ವೀರಾಜಪೇಟೆ, ಜು. ೧೧: ಅಮೇರಿಕಾದ ನ್ಯೂಯಾರ್ಕ್ನಲ್ಲಿ ಕೊಡಗು ಮೂಲದ ನಾಡಂಡ ಆಶಿಕ್ ಪೂವಣ್ಣ (೨೩) ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.

ಅಮೇರಿಕಾದ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ವಿಭಾಗದಲ್ಲಿ ಎಂಎಸ್ ಪದವಿ ಪಡೆದು ಇತ್ತೀಚೆಗಷ್ಟೆ ಅಮೆಜಾನ್ ಪ್ರೆöÊಮ್‌ನಲ್ಲಿ ಉದ್ಯೋಗದಲ್ಲಿದ್ದ ಆಶಿಕ್ ಪೂವಣ್ಣ ಮೂಲತಃ ಬಲ್ಲಂಬೇರಿ ನಿವಾಸಿಯಾಗಿದ್ದಾರೆ. ಆರ್‌ಎಂಪಿಯ ನಿವೃತ್ತ ಉದ್ಯೋಗಿ ಪ್ರಿನ್ಸ್ ತಿಮ್ಮಯ್ಯ ಹಾಗೂ ಲೀನಾ ದಂಪತಿಯ ಪುತ್ರ. ಅಂತ್ಯಕ್ರಿಯೆ ಅಮೇರಿಕಾದಲ್ಲಿಯೆ ನಡೆದಿದೆ ಎಂದು ಕುಟುಂಬ ಮೂಲದವರು ತಿಳಿಸಿದ್ದಾರೆ.