ಗೋಣಿಕೊಪ್ಪಲು, ಜು.೧೨: ಕೊರೊನಾ ಎರಡನೇ ಅಲೆಯ ಹೊಡೆತದಿಂದ ತಲ್ಲಣಗೊಂಡಿದ್ದ ಖಾಸಗಿ ಬಸ್‌ಗಳು ರಸ್ತೆಗಿಳಿಯದೆ ತಿಂಗಳುಗಳೇ ಉರುಳಿವೆ. ಖಾಸಗಿ ಬಸ್‌ನ ಚಾಲಕರು, ನಿರ್ವಾಹಕರು ಹಾಗೂ ಕ್ಲಿನರ್‌ಗಳು ಬಸ್ ನಿಲುಗಡೆ ಯಿಂದಾಗಿ ಸಂಕಷ್ಟಕೀಡಾಗಿದ್ದರು. ದಿನನಿತ್ಯದ ಕೆಲಸವಿಲ್ಲದೆ ಜೀವನ ನಿರ್ವಹಣೆ ನಡೆಸಲು ಸಾಧ್ಯವಾಗಿರಲಿಲ್ಲ. ಕೆಲವು ಮಂದಿ ಬೇರೆ ಕೆಲಸಗಳಿಗೆ ತೆರಳಿ ತಮ್ಮ ಕುಟುಂಬ ನಿರ್ವಹಣೆ ಮಾಡಿದರು.ಇದೀಗ ಸರ್ಕಾರ ಲಾಕ್‌ಡೌನ್ ತೆರವುಗೊಳಿಸಿದ ನಂತರ ಗೋಣಿಕೊಪ್ಪ ಬಸ್ ನಿಲ್ದಾಣದಿಂದ ಕಾನೂರು ಕುಟ್ಟ, ಹಾಗೂ ಶ್ರೀಮಂಗಲ ಕುಟ್ಟ ಬಾಳೆಲೆ ಭಾಗಕ್ಕೆ ಎರಡು ಖಾಸಗಿ ಬಸ್‌ಗಳು ಓಡಾಟ ನಡೆಸಿದವು. ಇದರಿಂದ ಮೊದಲನೇ ದಿನದಿಂದ ಓಡಾಟದಿಂದ ನಾಗರಿಕರು ನಗರಕ್ಕೆ ಬರಲು ಅನುಕೂಲವಾಯಿತು. ಆದರೆ ಬಸ್‌ಗಳು ವಿವಿಧ ಭಾಗಗಳಿಗೆ ತೆರಳದೆ ಇರುವುದರಿಂದ

(ಮೊದಲ ಪುಟದಿಂದ) ವಾಣಿಜ್ಯ ನಗರ ಗೋಣಿಕೊಪ್ಪಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿಲ್ಲ. ಖಾಸಗಿ ಬಸ್ ಆರಂಭವಾಗಿರುವುದರಿAದ ಇದನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದ ಚಾಲಕರು, ನಿರ್ವಾಹಕರು ಹಾಗೂ ಕ್ಲೀನರ್‌ಗಳು ಮೊಗದಲ್ಲಿ ಹರ್ಷ ಮೂಡಿದೆ.

ಗ್ರಾಮೀಣ ಭಾಗದಲ್ಲಿ ಬಸ್ ಸಂಚಾರವಿಲ್ಲದೆ ನಾಗರಿಕರು ನಗರಕ್ಕೆ ಆಗಮಿಸಿದ ಸಂದರ್ಭ ದುಪ್ಪಟ್ಟು ದರ ನೀಡಿ ಆಟೋ ಮತ್ತಿತ್ತರ ವಾಹನಗಳ ಮೂಲಕ ಮನೆಗಳಿಗೆ ತೆರಳುತ್ತಿದ್ದರು. ಇದೀಗ ಖಾಸಗಿ ಬಸ್‌ಗಳು ರಸ್ತೆಗಿಳಿದು ಸಂಚಾರ ಆರಂಭಿಸಿರುವುದರಿAದ ಬಹುತೇಕ ಗ್ರಾಮೀಣ ಭಾಗದ ಜನರು ನಿಟ್ಟುಸಿರು ಬಿಡುವಂತಾಗಿದೆ. -ಹೆಚ್.ಕೆ.ಜಗದೀಶ್