ಮಡಿಕೇರಿ, ಜು. ೧೧: ಜಿಲ್ಲೆಯಲ್ಲಿ ನಿನ್ನೆಯಿಂದ ಮತ್ತೆ ಪ್ರಾರಂಭಗೊAಡAತಿರುವ ಮಳೆ ಸ್ವಲ್ಪಮಟ್ಟಿಗೆ ಬಿರುಸು ಕಾಣುತ್ತಿದ್ದು, ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗಿದೆ. ನಿನ್ನೆ ಅಪರಾಹ್ನದ ಬಳಿಕ ಮಳೆಗಾಲದ ಚಿತ್ರಣ ಕಂಡು ಬಂದಿದ್ದು, ರಾತ್ರಿಯಿಡೀ ಬಹುತೇಕ ಕಡೆಗಳಲ್ಲಿ ಮಳೆಯಾಗಿದೆ. ಪ್ರಸ್ತುತ ಕೃಷಿ ಚಟುವಟಿಕೆಗಳಿಗೆ ಮಳೆ ಅಗತ್ಯವೂ ಇದೆ. ಆದರೆ ಮಳೆಯೊಂದಿಗೆ ಬೀಸುತ್ತಿರುವ ಭಾರೀ ಗಾಳಿ ಮಾತ್ರ ಜನತೆಯಲ್ಲಿ ಆತಂಕ ಸೃಷ್ಟಿಸುವಂತಾಗಿತ್ತು. ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಜಿಲ್ಲೆಯ ಹಲವೆಡೆ ಮಳೆಯೊಂದಿಗೆ ರಭಸದ ಗಾಳಿ ಬೀಸುತ್ತಿರುವದರಿಂದ ಹಾಗೂ ಚಳಿಯ ವಾತಾವರಣದಿಂದಾಗಿ ನೈಜ ಮಳೆಗಾಲದ ಅನುಭವ ಜನತೆಗೆ ಆಗುತ್ತಿದೆ. ಹವಾಮಾನ ಇಲಾಖೆ ತಾ. ೧೪ರ ರ ತನಕವೂ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯೊಂದಿಗೆ ಈಗಾಗಲೇ ರೆಡ್ ಅಲರ್ಟ್ ಎಚ್ಚರಿಕೆಯನ್ನು ನೀಡಲಾಗಿದೆ. ಜಿಲ್ಲೆಯಲ್ಲಿ ಭಾರೀ ಮಳೆಯಾಗದಿದ್ದರೂ ಸಾಧಾರಣಕ್ಕಿಂತ ಹೆಚ್ಚಿನ ಮಳೆಯಾಗಿದೆ.
ಬಂಗಾಳ ಉಪ ಸಾಗರದಲ್ಲಿ ವಾಯುಭಾರ ಕುಸಿತದ ಪರಿಣಾಮವಾಗಿ ರಾಜ್ಯದ ಕರಾವಳಿ, ಮಲೆನಾಡು ಭಾಗಗಳಲ್ಲಿ ವಾತಾವರಣದಲ್ಲಿ ದಿಢೀರ್ ಬದಲಾವಣೆಯಾಗಿದ್ದು, ಮಳೆಯ ಪ್ರಮಾಣ ಹೆಚ್ಚಾಗಿದೆ. ಇದರೊಂದಿಗೆ ಕೊಡಗಿನಲ್ಲಿ ಇದು ಮಳೆಗಾಲದ ಸಂದರ್ಭವೂ ಆಗಿದ್ದು, ಪ್ರಸ್ತುತ ಪುನರ್ವಸು ಮಳೆ ನಕ್ಷತ್ರ ಆರಂಭಗೊAಡಿದೆ. ವಾಯುಭಾರ ಕುಸಿತದ ಪರಿಣಾಮ ಒಂದೆಡೆಯಾದರೂ ಜಿಲ್ಲೆಯಲ್ಲಿ ವಾಡಿಕೆಯಂತೆಯೂ ಮಳೆಯಾಗುವ ಸಮಯ ಇದಾಗಿದೆ.
ನಾಪೋಕ್ಲು ವ್ಯಾಪ್ತಿಯಲ್ಲಿ ತುಂತುರು ಮಳೆ
ನಾಪೋಕ್ಲು: ನಾಪೋಕ್ಲು ವ್ಯಾಪ್ತಿಯ ಗ್ರಾಮಗಳಲ್ಲಿ ಭಾನುವಾರ ಬೆಳಿಗ್ಗೆಯಿಂದ ತುಂತುರು ಮಳೆ ಆರಂಭಗೊAಡಿದೆ. ಆದರೆ, ಮಳೆ ಎಡೆಬಿಡದೆ ಸುರಿಯದೆ ನಡುವೆ ಬಿಸಿಲ ವಾತಾವರಣವೂ ಕಂಡುಬರುತ್ತಿದೆ. ಮಳೆಯೊಂದಿಗೆ ತಂಪು ಗಾಳಿ, ಮೋಡ ತುಂಬಿದ ವಾತಾವರಣ ಕಂಡುಬರುತ್ತಿದೆ. ಬೆಟ್ಟಗಳಿಗೆ ಹೊಂದಿಕೊAಡಿರುವ ಗ್ರಾಮಗಳಾದ ಮರಂದೋಡ, ಯವಕಪಾಡಿ, ನಾಲಡಿ, ನೆಲಜಿ, ಪೇರೂರು ಗ್ರಾಮಗಳಲ್ಲಿ ಮಳೆ ಮತ್ತು ಗಾಳಿಯ ಪ್ರಮಾಣ ಸ್ವಲ್ಪ ಹೆಚ್ಚು ಕಂಡು ಬರುತ್ತಿದೆ. ಬಿರುಸಿನ ಮಳೆ ಮತ್ತು ಗಾಳಿ ಇಲ್ಲದ ಕಾರಣ ಸದ್ಯಕ್ಕೆ ಆತಂಕ ಇಲ್ಲ ಎನ್ನುತ್ತಾರೆ ಈ ವ್ಯಾಪ್ತಿಯ ಜನ.
ಮಳೆ ಪ್ರಮಾಣ ಕಡಿಮೆಯಿರುವ ಕಾರಣ ನದಿ, ಹೊಳೆ ನೀರಿನ ಹರಿಯುವಿಕೆಯಲ್ಲಿ ಹೆಚ್ಚಳವಾಗಿಲ್ಲ. ಈ ವ್ಯಾಪ್ತಿಯಲ್ಲಿ ಭತ್ತದ ಕೃಷಿ ಮಾಡುವವರು ವಿರಳವಾಗಿರುವ ಕಾರಣ ಅಲ್ಲಲ್ಲಿ ಬೆರಳಣಿಕೆಯ ರೈತರು ಮಾತ್ರ ಭತ್ತದ ಗದ್ದೆಯ ಉಳುಮೆ ಮತ್ತು ಭತ್ತದ ಪೈರು ಬೆಳೆಸುತ್ತಿರುವದು ಕಂಡು ಬರುತ್ತಿದೆ.
ಶನಿವಾರಸಂತೆ : ಪಟ್ಟಣ ಹಾಗೂ ಹೋಬಳಿಯಾದ್ಯಂತ ಆಗಾಗ್ಗೆ ಮಳೆಯಾಗುತ್ತಿದೆ. ಉತ್ತಮ ಮಳೆ ಸುರಿಯುವ ನಿರೀಕ್ಷೆಯಿಂದ ರೈತರ ಮೊಗದಲ್ಲಿ ಮಂದಹಾಸ ಮಿನುಗಿದೆ. ಮಳೆಯಾಶ್ರಿತ ಗದ್ದೆಗಳಲ್ಲಿ ನೀರಿನ ಕೊರತೆಯಿದೆ.
ಸಮೀಪದ ನಿಡ್ತ, ದುಂಡಳ್ಳಿ, ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಳೆಯಾಶ್ರಿತ ಗದ್ದೆಗಳಲ್ಲಿ ನಾಟಿಗಾಗಿ ಸಸಿಮಡಿ ಬೆಳೆಯಲು ಕೆಲ ಅನುಕೂಲಸ್ಥ ರೈತರು ಕೊಳವೆ ಬಾವಿಯಿಂದ ಸ್ಪಿಂಕ್ಲರ್ ಮೂಲಕ ನೀರು ಹಾಯಿಸಿದ್ದರು. ಎಲ್ಲಾ ಕಡೆ ನೀರಿನ ವ್ಯವಸ್ಥೆ ಇರುವ ಗದ್ದೆಗಳಲ್ಲಿ ತುಂಗಾ ಮತ್ತಿತರ ದೀರ್ಘಾವಧಿ ಭತ್ತದ ತಳಿಗಳ ನಾಟಿ ಕಾರ್ಯ ಚುರುಕು ಕಂಡಿದೆ.
ಸಿದ್ದಾಪುರ ವ್ಯಾಪ್ತಿಯಲ್ಲಿ ಮಳೆ
ಸಿದ್ದಾಪುರ: ಸಿದ್ದಾಪುರ ಸುತ್ತಮುತ್ತ ಪ್ರದೇಶಗಳಲ್ಲಿ ಶನಿವಾರ ರಾತ್ರಿಯಿಂದ ಭಾನುವಾರ ಬೆಳಗಿನ ಜಾವದವರೆಗೆ ಸಾಧಾರಣ ಮಳೆ ಸುರಿದ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳು ಆರಂಭಗೊAಡಿದೆ. ಭಾನುವಾರದಂದು ಹಗಲಿನ ವೇಳೆ ಮಳೆ ಇಲ್ಲದೆ ಸಣ್ಣ ಬಿಸಿಲಿನ ವಾತಾವರಣ ಕಂಡು ಬಂತು. ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಗದ್ದೆ ಕೃಷಿ ಮಾಡುವ ಕೃಷಿಕರು ಗದ್ದೆಗಳಲ್ಲಿ ಉಳುಮೆ ಮಾಡುವ ದೃಶ್ಯ ಕಂಡುಬAತು. ಈ ಮಳೆಯು ಶುಂಠಿ ಕೃಷಿಕರಿಗೆ ಆಶಾದಾಯಕವಾಗಿದೆ