ಸಿದ್ದಾಪುರ, ಜು. ೧೨: ಮಾಲ್ದಾರೆ ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ವಿವಿಧ ಹಾಡಿಯ ನಿವಾಸಿಗಳಿಗೆ ಶಾಸಕ ಕೆ.ಜಿ. ಬೋಪಯ್ಯ ಪ್ಲಾಸ್ಟಿಕ್ ಹೊದಿಕೆಗಳನ್ನು ವಿತರಣೆ ಮಾಡಿದರು. ಮಾಲ್ದಾರೆ ವ್ಯಾಪ್ತಿಯ ತಟ್ಟಳ್ಳಿ, ದೊಡ್ಡಹಡ್ಲು, ಹಂಚಿತಿಟ್ಟು, ಗೇಟ್ ಹಾಡಿ, ಆಸ್ತನ ಹಣ್ಣಿನ ತೋಟ ಹಾಡಿಗಳ ೮೦ ಕುಟುಂಬಗಳಿಗೆ ಪ್ಲಾಸ್ಟಿಕ್ ಹೊದಿಕೆಗಳನ್ನು ವಿತರಿಸಲಾಯಿತು. ಮಾಲ್ದಾರೆ ಗ್ರಾ.ಪಂ. ಅಧ್ಯಕ್ಷ ಸಮೀರ್, ಪಂ. ಸದಸ್ಯರುಗಳಾದ ಸರಸ್ವತಿ, ಕುಂಞ್ಞಣ್ಣ, ಚಂದ್ರ ಶೋಭಾ, ಐಟಿಡಿಪಿ ತಾಲೂಕು ಅಧಿಕಾರಿ ಗುರುಶಾಂತಪ್ಪ, ಪಿಡಿಓ ರಾಜೇಶ್, ಆದಿವಾಸಿ ಹೋರಾಟಗಾರ ಹಾಗೂ ಗ್ರಾ.ಪಂ. ಸದಸ್ಯ ಜೆ.ಕೆ. ಅಪ್ಪಾಜಿ ಇನ್ನಿತರರು ಹಾಜರಿದ್ದರು.