ಕೊಡ್ಲಿಪೇಟೆ, ಜು. ೧೨: ಕೋವಿಡ್ ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಸಂಚರಿಸುವ ವಾಹನಗಳು ಹಾಗೂ ಸಾರ್ವಜನಿಕರ ಮೇಲೆ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಕೊಡ್ಲಿಪೇಟೆ ಸಮೀಪದ ಶಾಂತಪುರದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ಚೆಕ್‌ಪೋಸ್ಟ್ನ ಸಿಬ್ಬಂದಿಗಳು, ಇದೀಗ ಅಂತರ ಜಿಲ್ಲಾ ಸಂಚಾರಕ್ಕೆ ರಸ್ತೆ ಮುಕ್ತವಾಗಿದ್ದರೂ ಕರ್ತವ್ಯದಿಂದ ಹಿಂದೆ ಸರಿದಿಲ್ಲ. ಇದಕ್ಕೆ ಕಾರಣ-ಸಂಬAಧಿತ ಇಲಾಖೆ ! ಕೋವಿಡ್ ಹಿನ್ನೆಲೆ ಅಂತರ್ ಜಿಲ್ಲಾ ಪ್ರಯಾಣಿಕರನ್ನು ತಪಾಸಣೆಗೊಳಪಡಿಸುವ, ಹೊರಭಾಗದಿಂದ ಬರುವ ಜಿಲ್ಲೆಯವರನ್ನು ಕ್ವಾರಂಟೈನ್‌ನಲ್ಲಿರುವAತೆ ಸೂಚಿಸುತ್ತಿದ್ದ ಸಿಬ್ಬಂದಿಗಳು ಇದೀಗ ಚೆಕ್ ಪೋಸ್ಟ್ನಲ್ಲಿದ್ದರೂ, ಯಾರನ್ನೂ ಪರಿಶೀಲಿಸುವ ಪರಿಸ್ಥಿತಿಯಲ್ಲಿಲ್ಲ.ಇದಕ್ಕೆ ಕಾರಣ- ಕೊಡಗು ಸಹ ಅನ್ ಲಾಕ್ ಆಗಿರುವುದು!

ರಾಜ್ಯ ಸರ್ಕಾರದ ಆದೇಶದಂತೆ ಶುಕ್ರವಾರದಿಂದ ಕೊಡಗು ಜಿಲ್ಲೆ ಅನ್‌ಲಾಕ್ ಆಗಿದೆ. ಆದರೂ ಸಹ ಚೆಕ್ ಪೋಸ್ಟ್ನಲ್ಲಿ ಆಶಾ ಕಾರ್ಯಕರ್ತೆಯರು, ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ರಾಜ್ಯಾದ್ಯಂತ ಅನ್‌ಲಾಕ್ ಆಗಿರುವುದರಿಂದ ಅಂತರ್ ಜಿಲ್ಲಾ ಪ್ರಯಾಣಿಕ ರನ್ನು ತಪಾಸಣೆಗೊಳಪಡಿಸುವ ಅವಶ್ಯಕತೆ ಇಲ್ಲದಿದ್ದರೂ ಸಹ ಚೆಕ್ ಪೋಸ್ಟ್ನ್ನು ತೆರವುಗೊಳಿಸದೇ ಸಿಬ್ಬಂದಿಗಳಿಗೆ ಅನಗತ್ಯ ಕರ್ತವ್ಯದ ಬರೆ ಎಳೆಯಲಾಗುತ್ತಿದೆ. ಇದು ಜಿಲ್ಲಾ ಗಡಿ ಪ್ರದೇಶವಾದ್ದ ರಿಂದ ಪೊಲೀಸ್ ಚೆಕ್‌ಪೋಸ್ಟ್ ಸಹ ನಿರಂತರವಾಗಿದೆ. ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲಿ ಲಸಿಕೆ ಸೇರಿದಂತೆ ಇನ್ನಿತರ ಮಾಹಿತಿಗಳನ್ನು ತಲುಪಿಸಲು ಹಾಗೂ ಮಾಹಿತಿ ಸಂಗ್ರಹಿಸಲು ಗ್ರಾಮಗಳಲ್ಲಿ ಕರ್ತವ್ಯ ನಿರ್ವಹಿಸ ಬೇಕಾದಂತಹ ಆಶಾ ಕಾರ್ಯಕರ್ತೆಯರನ್ನು ಸುಖಾ ಸುಮ್ಮನೆ ತಪಾಸಣಾ ಕೇಂದ್ರಕ್ಕೆ ನಿಯೋಜಿಸಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.