ಮಡಿಕೇರಿ, ಜು. ೧೧ : ಕೋವಿಡ್ ಲಸಿಕೆಯನ್ನು ಮರೆಯದೇ ಹಾಕಿಸಿಕೊಳ್ಳಿ ಎಂಬ ಸಂದೇಶದ ಪ್ರಚಾರ ಚಿತ್ರಗಳನ್ನು ಗೋಣಿಕೊಪ್ಪ ರೋಟರಿ ಕ್ಲಬ್ ಬಿಡುಗಡೆ ಮಾಡಿದ್ದು ಗೋಣಿಕೊಪ್ಪ ವ್ಯಾಪ್ತಿಯಲ್ಲಿ ಈ ಭಿತ್ತಿ ಪತ್ರಗಳು ಆಕರ್ಷಿಸುತ್ತಿವೆ.

ಕೋವಿಡ್ ನಿಯಂತ್ರಣ ಸಂಬAಧಿತ ಈ ವರ್ಷ ರೋಟರಿ ಕ್ಲಬ್‌ಗಳು ಜನಜಾಗೃತಿ ಅಭಿಯಾನ ವನ್ನು ವಿಶೇಷ ರೀತಿಯಲ್ಲಿ ಹಮ್ಮಿಕೊಂಡಿದೆ. ಇದರ ಅಂಗವಾಗಿ ಗೋಣಿಕೊಪ್ಪ ರೋಟರಿ ಕ್ಲಬ್ ನಿಂದ ನಾನಾ ವಿಧದ ಚಿತ್ತಾಕರ್ಷಕ ಪೋಸ್ಟರ್ ಗಳನ್ನು ಮುದ್ರಿಸಿ ಗೋಣಿಕೊಪ್ಪ ಮತ್ತು ವ್ಯಾಪ್ತಿಯ ಊರುಗಳಲ್ಲಿ ಪ್ರಚಾರ ಮಾಡಲಾಗಿದೆ.

‘‘ಲಸಿಕೆ ಹಾಕಿಸಿಕೊಳ್ಳಿ.. ನಿಮ್ಮನ್ನು ಮತ್ತು ಇತರರನ್ನು ಕೋವಿಡ್ ಮಹಾಮಾರಿಯಿಂದ ರಕ್ಷಿಸಿ, ನಾವೆಲ್ಲರೂ ಒಗ್ಗಟ್ಟಾಗಿ ಕೊರೋನಾ ವೈರಸ್ ವಿರುದ್ದ ಹೋರಾಡೋಣ.. ರೋಗ ಬಾರದಂತೆ ಜಾಗೃತಿ ವಹಿಸೋಣ..ಸ್ವಚ್ಛತೆ, ಲಸಿಕೆ.. ಕಟ್ಟುನಿಟ್ಟಿನ ಕ್ರಮಗಳು.... ಕೋವಿಡ್ ವಿರುದ್ದ ಗೆಲ್ಲಲು ಸಹಾಯ ಮಾಡುತ್ತದೆ... ಸಂಕಷ್ಟ ಕಾಲದಲ್ಲಿ ಸಕಾರಾತ್ಮಕವಾಗಿ ಯೋಚಿಸಿ...’’ ಖಂಡಿತಾ ಗೆಲ್ಲುತ್ತೇವೆ ಎಂಬ ಗುಣಾತ್ಮಕ ಸಂದೇಶಗಳನ್ನು ಜನರ ಮನ ಸೆಳೆಯಲು ಅಂಗಡಿಗಳಲ್ಲಿ ಹಾಕಲಾಗುತ್ತಿದೆ.

ಸ್ವಯಂಪ್ರೇರಿತರಾಗಿ ಲಸಿಕೆ ಪಡೆಯಿರಿ..ಸೋಂಕಿಗೆ ತುತ್ತಾಗುತ್ತಿರು ವವರಿಗಿಂತ ಕೋವಿಡ್‌ನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ನಿಮ್ಮ ಕುಟುಂಬದ ರಕ್ಷಣೆ ನಿಮ್ಮಿಂದಲೇ ಪ್ರಾರಂಭವಾಗುತ್ತದೆ. ನೀವೇ ಮೊದಲಿಗರಾಗಿ ಲಸಿಕೆ ಪಡೆದುಕೊಳ್ಳಿ..ನೀವು ಬಹು ಮುಖ್ಯರಾದವರು.. ಹೀಗಾಗಿ ನೀವೇ ಮೊದಲು ಲಸಿಕೆ ಹಾಕಿಸಿಕೊಳ್ಳಿ.. ನಾವು ಲಸಿಕೆ ಹಾಕಿಸಿಕೊಳ್ಳಲು ಸಿದ್ದರಾಗಿ ದ್ದೇವೆ.. ನೀವು? ಇಂಥ ವಿಭಿನ್ನ ಸಂದೇಶಗಳ ವೈವಿಧ್ಯಮಯ ಪೋಸ್ಟರ್ ಗಳು ಗೋಣಿಕೊಪ್ಪ ವ್ಯಾಪ್ತಿಯಲ್ಲಿ ಜನರ ಮನಸೆಳೆಯುವದಷ್ಟೇ ಅಲ್ಲ.. ಜನರಲ್ಲಿ ಲಸಿಕೆ ಸಂಬAಧಿತ ಜಾಗೃತಿ ಮೂಡಿಸುತ್ತಿದೆ.

೧೮ ವರ್ಷದ ಮೇಲ್ಪಟ್ಟವರು ಲಸಿಕೆ ಹಾಕಿಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿಯೂ ಯುವಪೀಳಿಗೆಯ ಮನಸೆಳೆಯುವ ನಿಟ್ಟಿನಲ್ಲಿ ಕನ್ನಡದೊಂದಿಗೆ ಇಂಗ್ಲೀಷ್‌ನಲ್ಲಿಯೂ ಪೋಸ್ಟರ್‌ಗಳನ್ನು ಮುದ್ರಿಸಲಾಗಿದೆ. ನಮ್ಮ ಪ್ರಯತ್ನಕ್ಕೆ ಗೋಣಿಕೊಪ್ಪ ಆರ್.ಎಂ.ಸಿ. ಅಧ್ಯಕ್ಷ ಮಂಜುಗಣಪತಿ ಸಹಕಾರ ನೀಡಿ ಪೋಸ್ಟರ್‌ಗಳ ಮುದ್ರಣಕ್ಕೆ ನೆರವಾದರು. ಅನೇಕರು ಪೋಸ್ಟರ್‌ಗಳಿಗಾಗಿ ಬೇಡಿಕೆ ಇರಿಸುತ್ತಿರುವುದು ನಮ್ಮ ಹೊಣೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಗೋಣಿಕೊಪ್ಪ ರೋಟರಿ ಕಾರ್ಯದರ್ಶಿ ಜೆ.ಕೆ. ಸುಭಾಷಿಣಿ ಹೆಮ್ಮೆಯಿಂದ ಹೇಳಿದರು.

ಕೋವಿಡ್ ನಿರೋಧಕ ಲಸಿಕೆಗಾಗಿ ಪ್ರಾರಂಭಿಕ ಹಂತದಲ್ಲಿ ಜನ ಹಿಂದೇಟು ಹಾಕಿದ್ದರು. ವೀರಾಜಪೇಟೆ ತಾಲೂಕಿನಲ್ಲಿ ಶಾಸಕ ಕೆ.ಜಿ.ಬೋಪಯ್ಯ ಪ್ರಯತ್ನದಿಂದಾಗಿ ಆದಿವಾಸಿ ಹಾಡಿಗಳಲ್ಲಿಯೂ ವಿಶೇಷ ಅಭಿಯಾನ ಹಮ್ಮಿಕೊಂಡು ಲಸಿಕೆ ಹಾಕಿಸುವಂತೆ ಮನವೊಲಿಸಲಾಗಿತ್ತು. ಹೀಗಾಗಿ ರಾಜ್ಯದಲ್ಲಿ ನಮ್ಮ ತಾಲೂಕು ಲಸಿಕೆ ಹಾಕಿಸಿಕೊಳ್ಳುವವರ ಸಂಖ್ಯೆಯಲ್ಲಿ ಗಣನೀಯ ಸಾಧನೆ ಮಾಡಿದೆ. ರೋಟರಿಯಿಂದ ಲಭಿಸಿದ ಜಾಗೃತಿ ಸಂದೇಶದ ಪೋಸ್ಟರ್‌ಗಳು ನಮ್ಮ ಕಾರ್ಯಕ್ಕೆ ಮತ್ತಷ್ಟು ಸಹಾಯ ನೀಡಿದೆ ಎಂದು ವೀರಾಜಪೇಟೆ ತಾಲೂಕು ಆರೋಗ್ಯಾಧಿಕಾರಿ ಡಾ.ಯತಿರಾಜ್ ತಿಳಿಸಿದರು. ಅನೇಕ ದಿನಗಳ ಕಾಲ ಹಾಳಾಗದೇ ಅಂಗಡಿಗಳಲ್ಲಿ ಕಂಗೊಳಿಸಬಲ್ಲ ಲಸಿಕೆ ಹಾಕಿಸಿಕೊಳ್ಳಿ ಎಂಬ ಜಾಗೃತಿ ಸಂದೇಶದ ವಿಭಿನ್ನ ಪೋಸ್ಟರ್ ಗಳು ಲಸಿಕೆ ಬಗ್ಗೆ ಜನರ ಮರೆವನ್ನು ಜಾಗೃತಿಗೊಳಿಸಿ ಲಸಿಕೆ ಹಾಕಿಸಿಕೊಳ್ಳುವಂತೆ ಪ್ರೇರೇಪಿಸುತ್ತಿದೆ.