ಕೂಡಿಗೆ, ಜು. ೧೧: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ಧಲಿಂಗಪುರ ಗ್ರಾಮದ ನಿವಾಸಿ ಗಳಾದ ಬೆಂಗಳೂರಿನಲ್ಲಿ ನೆಲೆಸಿ ಅಲ್ಲಿ ಉದ್ಯಮಿಯಾಗಿ ಬೆಳೆದಿರುವ ನಾಪಂಡ ಮುತ್ತಪ್ಪ ಮತ್ತು ಮುದ್ದಪ್ಪ ಸಹೋದರರು ಕೊರೊನಾ ಹಿನ್ನೆಲೆ ಹೈನುಗಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹೈನುಗಾರಿಕೆ ಅಭಿವೃದ್ಧಿಪಡಿಸುವ ಯೋಜನೆಯನ್ನು ಸಿದ್ಧಲಿಂಗಪುರ ತಮ್ಮ ಮನೆ ಸಮೀಪ ಜಾಗದಲ್ಲಿ ಆರಂಭಿಸಿದ್ದಾರೆ.
ಮುತ್ತಪ್ಪ ಅವರು ಈ ಹಿಂದೆ ಮೂರು-ನಾಲ್ಕು ನಾಡು ಹಸುಗಳನ್ನು ಸಾಕಿದ್ದರು. ಅದರ ಹಾಲನ್ನು ಮನೆಯ ದಿನ ಬಳಕೆಗೆ ಬಳಸುತ್ತಿದ್ದರು. ಆದರೆ ಕೊರೊನಾ ಸಂದರ್ಭದಲ್ಲಿ ಬೆಂಗಳೂರಿನಿAದ ಬಂದ ಉದ್ಯಮಿಗಳು ಸಿದ್ಧಲಿಂಗ ಪುರದ ತಮ್ಮ ತೋಟದ ಮನೆಯಲ್ಲಿ ಹೈನುಗಾರಿಕೆಗೆ ಹೆಚ್ಚುವರಿಯಾಗಿ ಒತ್ತುಕೊಡುವ ನಿಟ್ಟಿನಲ್ಲಿ ೨೫ಕ್ಕೂ ಹೆಚ್ಚು ಹೈಬ್ರೀಡ್ ತಳಿಯ ಹಸುಗಳನ್ನು ತಂದು ಹೈನುಗಾರಿಕೆ ಆರಂಭಿಸಿದ್ದಾರೆ.
ಬೆAಗಳೂರಿನಲ್ಲಿರುವ ಸಿದ್ಧಲಿಂಗಪುರ ನಾಪಂಡ ಮುತ್ತಪ್ಪ ಮತ್ತು ಮುದ್ದಪ್ಪನವರು ರಾಜ್ಯ ಮತ್ತು ರಾಷ್ಟಿçÃಯ ಮಟ್ಟದ ಕಾರ್ಮಿಕ ಸಂಘಟನೆ ಕಾರ್ಯದರ್ಶಿಯಾಗಿ ಮತ್ತು ಉದ್ಯಮಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದರೂ ಇದೀಗ ಲಾಕ್ಡೌನ್ ಸಂದರ್ಭ ಹೈನುಗಾರಿಕೆಗೆ ಹೆಚ್ಚು ಒತ್ತು ನೀಡುವ ಉದ್ದೇಶದಿಂದ ನಾಟಿ ಹಸುಗಳ ಜೊತೆಗೆ ಗೀರ್ ಹೈಬ್ರೀಡ್ ತಳಿಯ ಮತ್ತು ಜರ್ಸಿ ತಳಿಯ ವಿವಿಧ ಬಗೆಯ ಹಸುಗಳನ್ನು ತಂದು ಸಾಕಿ ವಿದ್ಯುತೀಕರಣ ಹಾಲು ಕರೆಯುವ ಯಂತ್ರವನ್ನು ಬಳಕೆ ಮಾಡಿ ಹಾಲನ್ನು ಕರೆದು ಹಾಲು ಉತ್ಪಾದಕ ಸಹಕಾರ ಸಂಘಕ್ಕೆ ಹಾಕುತ್ತಿದ್ದಾರೆ.
ಉದ್ಯಮಿಗಳಿಗೆ ಉತ್ತಮವಾದ ಭೂಮಿ ಇರುವುದರಿಂದ ಹೈಬ್ರೀಡ್ ತಳಿಯ ಹುಲ್ಲನ್ನು ಬೆಳೆಸಲಾಗಿದೆ. ಇವರು ಸರಕಾರದ ಪಶುಪಾಲನೆ ಮಾದರಿಯಲ್ಲಿ ಹಸುಗಳಿಗೆ ಚಿಕಿತ್ಸೆ ಮತ್ತು ಹಸುಗಳು ಹೆಚ್ಚು ಹಾಲು ನೀಡಲು ಬೇಕಾಗುವ ಪೌಷ್ಟಿಕ ಆಹಾರದ ಪಶು ಅಹಾರವನ್ನು ನೀಡಲಾಗುತ್ತದೆ.
ಪಶುಪಾಲನೆ ಇಲಾಖೆಯ ಮಾಹಿತಿಯನ್ನು ಪಡೆದು ರಾಜ್ಯದ ಕೆಲ ಕಡೆಗಳಲ್ಲಿ ಹೆಚ್ಚುವರಿಯಾಗಿ ಹೈನುಗಾರಿಕೆ ತೊಡಗಿರುವ ಜಿಲ್ಲೆಯ ಕೆಲ ಪ್ರದೇಶದಲ್ಲಿ ಪರಿಶೀಲನೆ ನಡೆಸಿ ಇಲ್ಲಿನ ವಾತಾವರಣಕ್ಕೆ ಅನುಗುಣವಾಗಿ ಹೊಂದಿಕೊಳ್ಳುವ ಹೈಬ್ರೀಡ್ ತಳಿಯ ಹಸುಗಳನ್ನು ಸಾಕಲಾಗುತ್ತಿದೆ.
ಹಸು ಸಾಕಣೆ ಮಾಡಲು ಬೇಕಾಗುವ ಉತ್ತಮವಾದ ಕೊಟ್ಟಿಗೆ ಮತ್ತು ನೀರಿನ ವ್ಯವಸ್ಥೆ ಮಾಡಿ ಅವುಗಳನ್ನು ನೋಡಿಕೊಳ್ಳಲು ಕೆಲ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ.
ಗ್ರಾಮಾಂತರ ಪ್ರದೇಶದ ರೈತರು ಹೈನುಗಾರಿಕೆಯಲ್ಲಿ ತೊಡಗುವುದರಿಂದ ತಮ್ಮ ಅರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಲು ಅನುಕೂಲ ಜೊತೆಗೆ ಹಸುನಿನ ಗೊಬ್ಬರ ಕಾಫಿ ತೋಟಕ್ಕೆ ಬಹುಪಯೋಗ ಆಗಲಿದೆ ಎಂದು ಅವರು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಇಬ್ಬರೂ ಉದ್ಯಮಿಗಳು ರಾಜಕೀಯ ಪಕ್ಷದ ಪ್ರಮುಖರು ರಾಜ್ಯದ ಐಎನ್ಟಿಯುಸಿಯ ಕಾರ್ಮಿಕ ಸಂಘಟನೆ ಉಪಾಧ್ಯ ಕ್ಷರಾಗಿ, ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ಹೈನುಗಾರಿಕೆಗೆ ಹೆಚ್ಚು ಒತ್ತು ನೀಡಿರುವುದು ಮಾದರಿಯಾಗಿದೆ.
ಸ್ಥಳೀಯವಾಗಿ ಹೈನುಗಾರಿಕೆ ಯನ್ನು ಅಭಿವೃದ್ಧಿಪಡಿಸುವ ಚಿಂತನೆಯಲ್ಲಿ ತೊಡಗಿರುವ ಉದ್ಯಮಿಗಳು ಮುಂದಿನ ದಿನಗಳಲ್ಲಿ ಗುಜರಾತ್ನಿಂದ ಹೆಚ್ಚು ಹಸುಗಳನ್ನು ತಂದು ೫೦೦ಕ್ಕೂ ಹೆಚ್ಚು ಹಸುಗಳನ್ನು ಸಾಕುವ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
- ಕೆ.ಕೆ. ನಾಗರಾಜಶೆಟ್ಟಿ.