ಚೆಟ್ಟಳ್ಳಿ, ಜು. ೧೧: ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊರೊನಾ ಪ್ರಕರಣಗಳು ಕಳೆದ ಮೂರು ದಿನಗಳಿಂದ ಹೆಚ್ಚಾದ ಹಿನ್ನೆಲೆ ಸ್ವಯಂ ಬಂದ್‌ಗೆ ಚೆಟ್ಟಳ್ಳಿ ವರ್ತಕರು ನಿರ್ಧಾರ ಕೈಗೊಂಡಿದ್ದಾರೆ.
ಚೆಟ್ಟಳ್ಳಿ ಪಟ್ಟಣದಲ್ಲಿ ೩೦, ಕಂಡಕೆರೆಯಲ್ಲಿ ೧೯, ಕೂಡ್ಲೂರು ಚೆಟ್ಟಳ್ಳಿಯಲ್ಲಿ ೧, ಈರಳೆವಳಮುಡಿಯಲ್ಲಿ ೧ ಒಟ್ಟು ಸೇರಿ ೫೧ ಪ್ರಕರಣಗಳು ಪತ್ತೆಯಾಗಿವೆೆ. ಕೋವಿಡ್ ಪ್ರಕರಣ ನಿಯಂತ್ರಣಕ್ಕೆ ಪ್ರತಿದಿನ ಬೆಳಿಗ್ಗೆ ೬ ರಿಂದ ಮಧ್ಯಾಹ್ನ ೨ ಗಂಟೆಯವರೆಗೆ ಅಂಗಡಿ ಮುಂಗಟ್ಟನ್ನು ತೆರೆದು ಮಧ್ಯಾಹ್ನ ೨ರ ನಂತರ ವರ್ತಕರೆಲ್ಲರೂ ಸ್ವಯಂ ಪ್ರೇರತವಾಗಿ ಅಂಗಡಿ ಮುಂಗಟ್ಟನ್ನು ಮುಚ್ಚಿ ಬಂದ್ ಮಾಡುವಂತೆ ತೀರ್ಮಾನಿಸಿರುವ ಬಗ್ಗೆ
(ಮೊದಲ ಪುಟದಿಂದ) ಚೆಟ್ಟಳ್ಳಿ ವರ್ತಕರ ಸಂಘದ ಅಧ್ಯಕ್ಷ ಸುರೇಶ್ ಬಾಬು ‘ಶಕ್ತಿ’ಗೆ ತಿಳಿಸಿದ್ದಾರೆ.
ಉಪ ತಹಶೀಲ್ದಾರ್ ಲೋಹಿತ್, ಕಂದಾಯ ಪರಿವೀಕ್ಷಕ ಶಿವಪ್ಪ, ಗ್ರಾಮ ಲೆಕ್ಕಿಗರಾದ ನಾಗೇಂದ್ರ, ಚೆಟ್ಟಳ್ಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಂದೀಶ್ ಕುಮಾರ್ ಬಿ.ಸಿ ಕೋವಿಡ್ ಪ್ರಕರಣ ಇರುವ ಸ್ಥಳಕ್ಕೆ ತೆರಳಿ ಪರಿಶೀಲಿಸಿ ೧೪ ದಿನದವರೆಗೆ ಸೀಲ್‌ಡೌನ್ ಮಾಡಿದರು. ಕೊರೊನಾ ಹೆಚ್ಚಿರುವ ಸ್ಥಳಗಳಿಗೆ ಆರೋಗ್ಯ ಇಲಾಖಾಧಿಕಾರಿಗಳು ಭೇಟಿ ನೀಡಿ ಕೋವಿಡ್ ಪರೀಕ್ಷೆ ಮಾಡಲಿದ್ದಾರೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಂದೀಶ್ ಕುಮಾರ್ ತಿಳಿಸಿದ್ದಾರೆ.