ಮುಳ್ಳೂರು, ಜು. ೧೨: ಕೊಡಗು ಗ್ರಾಮಾಭಿವೃದ್ಧಿ ಸಂಸ್ಥೆ ಮತ್ತು ಜಿಲ್ಲಾ ಮಕ್ಕಳ ಸಹಾಯವಾಣಿ ಕೇಂದ್ರದ ವತಿಯಿಂದ ಸಮೀಪದ ದುಂಡಳ್ಳಿ ಗ್ರಾಮದ ಹಾವು ಗೊಲ್ಲರ ಹಟ್ಟಿಯಲ್ಲಿರುವ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಮತ್ತು ಲೇಖನಿ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು. ಹಾವು ಗೊಲ್ಲರ ಹಟ್ಟಿಯಿಂದ ಶನಿವಾರಸಂತೆಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಾಲೆಗೆ ಸಾಕಷ್ಟು ವಿದ್ಯಾರ್ಥಿಗಳು ಹೋಗುತ್ತಾರೆ. ಆದರೆ ಕೊರೊನಾ ಹಿನ್ನೆಲೆ ಶಾಲೆ ಪ್ರಾರಂಭಗೊAಡಿಲ್ಲ. ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿಗಳು ಈಗ ಮನೆಯಲ್ಲಿರುವುದರಿಂದ ಮಕ್ಕಳಿಗೆ ಆತ್ಮಸ್ಥೆöÊರ್ಯ ತುಂಬಿಸುವ ಹಿನ್ನೆಲೆಯಲ್ಲಿ ಚೈಲ್ಡ್ಲೈನ್ ಸಂಸ್ಥೆ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ವಿದ್ಯಾರ್ಥಿಗಳಿಗೆ ಲೇಖನಿ ಸಾಮಗ್ರಿ ವಿತರಿಸಿ ಮಾಹಿತಿ ನೀಡಿದ ಚೈಲ್ಡ್ಲೈನ್ ಸಂಸ್ಥೆಯ ತಾಲೂಕು ಕಾರ್ಯಕರ್ತೆ ಬಿ.ಆರ್. ಕುಮಾರಿ, ಕೊರೊನಾ ಸಂಕಷ್ಟ ಸಮಯದಲ್ಲಿ ಅದರಲ್ಲೂ ವಿಶೇಷವಾಗಿ ಮನೆಯಲ್ಲಿರುವ ವಿದ್ಯಾರ್ಥಿಗಳಿಗೆ ಆತ್ಮಸ್ಥೆöÊರ್ಯ ತುಂಬಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು. ಶನಿವಾರಸಂತೆ ಗ್ರಾ.ಪಂ. ಉಪಾಧ್ಯಕ್ಷ ಎಸ್.ಆರ್. ಮಧು, ಚೈಲ್ಡ್ಲೈನ್ ಸಂಸ್ಥೆಯ ಎ.ಎಸ್. ಯೋಗೇಶ್, ಕಾಜೂರು ಅಂಗನವಾಡಿ ಶಿಕ್ಷಕಿ ಅಶ್ವಿನಿ ಮುಂತಾದವರಿದ್ದರು.