ಸಿದ್ದಾಪುರ, ಜು. ೧೧: ಎಸ್.ವೈ.ಎಸ್. ಇಸಾಬ ಹಾಗೂ ನೆಲ್ಲಿಹುದಿಕೇರಿ ಎಸ್‌ಎಸ್‌ಎಫ್ ಘಟಕದ ವತಿಯಿಂದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವು ನೆಲ್ಲಿಹುದಿಕೇರಿಯ ಕೆ.ಪಿ.ಎಸ್. ಶಾಲೆಯ ಆವರಣದಲ್ಲಿ ನಡೆಯಿತು.

ಕರ್ನಾಟಕ ರಾಜ್ಯ ಎಸ್.ವೈ.ಎಸ್. ತಾ. ೧ ರಿಂದ ೧೫ ರವರೆಗೆ ರಾಜ್ಯದ ಎಲ್ಲಾ ಎಸ್‌ವೈಎಸ್ ಘಟಕಗಳಿಗೆ ಸ್ವಚ್ಛತಾ ಅಭಿಯಾನ ನಡೆಸುವಂತೆ ಕರೆ ನೀಡಿದ ಹಿನ್ನೆಲೆಯಲ್ಲಿ, ನೆಲ್ಲಿಹುದಿಕೇರಿಯ ಎಸ್‌ವೈಎಸ್ ಘಟಕವು ನೆಲ್ಯಹುದಿಕೇರಿಯ ಕೆ.ಪಿ.ಎಸ್. ಶಾಲಾ ಮೈದಾನ ಮತ್ತು ವಠಾರದಲ್ಲಿ ಕಳೆನಾಶಕ ಮದ್ದು ಸಿಂಪಡಿಸಿ ಶುಚಿಗೊಳಿಸಿದರು.

ಈ ಸಂದÀರ್ಭದಲ್ಲಿ ಸಿಯಾಬುದ್ದಿನ್ ತಂಗಳು ವಿ.ಪಿ.ಎಸ್, ಘಟಕ ಕಾರ್ಯದರ್ಶಿ ರಂಸಾದ್, ಎಸ್‌ವೈಎಸ್ ರಾಜ್ಯ ಸಮಿತಿ ಸದಸ್ಯ ಹಂಸ, ನೆಲ್ಲಿಹುದಿಕೇರಿ ಘಟಕದ ಉಪಾಧ್ಯಕ್ಷ ಹಸೈನಾರ್ ಸಕಾಫಿ, ಉಮ್ಮರ್ ಎ.ಪಿ., ಅಮೀರ್, ಎಸ್.ಎಸ್.ಎಫ್. ನೆಲ್ಲಿಹುದಿಕೇರಿ ಘಟಕದ ಅಧ್ಯಕ್ಷ ಹಾರೀಸ್ ಸಕಾಫಿ, ಅಸ್ಕರ್, ಮಜೀದ್, ಆರೀಫ್ ಹಕೀಮ್ ಉಸ್ತಾದ್, ಕೆ.ಪಿ.ಎಸ್. ಶಾಲೆಯ ಉಪಪ್ರಾಂಶುಪಾಲ ಅನಿಲ್ ಕುಮಾರ್ ಕೆ.ಪಿ., ಉಪನ್ಯಾಸಕ ಮಣಿಕಂಠ ಹಾಗೂ ರೂಪಶ್ರೀ ಹಾಜರಿದ್ದರು.