ಮಡಿಕೇರಿ, ಜು. ೧೧: ವನ ಮಹೋತ್ಸವದ ಪ್ರಯುಕ್ತ ಮಕ್ಕಂದೂರು ಶ್ರೀ ಭದ್ರಕಾಳೇಶ್ವರಿ ದೇವಸ್ಥಾನ, ಶಾಲಾ ಆವರಣ, ಶ್ರೀ ಕೋಟಿ ಚೆನ್ನಯ ಗರಡಿ ಹಾಗೂ ಕರ್ಣಂಗೇರಿಯ ನಿಸರ್ಗ ಬಡಾವಣೆಯಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮ ನಡೆಯಿತು.

ಈ ಸಂದರ್ಭ ರಾಜ್ಯ ಪಶ್ಚಿಮಘಟ್ಟಗಳ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎ. ಹರೀಶ್, ಮಕ್ಕಂದೂರು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬಿ.ಯಸ್. ವಿಜಯ, ಪಂಚಾಯಿತಿ ಸದಸ್ಯರಾದ ಬಿ.ಎನ್. ರಮೇಶ್, ವಿಮಲಾ ರವಿ, ಕೆ. ಸುನಂದಾ, ಪ್ರಮುಖರಾದ ಗಣೇಶ್, ಕುಶ, ವಿಜೇತ, ಪುರುಷೋತ್ತಮ, ಪರೀಕ್ಷಿತ್, ಮಹೇಶ್, ಶಿಕ್ಷಕರು ವಿದ್ಯಾರ್ಥಿಗಳು, ಗ್ರಾಮಸ್ಥರು ಕೈಜೋಡಿಸಿದರು.