ಮಡಿಕೇರಿ, ಜು. ೧೧: ಕೊಡಗು ಜಿಲ್ಲೆಗೂ ಅನ್ಲಾಕ್ ನಿಯಮವನ್ನು ಘೋಷಿಸಿರುವುದರಿಂದ ನಿತ್ಯ ದುಡಿದು ತಿನ್ನುವ ಜನಸಾಮಾನ್ಯರಿಗೆ ಅನುಕೂಲವಾಗಲಿದೆ. ಪ್ರವಾಸೋದ್ಯಮ ಅವಲಂಬಿತ ಹೊಟೇಲ್, ರೆಸಾರ್ಟ್, ಲಾಡ್ಜ್, ಹೋಂ ಸ್ಟೇ, ಸ್ಪೆöÊಸಸ್, ಇತರ ಅಂಗಡಿಗಳು, ಟ್ಯಾಕ್ಸಿ, ಆಟೋ, ಜೀಪು ಸೇರಿದಂತೆ ಎಲ್ಲಾ ಪ್ರವಾಸಿ ವಾಹನಗಳು, ರ್ಯಾಫ್ಟಿಂಗ್, ಟೂರ್ ಗೈಡ್, ಟ್ರಾವಲ್ಸ್ ಇನ್ನಿತರ ಸಿಬ್ಬಂದಿಗಳು ಸರ್ಕಾರದ ಕ್ರಮದಿಂದಾಗಿ ನಿಟ್ಟುಸಿರು ಬಿಡುವಂತಾಗಿದೆ ಎಂದು ಕೊಡಗು ಪ್ರವಾಸೋದ್ಯಮ ಅವಲಂಬಿತರ ಒಕ್ಕೂಟ ಹೇಳಿದೆ.
ಪ್ರವಾಸೋದ್ಯಮವೂ ಉದ್ಯೋಗ ಸೃಷ್ಟಿಸುವ ಒಂದು ಕ್ಷೇತ್ರವಾಗಿದ್ದು, ಉದ್ಯೋಗ ಮೂಲಭೂತ ಹಕ್ಕಾಗಿದೆ. ಆದ್ದರಿಂದ ಪ್ರವಾಸೋದ್ಯಮಕ್ಕೆ ವಿರೋಧ ವ್ಯಕ್ತಪಡಿಸುವ ಮೂಲಕ ಯಾರೂ ಯುವ ಸಮೂಹದ ಹಕ್ಕನ್ನು ಕಸಿದು ಕೊಳ್ಳಬಾರದು ಎಂದು ಅಧ್ಯಕ್ಷ ಮಂಜುನಾಥ್ ಕುಮಾರ್ ಒತ್ತಾಯಿಸಿದ್ದಾರೆ. ಒಂದು ವೇಳೆ ಪ್ರವಾಸೋದ್ಯಮಕ್ಕೆ ಅಡ್ಡಿಪಡಿಸಿದರೆ ಎಲ್ಲರ ಸಹಕಾರದೊಂದಿಗೆ ಹೋರಾಟವನ್ನು ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.