ಮಡಿಕೇರಿ, ಜು. ೧೦: ಕೊಡಗು ಯುವಸೇನೆಯ ವೀರಾಜಪೇಟೆ ನಗರ ಅಧ್ಯಕ್ಷರಾಗಿ ಜೀವನ್ ನಾಣಯ್ಯ ಅವರನ್ನು ನೇಮಕ ಮಾಡಲಾಗಿದೆ ಎಂದು ಯುವ ಸೇನೆಯ ಜಿಲ್ಲಾ ಪ್ರಮುಖ ಕುಲದೀಪ್ ಪೂಣಚ್ಚ, ಜಿಲ್ಲಾ ಸಂಚಾಲಕ ಮಾಚೆಟ್ಟಿರ ಸಚಿನ್ ಮಂದಣ್ಣ ಅವರು ತಿಳಿಸಿದ್ದಾರೆ.

ವೀರಾಜಪೇಟೆ ನಗರದಲ್ಲಿ ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಸಂಪೂರ್ಣ ಅಧಿಕಾರವನ್ನು ಇವರಿಗೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.