ಕೂಡಿಗೆ, ಜು. ೧೧: ಕಣಿವೆಯ ಸಮೀಪದಲ್ಲಿ ಹರಿಯುವ ಕಾವೇರಿ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಪುರುಷನ ಶವ ಪತ್ತೆಯಾಗಿದೆ.
ಕಣಿವೆಯ ರಾಮಲಿಂಗೇಶ್ವರ ದೇವಾಲಯದ ಸ್ವಲ್ಪ ದೂರದ ಕಾವೇರಿ ನದಿಯಲ್ಲಿ ತೇಲಿಕೊಂಡು ಬಂದ ಶವ ದಡದಲ್ಲಿ ಪತ್ತೆಯಾಗಿದನ್ನು ಸ್ಥಳೀಯರು ಪೊಲೀಸರಿಗೆ ತಿಳಿಸಿದರು. ಕುಶಾಲನಗರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ತೆರಳಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಂತರ ಶವವನ್ನು ಮಡಿಕೇರಿಗೆ ಕಳುಹಿಸಲಾಗಿದೆ. ಈ ಸಂದರ್ಭದಲ್ಲಿ ಗ್ರಾಮಾಂತರ ಠಾಣಾಧಿಕಾರಿ ಶಿವಶಂಕರ್, ಸಹಾಯಕ ಠಾಣಾಧಿಕಾರಿ ಸ್ವಾಮಿ, ಪೊಲೀಸ್ ರೈಟರ್ ಉದಯ್ ಇದ್ದರು