ಮಡಿಕೇರಿ, ಜು. ೧೧: ಲಾಕ್ಡೌನ್ ನಿರ್ಬಂಧ ತೆರವುಗೊಂಡ ತಕ್ಷಣವೇ ಗೋಣಿಕೊಪ್ಪ ಪಟ್ಟಣದಲ್ಲಿ ಯಾರೋ ಕಸವನ್ನು ತಂದು ಸುರಿದಿರುವುದು ಕಂಡುಬAದಿದೆ. ಅಲ್ಲಿನ ಮೋರ್ ಸೂಪರ್ ಮಾರ್ಕೆಟ್ ಎದುರಿನ ಜಾಗದಲ್ಲಿ ಯಾರೋ ಕಸವನ್ನು ರಾಶಿಯಾಗಿ ತಂದು ಹಾಕಿದ್ದಾರೆ. ಪಂಚಾಯಿತಿ ಪ್ರಮುಖರು ಇವರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕೆಂದು ಅಲ್ಲಿನ ಉದ್ಯಮಿ ಕೊಲ್ಲಿರ ಉಮೇಶ್ ಆಗ್ರಹಿಸಿದ್ದಾರೆ.