ಮಡಿಕೇರಿ, ಜು. ೧೧: ಅರೆಕಾಡು ಹೊಸ್ಕೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿರುವ ಕುಟುಂಬಗಳಿಗೆ ಗ್ರಾ.ಪಂ. ವತಿಯಿಂದ ಆಹಾರದ ಕಿಟ್ ಸೇರಿದಂತೆ ಅಗತ್ಯ ನೆರವನ್ನು ನೀಡಲಾಗುತ್ತಿದೆ.
ಸ್ಥಳೀಯ ಕೊಡವ ವೆಲ್ಫೇರ್ ಮತ್ತು ರಿಕ್ರಿಯೇಷನ್ ಅಸೋಸಿಯೇಷನ್ ಗ್ರಾ.ಪಂ. ಕಾರ್ಯದೊಂದಿಗೆ ಕೈ ಜೋಡಿಸುವ ಮೂಲಕ ಮಾನವೀಯತೆ ಮೆರೆದಿದೆ. ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕುಕ್ಕೆರ ಜಯಾ ಚಿಣ್ಣಪ್ಪ, ಪ್ರಧಾನ ಕಾರ್ಯದರ್ಶಿ ನೆಲ್ಲಮಕ್ಕಡ ಪವನ್ ಹಾಗೂ ಪದಾಧಿಕಾರಿಗಳು ಆರ್ಥಿಕ ನೆರವಿನ ಚೆಕ್‌ನ್ನು ಗ್ರಾ.ಪಂ.ಗೆ ಹಸ್ತಾಂತರಿಸಿದರು.
ಗ್ರಾ.ಪA. ಅಧ್ಯಕ್ಷ ಬಿ.ವೈ. ಪ್ರಭು ಶೇಖರ್, ಸದಸ್ಯರಾದ ಪಿ.ಕೆ. ಯೂಸುಫ್ ಆಲಿ, ಎಂ.ಬಿ. ಚಿದಂಬರ, ಉಷಾ ತಂಗಮ್ಮ, ಕವಿತಾ ಬೆಳ್ಳಿಯಪ್ಪ, ಜನಾರ್ಧನ ಹಾಗೂ ಗ್ರಾ.ಪಂ. ಕಾರ್ಯದರ್ಶಿ ರವಿ ಹಾಜರಿದ್ದರು.