ಸೋಮವಾರಪೇಟೆ,ಜು.೧೧: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಭತ್ತ ಕೃಷಿ ಕಾರ್ಯಕ್ಕೆ ಪೂರಕ ವಾತಾವರಣ ನಿರ್ಮಾಣ ವಾಗಿದ್ದು, ಕಾಫಿ, ಏಲಕ್ಕಿ ಸೇರಿದಂತೆ ಶುಂಠಿ ಕೃಷಿಯನ್ನು ಉಳಿಸಿಕೊಳ್ಳುವತ್ತ ಕೃಷಿಕ ವರ್ಗ ಚಿಂತನೆ ಹರಿಸಬೇಕಿದೆ ಎಂದು ಇಲಾಖಾಧಿಕಾರಿಗಳು ಸಲಹೆ ನೀಡುತ್ತಿದ್ದಾರೆ.

ತಾಲೂಕಿನ ಶಾಂತಳ್ಳಿ ಹೋಬಳಿ ಸೇರಿದಂತೆ ಗರ್ವಾಲೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಈಗಾಗಲೇ ಶೀತಮಯ ವಾತಾವರಣ ನಿರ್ಮಾಣವಾಗಿದ್ದು, ಮಳೆಯೂ ಸುರಿಯುತ್ತಿದೆ. ಸೂರ್ಲಬ್ಬಿ ವ್ಯಾಪ್ತಿಯಲ್ಲಿ ಏಲಕ್ಕಿ ಬೆಳೆಗೆ ಹೆಚ್ಚಾಗಿ ಕೊಳೆರೋಗ ಬಾಧಿಸುವ ಆತಂಕ ಎದುರಾಗಿದೆ.

ಇದರೊಂದಿಗೆ ಕಾಫಿ, ಶುಂಠಿ ಕೃಷಿಯೂ ನಷ್ಟಗೊಳ್ಳುವ ಸಂಭವವಿದ್ದು, ರೈತಾಪಿ ವರ್ಗ ಪ್ರಸಕ್ತ ವರ್ಷವೂ ಫಸಲು ನಷ್ಟ ಅನುಭವಿಸಬಾರದು ಎಂದಾದರೆ ಈಗಿನಿಂದಲೇ ಸುಧಾರಣ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಕಾಫಿ ಮಂಡಳಿ, ಕೃಷಿ ಹಾಗೂ ತೋಟಗಾರಿಕಾ ಇಲಾಖಾಧಿಕಾರಿಗಳು ಸಲಹೆ ನೀಡಿದ್ದಾರೆ.

ತಾಲೂಕಿನಲ್ಲಿ ಅತೀ ಹೆಚ್ಚು ಮಳೆ ಬೀಳುವ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ಯ ಪುಷ್ಪಗಿರಿ ಬೆಟ್ಟತಪ್ಪಲಿನ ಗ್ರಾಮಗಳಲ್ಲಿ ಪ್ರಸಕ್ತ ವರ್ಷ ಈವರೆಗೆ ಉತ್ತಮ ಮಳೆಯಾಗಿದೆ. ಈ ವ್ಯಾಪ್ತಿಯ ಬೆಂಕಳ್ಳಿ, ಹೆಗ್ಗಡಮನೆ, ಕುಂದಳ್ಳಿ, ಜಕ್ಕನಳ್ಳಿ, ಕುಡಿಗಾಣ, ಕೊತ್ನಳ್ಳಿ, ಹರಗ, ಗರ್ವಾಲೆ, ಸೂರ್ಲಬ್ಬಿ, ಶಾಂತಳ್ಳಿ, ಮಲ್ಲಳ್ಳಿ, ಬೀದಳ್ಳಿ, ನಾಡ್ನಳ್ಳಿ ಗ್ರಾಮಗಳಲ್ಲಿ ಏಲಕ್ಕಿ ಬೆಳೆಗಳು ಒಂದಿಷ್ಟು ಉಳಿದುಕೊಂಡಿದ್ದು, ಕೊಳೆರೋಗದಿಂದ ಇವುಗಳನ್ನು ಉಳಿಸಿಕೊಳ್ಳುವ ಸವಾಲು ಕೃಷಿಕರ ಮೇಲಿದೆ.

ಹಿಂದೊಮ್ಮೆ ಭಾರೀ ಪ್ರಮಾಣದಲ್ಲಿ ಏಲಕ್ಕಿ ಬೆಳೆಯುತ್ತಿದ್ದ ಈ ಪ್ರದೇಶಗಳು ಇದೀಗ ಕಾಫಿ ತೋಟಗಳಾಗಿ ಬದಲಾವಣೆಗೊಂಡಿವೆ. ಕೊಳೆರೋಗ ಏಲಕ್ಕಿಯನ್ನು ಆಪೋಷನಗೈದ ಪರಿಣಾಮ ಇದೀಗ ಅಲ್ಪಸ್ವಲ್ಪ ಏಲಕ್ಕಿ ಉಳಿದುಕೊಂಡಿದೆ.

ಇದರೊಂದಿಗೆ ಈ ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ಕೊಳೆ ರೋಗದಿಂದ ಅರೇಬಿಕಾ ಕಾಫಿ ಗಿಡದಲ್ಲಿü ಕಾಯಿಗಳು ಉದುರುತ್ತವೆ. ವಿಪರೀತ ಶೀತದಿಂದ ಕಾಫಿ ಗಿಡದ ಎಲೆಗಳು ಉದುರಿ ರೆಕ್ಕೆಗಳು ಕೊಳೆತು ಬೀಳುವುದರಿಂದ ನಿರೀಕ್ಷಿತ ಫಸಲು ಪಡೆಯಲು ಅಸಾಧ್ಯ. ಇದರೊಂದಿಗೆ ಗಿಡಗಳೂ ರೋಗಪೀಡಿತವಾದರೆ ಕೃಷಿಕರು ನಷ್ಟ ಅನುಭವಿಸಬೇಕಾಗುತ್ತದೆ.

ಕುಮಾರಳ್ಳಿ, ಹೆಗ್ಗಡಮನೆ, ಕೊತ್ನಳ್ಳಿ, ನಾಡ್ನಳ್ಳಿ, ಮಲ್ಲಳ್ಳಿ, ಹರಗ, ಸುಂಟಿಕೊಪ್ಪ ಹೋಬಳಿಯ ಸೂರ್ಲಬ್ಬಿ, ಕಿಕ್ಕರಳ್ಳಿ, ಕುಂಬಾರಗಡಿಗೆ ಮಂಕ್ಯಾ ಗ್ರಾಮಗಳಲ್ಲಿ ಈಗಾಗಲೇ ೪೦ ಇಂಚಿಗೂ ಅಧಿಕ ಮಳೆ ಸುರಿದಿದೆ. ಏಲಕ್ಕಿ ಗಿಡಗಳ ತಂಡೆಗ¼ನ್ನು ಕೊಳೆರೋಗ ಹಾಗೂ ಕಟ್ಟೆರೋಗದಿಂದ ಉಳಿಸಿಕೊಳ್ಳಲು ರೈತರು ಕ್ರಮವಹಿಸಬೇಕಿರುವದು ಅಗತ್ಯವಾಗಿದೆ.

ನೆರಳು ಹೆಚ್ಚಾಗಿರುವ ಕಾಫಿ ತೋಟಗಳಲ್ಲಿ ಮರಗಳ ಜೋಲು ರೆಕ್ಕೆಗಳನ್ನು ತೆಗೆದು, ಗಾಳಿ, ಬೆಳಕು ಹರಡುವಂತೆ ಮಾಡಬೇಕು. ಗಿಡಗಳ ಬುಡದಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಗಿಡಗಳ ಸುತ್ತಲಿನ ತರಗು ಹೊದಿಕೆಯನ್ನು ತೆಗೆಯಬೇಕು. ಕಾಫಿ ಗಿಡಗಳ ಮೇಲೆ ಸಿಲ್ವರ್ ಸೇರಿದಂತೆ ಇತರ ಮರದ ಎಲೆಗಳು ಸಂಗ್ರಹವಾಗದAತೆ ಎಚ್ಚರ ವಹಿಸಬೇಕು ಎಂದು ಕಾಫಿ ಮಂಡಳಿ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಕಾಫಿ ಗಿಡಗಳಲ್ಲಿರುವ ಹೆಚ್ಚಿನ ಚಿಗುರನ್ನು ತೆಗೆದು, ಗಿಡದ ನೆತ್ತಿಗಳನ್ನು ಬಿಡಿಸಬೇಕು. ರೋಗ ಬಾಧಿತ ಗಿಡಗಳ ಭಾಗವನ್ನು ಸ್ವಚ್ಛ ಮಾಡಬೇಕು. ರೋಗಕ್ಕೆ ತುತ್ತಾದ ಎಲೆ, ರೆಕ್ಕೆ, ಕಾಯಿಗಳನ್ನು ಇದೀಗ ಕಾಫಿ ತೋಟಗಳಾಗಿ ಬದಲಾವಣೆಗೊಂಡಿವೆ. ಕೊಳೆರೋಗ ಏಲಕ್ಕಿಯನ್ನು ಆಪೋಷನಗೈದ ಪರಿಣಾಮ ಇದೀಗ ಅಲ್ಪಸ್ವಲ್ಪ ಏಲಕ್ಕಿ ಉಳಿದುಕೊಂಡಿದೆ.

ಇದರೊಂದಿಗೆ ಈ ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ಕೊಳೆ ರೋಗದಿಂದ ಅರೇಬಿಕಾ ಕಾಫಿ ಗಿಡದಲ್ಲಿü ಕಾಯಿಗಳು ಉದುರುತ್ತವೆ. ವಿಪರೀತ ಶೀತದಿಂದ ಕಾಫಿ ಗಿಡದ ಎಲೆಗಳು ಉದುರಿ ರೆಕ್ಕೆಗಳು ಕೊಳೆತು ಬೀಳುವುದರಿಂದ ನಿರೀಕ್ಷಿತ ಫಸಲು ಪಡೆಯಲು ಅಸಾಧ್ಯ. ಇದರೊಂದಿಗೆ ಗಿಡಗಳೂ ರೋಗಪೀಡಿತವಾದರೆ ಕೃಷಿಕರು ನಷ್ಟ ಅನುಭವಿಸಬೇಕಾಗುತ್ತದೆ.

ಕುಮಾರಳ್ಳಿ, ಹೆಗ್ಗಡಮನೆ, ಕೊತ್ನಳ್ಳಿ, ನಾಡ್ನಳ್ಳಿ, ಮಲ್ಲಳ್ಳಿ, ಹರಗ, ಸುಂಟಿಕೊಪ್ಪ ಹೋಬಳಿಯ ಸೂರ್ಲಬ್ಬಿ, ಕಿಕ್ಕರಳ್ಳಿ, ಕುಂಬಾರಗಡಿಗೆ ಮಂಕ್ಯಾ ಗ್ರಾಮಗಳಲ್ಲಿ ಈಗಾಗಲೇ ೪೦ ಇಂಚಿಗೂ ಅಧಿಕ ಮಳೆ ಸುರಿದಿದೆ. ಏಲಕ್ಕಿ ಗಿಡಗಳ ತಂಡೆಗ¼ನ್ನು ಕೊಳೆರೋಗ ಹಾಗೂ ಕಟ್ಟೆರೋಗದಿಂದ ಉಳಿಸಿಕೊಳ್ಳಲು ರೈತರು ಕ್ರಮವಹಿಸಬೇಕಿರುವದು ಅಗತ್ಯವಾಗಿದೆ.

ನೆರಳು ಹೆಚ್ಚಾಗಿರುವ ಕಾಫಿ ತೋಟಗಳಲ್ಲಿ ಮರಗಳ ಜೋಲು ರೆಕ್ಕೆಗಳನ್ನು ತೆಗೆದು, ಗಾಳಿ, ಬೆಳಕು ಹರಡುವಂತೆ ಮಾಡಬೇಕು. ಗಿಡಗಳ ಬುಡದಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಗಿಡಗಳ ಸುತ್ತಲಿನ ತರಗು ಹೊದಿಕೆಯನ್ನು ತೆಗೆಯಬೇಕು. ಕಾಫಿ ಗಿಡಗಳ ಮೇಲೆ ಸಿಲ್ವರ್ ಸೇರಿದಂತೆ ಇತರ ಮರದ ಎಲೆಗಳು ಸಂಗ್ರಹವಾಗದAತೆ ಎಚ್ಚರ ವಹಿಸಬೇಕು ಎಂದು ಕಾಫಿ ಮಂಡಳಿ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಕಾಫಿ ಗಿಡಗಳಲ್ಲಿರುವ ಹೆಚ್ಚಿನ ಚಿಗುರನ್ನು ತೆಗೆದು, ಗಿಡದ ನೆತ್ತಿಗಳನ್ನು ಬಿಡಿಸಬೇಕು. ರೋಗ ಬಾಧಿತ ಗಿಡಗಳ ಭಾಗವನ್ನು ಸ್ವಚ್ಛ ಮಾಡಬೇಕು. ರೋಗಕ್ಕೆ ತುತ್ತಾದ ಎಲೆ, ರೆಕ್ಕೆ, ಕಾಯಿಗಳನ್ನು ಹೆಕ್ಟೇರ್‌ನಲ್ಲಿ ಕಾಫಿ ಬೆಳೆಯಲಾಗುತ್ತಿದೆ. ಸಾಮೂಹಿಕ ಹತೋಟಿ ಕ್ರಮಗಳನ್ನು ಕೈಗೊಳ್ಳುವ ಮೂಲಕ ಬೆಳೆಗಾರರು ನಷ್ಟದಿಂದ ಪಾರಾಗಬೇಕೆಂದು ಕಾಫಿ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

ಕೊಳೆರೋಗ ಪೀಡಿತ ಗಿಡಗಳ ಎಲ್ಲಾ ಕಾಯಿ, ಎಲೆ, ರೆಕ್ಕೆಗಳನ್ನು ಸಂಗ್ರಹಿಸಿ ಮಣ್ಣಿನಲ್ಲಿ ಹೂಳಬೇಕು. ೨೦೦ಲೀಟರ್ ನೀರಿಗೆ ೧೨೦ ಗ್ರಾಂ. ಬೆವಿಸ್ಟಿನ್ ಮಿಶ್ರಣ ಮಾಡಿ ಸಿಂಪಡಿಸಬೇಕು. ಒಂದು ಏಕರೆ ತೋಟಕ್ಕೆ ಒಂದು ಚೀಲ ಯೂರಿಯಾ ಗೊಬ್ಬರ ಎರಚಬೇಕು. ಹೆಚ್ಚಿನ ಮಾಹಿತಿಗಾಗಿ ಕಾಫಿ ಮಂಡಳಿಯನ್ನು ಸಂಪರ್ಕಿಸಬಹುದು ಎಂದು ಹಿರಿಯ ಸಂಪರ್ಕಾಧಿಕಾರಿಗಳು ಸಲಹೆ ನೀಡಿದ್ದಾರೆ. -ವಿಜಯ್