲ್ಲಿ ನಿಲ್ಲಿಸಿ ಜಿಮ್‌ಗೆ ತೆರಳಿ ವಾಪಾಸು ಬಂದ ಸಂದರ್ಭದಲ್ಲಿ ಅವರ ಸಿಲ್ವರ್ ಕಲರ್ ಜೆನ್ ಕಾರು ಮಾಯವಾಗಿತ್ತು. ತಕ್ಷಣ ಮಾಹಿತಿ ತಿಳಿದ ಸ್ಥಳೀಯರು ಕುಶಾಲನಗರ ಪೊಲೀಸ್ ಠಾಣೆಗೆ ತೆರಳಿ ವಿಷಯ ತಿಳಿಸಿದ್ದಾರೆ.

ಕೂಡಲೇ ಪೊಲೀಸರು ವಯರ್‌ಲೆಸ್ ಮೂಲಕ ಎಲ್ಲೆಡೆ ಮಾಹಿತಿ ರವಾನಿಸಿ ಕಾರು ಪತ್ತೆಗೆ ಕ್ರಮ ಕೈಗೊಂಡಿದ್ದಾರೆ. ಹೆಚ್ಚಿನ ವಿಚಾರಣೆ ಸಂದರ್ಭ ತಿಳಿದು ಬಂದಿದ್ದೇನೆAದರೆ, ಕಾರನ್ನು ಅದರ ಹಳೆಯ ಮಾಲೀಕರು ಮಹಿಳೆಯ ಗಮನಕ್ಕೆ ಬಾರದೆ ಡುಪ್ಲಿಕೇಟ್ ಕೀ ಬಳಸಿ ಅಪಹರಿಸಿದ್ದರು. ಕಾರಣ ಕಾರು ಖರೀದಿಸಿದ ಮಹಿಳೆ ಕಾರಿನ ಬಾಬ್ತು ಬಾಕಿ ಹಣ ನೀಡಿಲ್ಲ ಎಂದು ತಿಳಿದುಬಂತು.

ಕೊಪ್ಪ ಸಮೀಪದ ಆವರ್ತಿ ಸಹೋದರರು ಈ ಕಾರನ್ನು ಅಪಹರಿಸಿದ ಮಾಹಿತಿ ಖಚಿತವಾಗುತ್ತಲೇ ಪೊಲೀಸರು ಕಾರನ್ನು ಠಾಣೆಗೆ ತಂದು ಘಟನೆಗೆ ಇತಿಶ್ರೀ ಹಾಡಲಾಯಿತು.

-ಸಿಂಚು