ಸಿದ್ದಾಪುರ, ಜು. ೧೧: ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳಿAದ ಸಿದ್ದಾಪುರ ಸಂತೆ ಸ್ಥಗಿತಗೊಳಿಸಲಾಗಿತ್ತು. ಇದೀಗ ಅನ್‌ಲಾಕ್ ಹಿನ್ನೆಲೆಯಲ್ಲಿ ಸಂತೆ ಪ್ರಾರಂಭವಾಗಿದೆ. ಮಳೆ ನಡುವೆ ಸ್ಥಳೀಯ ನಿವಾಸಿಗಳು ಅಗತ್ಯ ವಸ್ತುಗಳ ಖರೀದಿಸಲು ಆಗಮಿಸಿದ್ದರು. ಆದರೆ ಸಂತೆ ಪ್ರಾರಂಭ ಮಾಡಿರುವುದು ಮಾಹಿತಿ ತಿಳಿಯದ ಕಾರಣ ಸಾರ್ವಜನಿಕರ ಸಂಖ್ಯೆ ಕಡಿಮೆಯಾಗಿತ್ತು.