ವೀರಾಜಪೇಟೆ, ಜು. ೧೧: ಕೊರೊನಾ ಸಂದಿಗ್ಧ ಪರಿಸ್ಥಿತಿ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಬ್ಯಾಗ್ ಹೊತ್ತು ಶಾಲೆ ಕಡೆ ತೆರಳುತ್ತಿದ್ದ ಮಕ್ಕಳು ಇದೀಗ ಆನ್ಲೈನ್ ಕ್ಲಾಸ್ನಲ್ಲಿ ಪಾಠ ಕೇಳುವ ಪರಿಸ್ಥಿತಿ ಸೃಷ್ಟಿಯಾಗಿದೆ. ಆದರೆ, ಕೊಡಗು ಜಿಲ್ಲೆಯಲ್ಲಿ ಆನ್ಲೈನ್ ಶಿಕ್ಷಣಕ್ಕೆ ಮಕ್ಕಳು ಹರಸಹಾಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ನೆಟ್ವರ್ಕ್ ಸಮಸ್ಯೆ ಮತ್ತು ವಿದ್ಯುತ್ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ಕಲಿಕೆಗೆ ತೊಡಕು ಉಂಟಾಗಿದೆ. ಶಿಕ್ಷಣ ಮುಂದುವರೆಸಲು ಕಷ್ಟಸಾಧ್ಯವಾಗಿದೆ. ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಲಾ ಕಾಲೇಜು ವಿದ್ಯಾರ್ಥಿಗಳು ನಿರಂತರವಾಗಿ ಸಮಸ್ಯೆ ಅನುಭವಿಸುತ್ತಿದ್ದು, ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿದ್ದಾರೆ.
ಕೊಡಗು ಜಿಲ್ಲೆ ಗುಡ್ಡಗಾಡು ಪ್ರದೇಶವಾಗಿದ್ದು, ನೆಟ್ವರ್ಕ್ ಸಮಸ್ಯೆ ಹಲವು ವರ್ಷಗಳಿಂದ ಜಿಲ್ಲೆಯನ್ನು ಕಾಡುತ್ತಿದೆ. ಈ ನಡುವೆ ೨೦೨೦ರ ಫೆಬ್ರವರಿ ತಿಂಗಳಿAದ ಆನ್ ಲೈನ್ಕ್ಲಾಸ್ ಆರಂಭವಾಯಿತು. ಎಲ್ಲಾ ಹಂತದ ವಿದ್ಯಾರ್ಥಿಗಳು ಇದನ್ನು ನಂಬಿ ಕೊಂಡು ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ. ಸದ್ಯದ ೪ಜಿ ಕಾಲದಲ್ಲಿ ಕ್ಷಣಾರ್ಧದಲ್ಲಿ ಮಿಂಚಿನ ವೇಗದಲ್ಲಿ ಮಾಹಿತಿ ಬೆರಳಂಚಿನಲ್ಲಿ ದೊರಕುತ್ತದೆ. ಆದರೆ, ಕೊಡಗು ಜಿಲ್ಲೆಯ ಮಕ್ಕಳ ಪಾಡು ಮಾತ್ರ ಹೇಳ ತೀರದು.
ವೀರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತರ್ಮೆಮೊಟ್ಟೆ, ಬಾರಿಕಾಡು, ಕೊಟ್ಟೋಳಿ, ತೋಮರ ಗ್ರಾಮದ ಕೂರ್ತಿಕಾಡು, ಪಡ್ಚಿಕಾಡ್ ಈ ಭಾಗಗಳಲ್ಲಿ ಅತೀ ಹೆಚ್ಚು ಮಳೆ ಸುರಿಯುತ್ತದೆ. ಮಳೆಗಾಲದಲ್ಲಿ ವಿದ್ಯುತ್ ತಂತಿಗಳ ಮೇಲೆ ಮರದ ಕೊಂಬೆಗಳು ಬಿದ್ದು ವಿದ್ಯುತ್ ಕಂಬಗಳು ತುಂಡಾಗಿ ವಿದ್ಯುತ್ ಸಂಪರ್ಕ ಕಡಿತಗೊಳ್ಳುವುದು ಸಾಮಾನ್ಯವಾಗಿದೆ.
ಈ ಭಾಗದಲ್ಲಿ ಸುಮಾರು ೧೦೦ ಕ್ಕಿಂತ ಅಧಿಕ ಮಂದಿ ಎಲ್ಲಾ ಹಂತದ ವಿದ್ಯಾರ್ಥಿಗಳಿದ್ದಾರೆ. ಶೇಕಡ ೭೦ ರಷ್ಟು ಕುಟುಂಬಗಳು ಕೂಲಿ ಕಾರ್ಮಿಕರಾಗಿ ದ್ದಾರೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮೊಬೈಲ್ ತೆಗೆದುಕೊಟ್ಟ ಪೋಷಕರು ನೆಟ್ವರ್ಕ್ ಹುಡುಕಾಟದಲ್ಲಿ ಮಕ್ಕಳೊಂದಿಗೆ ತೊಡಗಿಸಿಕೊಂಡಿ ದ್ದಾರೆ. ವಿದ್ಯುತ್ ಸಮಸ್ಯೆ ಎದುರಾದರೆ, ನೆಟ್ವರ್ಕ್ ಸಮಸ್ಯೆಯೂ ಸೃಷ್ಟಿಯಾಗುತ್ತೆ.
ಸುರಿಯುತ್ತದೆ. ಮಳೆಗಾಲದಲ್ಲಿ ವಿದ್ಯುತ್ ತಂತಿಗಳ ಮೇಲೆ ಮರದ ಕೊಂಬೆಗಳು ಬಿದ್ದು ವಿದ್ಯುತ್ ಕಂಬಗಳು ತುಂಡಾಗಿ ವಿದ್ಯುತ್ ಸಂಪರ್ಕ ಕಡಿತಗೊಳ್ಳುವುದು ಸಾಮಾನ್ಯವಾಗಿದೆ.
ಈ ಭಾಗದಲ್ಲಿ ಸುಮಾರು ೧೦೦ ಕ್ಕಿಂತ ಅಧಿಕ ಮಂದಿ ಎಲ್ಲಾ ಹಂತದ ವಿದ್ಯಾರ್ಥಿಗಳಿದ್ದಾರೆ. ಶೇಕಡ ೭೦ ರಷ್ಟು ಕುಟುಂಬಗಳು ಕೂಲಿ ಕಾರ್ಮಿಕರಾಗಿ ದ್ದಾರೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮೊಬೈಲ್ ತೆಗೆದುಕೊಟ್ಟ ಪೋಷಕರು ನೆಟ್ವರ್ಕ್ ಹುಡುಕಾಟದಲ್ಲಿ ಮಕ್ಕಳೊಂದಿಗೆ ತೊಡಗಿಸಿಕೊಂಡಿ ದ್ದಾರೆ. ವಿದ್ಯುತ್ ಸಮಸ್ಯೆ ಎದುರಾದರೆ, ನೆಟ್ವರ್ಕ್ ಸಮಸ್ಯೆಯೂ ಸೃಷ್ಟಿಯಾಗುತ್ತೆ.
(ಮೊದಲ ಪುಟದಿಂದ) ಉಪಟಳವಿದ್ದು ವಿದ್ಯಾರ್ಥಿಗಳೊಂದಿಗೆ ತಮ್ಮ ದಿನನಿತ್ಯದ ಕೆಲಸಕಾರ್ಯಗಳನ್ನು ಬದಿಗೊತ್ತಿ ಪೋಷಕರು ಸಹ ಜೊತೆಯಲ್ಲಿ ಸಾಗುವ ಸ್ಥಿತಿ ಸೃಷ್ಟಿಯಾಗಿದೆ.
ವಿದ್ಯಾರ್ಥಿಗಳು ನೆಟ್ವರ್ಕ್ ದೊರಕುವ ಸ್ಥಳಗಳನ್ನು ಕಲ್ಲುಬಂಡೆಗಳ ಮೇಲೆ ಕೆಲವೊಮ್ಮೆ ಮರದ ಮೇಲೆ, ಬೆಟ್ಟದ ಮೇಲೆ ಹೀಗೆ ಹಲವು ಭಾಗಗಳನ್ನು ಗುರುತಿಸಿಕೊಂಡು ತಮ್ಮ ದಿನ ನಿತ್ಯದ ಪಾಠಗಳನ್ನು ಕೇಳುವ ಸನ್ನಿವೇಶವು ಎದುರಾಗಿದೆ. ಕೆಲವು ವಿದ್ಯಾರ್ಥಿಗಳು ಮನೆಯನ್ನು ತೊರೆದು ತಮ್ಮ ನೆಂಟರ ಮನೆಯಲ್ಲಿ ವಾಸ್ತವ್ಯ ಮಾಡಿ ಅನ್ಲೈನ್ ಪಾಠಗಳಲ್ಲಿ ತೊಡಗಿಸಿಕೊಂಡಿದ್ದಾರೆ.