ಸುAಟಿಕೊಪ್ಪ, ಜು.೧೧:ಅಂಬೇಡ್ಕರ್ ಕಾಲೋನಿ,ಪಂಪ್ಹೌಸ್ ಸೇರಿದಂತೆ ಇತರೆ ಬಡಾವಣೆಗಳಿಗೆ ಕಳೆದ ಹಲವು ವರ್ಷಗಳಿಂದ ಮನೆಗಳಿಗೆ ಕುಡಿಯುವ ಕಲುಷಿತ ನೀರು ಸರಬರಾಜುಗೊಳ್ಳು ತ್ತಿದ್ದು ಪಂಚಾಯಿತಿಯ ನೂತನ ಸದಸ್ಯರುಗಳು ಸ್ಪಂದಿಸಿ ಹೊಸ ಪೈಪ್ಲೈನ್ ಅಳವಡಿಸುವ ಮೂಲಕ ಸಮಸ್ಯೆಯನ್ನು ಬಗೆಹರಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ಕುಡಿಯುವ ನೀರಿನಲ್ಲಿ ಆಯಿಲ್ ಮಿಶ್ರಿತ ಕಪ್ಪು ನೀರು ಮನೆಗಳಿಗೆ ಬರುತ್ತಿದ್ದು, ಈ ಬಗ್ಗೆ ಹಲವು ಬಾರಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಗೆ ಮನವಿ ಮಾಡಿದ್ದರೂ ಸಮಸ್ಯೆ ಬಗೆಹರಿದಿರಲಿಲ್ಲ.
ನೂತನ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಪ್ರಸಾದ್ ಕುಟ್ಟಪ್ಪ ಸದಸ್ಯರಾದ ಮಂಜುನಾಥ್, ಬಿ.ಎಂ.ಸುರೇಶ್ ಸಮಸ್ಯೆಯ ಗಂಭೀರತೆಯನ್ನು ಮನಗಂಡ ವಿಶೇಷ ಆಸಕ್ತಿ ವಹಿಸಿದ್ದ ಈ ಭಾಗದ ಹಲವು ವರ್ಷಗಳ ಗಂಭೀರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಪಂಚಾಯಿತಿ ಪಿಡಿಒ ವೇಣುಗೋಪಾಲ್ ಅವರ ಗಮನಕ್ಕೆ ತಂದು ವಿಶೇಷ ಅನುದಾನದ ಮೂಲಕ ರೂ. ೨ಲಕ್ಷ ವೆಚ್ಚದಲ್ಲಿ ಇಲ್ಲಿನ ಹಳೆಯ ಪೈಪುಗಳನ್ನು ತೆಗೆದುಹಾಕಿ ಹೊಸದಾಗಿ ನಿರ್ಮಿತಗೊಂಡಿರುವ ಓವರ್ ಹೆಡ್ ಟ್ಯಾಂಕಿನ ಮೂಲಕ ಪೈಪ್ ಲೈನ್ ಅಳವಡಿಸಿ ಪಂಪ್ಹೌಸ್ ರಸ್ತೆಯ ಮನೆ ಗಳಿಗೆ ಸೌಲಭ್ಯ ಒದಗಿಸಿಕೊಡಲಾಯಿತು. ಕಾಮಗಾರಿಯನ್ನು ಗುತ್ತಿಗೆದಾರ ಮನು ರೈ ನಿರ್ವಹಿಸುತ್ತಿದ್ದಾರೆ.