ವೀರಾಜಪೇಟೆ, ಜು. ೮: ‘ಸರ್ ನಾವು ಕಳೆದ ಒಂದು ತಿಂಗಳಿAದ ಚೆಕ್‌ಪೋಸ್ಟ್ನಲ್ಲಿ ಹಣ ಕೊಟ್ಟು ಹೋಗುತ್ತಿದ್ದೇವು. ಈಗ ಇವರು ಬಿಡುತ್ತಿಲ್ಲ. ನೀವಾದರೂ ಹೇಳಿ ನಮ್ಮನ್ನು ಕಳುಹಿಸಿಕೊಡಿ.’ ಇದು ಕರ್ನಾಟಕ-ಕೆರಳ ಗಡಿಭಾಗವಾದ ಮಾಕುಟ್ಟ ಚೆಕ್‌ಪೋಸ್ಟ್ನಲ್ಲಿ ಗುರುವಾರ ಸರಕು ಸಾಗಾಣಿಕಾ ವಾಹನ ಚಾಲಕನೊಬ್ಬ ಬೇಡಿಕೊಂಡ ಪರಿ..!

ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದ್ದು, ಗಡಿ ಭಾಗವಾದ ಮಾಕುಟ್ಟ ಚೆಕ್‌ಪೋಸ್ಟ್ನಲ್ಲಿ ಯಾವುದೇ ತಪಾಸಣೆ ಇಲ್ಲದೆ ಕೆಲವು ವಾಹನಗಳನ್ನು ಹಣ ಪಡೆದುಕೊಂಡು ಜಿಲ್ಲೆಯೊಳಗೆ ಪ್ರವೇಶ ನೀಡುತ್ತಿರುವ ಸಾರ್ವಜನಿಕರ ದೂರಿನ ಅನ್ವಯ ಚೆಕ್‌ಪೋಸ್ಟ್ ಬಳಿ ತೆರಳಿದಾಗ ಮ್ಯೆಸೂರಿನ ಸಮಿಯುಲ್ಲಾ ಅವರು ಮಾತನಾಡಿ ವಾರಕ್ಕೆ ೨ ಬಾರಿ ಮ್ಯೆಸೂರಿನಿಂದ ಕೇರಳದ ಕಣ್ಣನೂರು, ಇರಿಟ್ಟಿ ತಲಚೇರಿ ಭಾಗಗಳಿಗೆ ಮುಖಕ್ಕೆ ಬಳಸುವ ಕ್ರೀಮ್ ಸೋಪುಗಳನ್ನು ಸರಬರಾಜು ಮಾಡುವ ಏಜನ್ಸಿ ಪಡೆದುಕೊಂಡಿದ್ದೇವೆ. ಮಾನಂದವಾಡಿ ಮೂಲಕ ತಲಚೇರಿಗೆ ತೆರಳಿ ಸರಬರಾಜು ಮಾಡಿ ಇದೀಗ ಮೈಸೂರಿಗೆ ತೆರಳಬೇಕು. ಪ್ರತಿಬಾರಿ ತೆರಳಬೇಕಾದರೆ ೨೦೦ ರಿಂದ ೩೦೦ ರೂಗಳನ್ನು ನೀಡಿ ತೆರಳುತ್ತಿದ್ದೆವು. ಇದೀಗ ನೆಗೆಟಿವ್ ವರದಿ ಇಲ್ಲದೆ ರಾಜ್ಯ ಪ್ರವೇಶಕ್ಕೆ ಅನುಮತಿ ನೀಡದಿರುವುದರಿಂದ ತೊಂದರೆ ಅನುಭವಿಸುವಂತಾಗಿದೆ ಎಂದು ಅಳಲು ತೋಡಿಕೊಂಡರು. ಮೊದಲೇ ಹಣವನ್ನು ತೆಗೆದುಕೊಳ್ಳದೆ ನೆಗೆಟಿವ್ ವರದಿ ನೀಡಿದರೆ ಪ್ರವೇಶ ನೀಡುವುದಾಗಿ ತಿಳಿಸಿದ್ದರೆ ಪ್ರಮಾಣ ಪತ್ರದೊಂದಿಗೆ ಬರುತ್ತಿದ್ದೆವು. ಕಟ್ಟುನಿಟ್ಟಿನ ಕ್ರಮದಿಂದಾಗಿ ಸಮಸ್ಯೆ ಉಂಟಾಗುತ್ತಿದೆ.

ರಾಜ್ಯದ ಎಲ್ಲಾ ಕಡೆಗಳಲ್ಲಿ ಕೊರೊನಾ ಸೋಂಕಿನ ಪ್ರಮಾಣ ಕಡಿಮೆಯಾಗಿದ್ದು, ಕೊಡಗು, ಹಾಸನ ಜಿಲ್ಲೆಗಳನ್ನು ಹೊರತುಪಡಿಸಿದರೆ ಉಳಿದೆಲ್ಲಾ ಜಿಲ್ಲೆಗಳು ಅನ್‌ಲಾಕ್ ಆಗಿವೆ. ಜಿಲ್ಲೆಯ ೬ ಗಡಿಗಳು ಓಪನ್ ಇರುವ ಹಿನ್ನೆಲೆಯಲ್ಲಿ ಪ್ರವಾಸಿಗರು ಮತ್ತು ಸಾರ್ವಜನಿಕರು ಯಾವುದೇ ಪ್ರಮಾಣ ಪತ್ರ ಇಲ್ಲದಿದ್ದರೂ ರಾಜಾರೋಷವಾಗಿ ಜಿಲ್ಲೆಗೆ ಪ್ರವೇಶಿಸುತ್ತಿದ್ದ ಕಾರಣ ದಿನದಿಂದ ದಿನಕ್ಕೆ ಸೋಂಕು ಹೆಚ್ಚಾಗುತ್ತಿತ್ತು. ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ ಬೋಪಯ್ಯ ಹಾಗೂ ತಹಶೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ ಎಷ್ಟೇ ಪ್ರಯತ್ನ ಪಟ್ಟರೂ ಪಾಸಿಟಿವ್ ದರ ಕಡಿಮೆಯಾಗುತ್ತಿರಲಿಲ್ಲ. ಚೆಕ್‌ಪೋಸ್ಟ್ನಲ್ಲಿದ್ದ ಕೆಲವು ಅಧಿಕಾರಿಗಳ ನಿರ್ಲಕ್ಷö್ಯದಿಂದ ಪ್ರಮಾಣ ಪತ್ರ ಇಲ್ಲದವರನ್ನು ಕೂಡ ಜಿಲ್ಲೆಯೊಳಗೆ ಪ್ರವೇಶಕ್ಕೆ ಅನುಮತಿ ನೀಡುತ್ತಿದ್ದುದರಿಂದ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿರಲಿಲ್ಲ. ಹಾಗಾಗಿ ಇದೀಗ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗಿದೆ.

-ಪಿ.ಪಿ.ಸಿ.